ಅನುವಾದ : ಚಂದ್ರಕಾಂತ ಪೋಕಳೆ
ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂಗಾಗಿ ನಗರ-ಹಳ್ಳಿಗಳೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಆದರೂ ಮಳೆಯನ್ನೇ ಅವಲಂಬಿಸಿಕೊಂಡಿರುವ ಚಿಕ್ಕ ರೈತರ ಬದುಕಿನಲ್ಲಿ ಅಂಥ ಬದಲಾವಣೆ ಏನೂ ಆಗಲಿಲ್ಲ. ಅವನ ಆಶೆ-ಆಕಾಂಕ್ಷೆಗಳೆಲ್ಲ ಇಂದಿಗೂ ಮಳೆಯನ್ನೂ, ಫಸಲನ್ನೂ ಅವಲಂಬಿಸಿದೆ. ಹೆಂಡತಿ ಮಕ್ಕಳ ಹೊಟ್ಟೆಗೆ, ಬಟ್ಟೆಗೆ, ಶಿಕ್ಷಣಕ್ಕೆ ನಾಲ್ಕು ದುಡ್ಡು ಉಳಿಯಲಿ ಎನ್ನುವುದೇ ಅವನ ಕನಸು. ಆದರೆ ಕಳೆದ ಕೆಲವು ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆಯೇ ಬದಲಾಗಿದೆ. ಹವಾಮಾನ, ಋಉತುವಾನ ಎಲ್ಲವೂ ಲಯ ತಪ್ಪಿದೆ. ಅದರ ಪರಿಣಾಮ ಕೃಷಿಯ ಮೇಲಾಗುತ್ತಿದೆ. ನಿಸರ್ಗದ ಪ್ರಹಾರದಿಂದ ರೈತ ಹತಬಲನಾಗುತ್ತಿದ್ದಾನೆ. ಮನೆ-ಹೊಲಕ್ಕಾಗಿ ಸಾಲ ಮಾಡಬೇಕಾಗುತ್ತದೆ. ಸಾಹುಕಾರರಿಂದ, ಸರಕಾರದಿಂದ ಪಡೆದ ಸಾಲವೇ ಉರುಳಾಗಿ ಹೊಲ ಕಳಕೊಳ್ಳುವ ಸ್ಥತಿ ಬಂದು ರೈತನ ಕನಸು ನುಚ್ಚು ನೂರಾಗುತ್ತದೆ. ಮನುಷ್ಯ ಜೀವನದ ಅನಿಶ್ಚಿತತೆ, ಹತಬಲವನ್ನು ಈ ಕೃತಿಯಲ್ಲಿ ಹಿಡಿದಿಡಲಾಗಿದೆ… ಒಂದು ರೈತ ಕುಟುಂಬದ ಮೇಲೆ ಬೀಳುವ ಆಘಾತ, ಕುಗ್ಗುವ ಆಯುಷ್ಯ, ಉಧ್ವಸ್ತಗೊಳ್ಳುವ ಕನಸು, ಇದೆಲ್ಲವನ್ನೂ ನಮ್ಮ ಮರಾಠೀ ಲೇಖಕ ಆನಂದ ವಿಂಗಕರ ತುಂಬ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಆತ್ಮಹತ್ಯೆಯು ಕಾದಂಬರಿಯ ಕೇಂದ್ರಬಿಂದುವಾದರೂ ಮಾನವೀಯತೆ, ಬದುಕಿನ ವಿವಿಧ ಮಗ್ಗಲುಗಳು ಸೂಚ್ಯವಾಗಿ ತೆರೆದುಕೊಳ್ಳುತ್ತವೆ.
ಮೂಲ ಕೃತಿಯ ಲೇಖಕ ಶ್ರೀ ಆನಂದ ವಿಂಗಕರ ಮರಾಠಿಯಲ್ಲಿ ಏಕಕಾಲಕ್ಕೆ ಏಳು ಪ್ರಶಸ್ತಿಗಳನ್ನು ಪಡೆದು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದವರು. ಕೃತಿಯ ಒಳಹೊಕ್ಕು, ಅದರ ಸಾರವನ್ನು ಗ್ರಹಿಸಿ ಕನ್ನಡಕ್ಕೆ ಚೊಕ್ಕವಾಗಿ ಅನುವಾದಿಸಿದವರು ಪ್ರೊ|| ಚಂದ್ರಕಾಂತ ಪೋಕಳೆ. ಅನುವಾದಕರ ಅನೇಕ ಮರಾಠಿ ಅನುವಾದಗಳನ್ನು ನವಕರ್ನಾಟಕ ಪ್ರಕಟಿಸಿದ್ದು ಅವು ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ.
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001
ದೂರವಾಣಿ : 080-30578020/22 ಫ್ಯಾಕ್ಸ್ : 080-30578023
ಇಮೇಲ್ : navakarnataka@gmail.com
ಬೆಲೆ : ರೂ. 90





0 Comments