ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೀದಿದೀಪದ ರಾತ್ರಿ ಬೆಳಕನ್ನು ನಾನೀಗ ಮಂಕರಿಯೊಳಗೆ ತುಂಬಿಕೊಳ್ಳುತ್ತಿದ್ದೇನೆ..

ಟಿ ಕೆ ದಯಾನಂದ


ತಿದಿಕುಲುಮೆಯ ಒಲೆಯೊಳಗೆ ನಾಲಿಗೆಯನ್ನಾದರೂ ಚೂರು ಸುಡಬೇಕು,
ಇಲ್ಲೇ ಎಲ್ಲೋ ನಡೆದಾಡಲು ಕಲಿಯಲು ಹೋಗಿವೆ ನವಿಲುಮರಿಗಳು,
ಎದೆಯ ಮೇಲೆ ದೊಂದಿಯಿಟ್ಟುಕೊಂಡು ಒಂದಿಷ್ಟು ಬೆಳಕನ್ನಾದರೂ ಸೋಸಿಕೊಳ್ಳಬೇಕು,
ಬಲೆಗೆ ಬಿದ್ದ ಮೀನುಗಳನ್ನು ದೋಣಿಗೆಳೆಯುವರಿಲ್ಲವಾಗಿ,
ಸೆರೆಗೊಂಡ ಮೀನುಗಳು ಬಲೆಯ ತೂತುಗಳನ್ನು ಎಣಿಸುತ್ತಿವೆ,
ಮಾರವಾಡಿಯ ಅಂಗಡಿಯೊಳಗೆ ಎಕ್ಕದೆಲೆ ನೋಡುವಾಸೆ,
ಕಣ್ಣುಕುಕ್ಕುವ ಲೋಹಕ್ಕೆ ಹೆಣದವಾಸನೆ,
ಕಳೆದುಕೊಳ್ಳಲೆಂದೇ ಅಂಗೈಯೊಳಗೆ ಸಾಸಿವೆಯಿಟ್ಟು ಕೊಂಡೆ,
ಸಾಸಿವೆಗೆ ಬೇರು ಮೊಳೆತು ಕೈಯಲ್ಲೇ ಗಿಡವಾಗಿದೆ,
ಹೊಗೆ ಕಂಡಷ್ಟು ಸುಲಭಕ್ಕೆ ಉಸಿರೇಕೆ ಕಾಣುವುದಿಲ್ಲ,
ಯಾರಾದರೂ ಉಸಿರಿಗಿಷ್ಟು ಬಣ್ಣ ಬಳಿಯಬೇಕಿದೆ,
ಕೊಲೆಗಡುಕರ ನೆತ್ತಿಗೆ ಎಣ್ಣೆ ತಟ್ಟುವವರು..
ಆಲದಮರದ ಬೀಜದ ಘಮಕ್ಕೆ ಹೆಸರು ಹುಡುಕುತ್ತಿದ್ದಾರೆ,
ಮಿಂಚುಹುಳದ ಬೆಳಕಿನಂಗಡಿಯೊಳಗೆ ಯಾರೂ ಗಿರಾಕಿಗಳಿಲ್ಲ,
ಬೀದಿದೀಪದ ರಾತ್ರಿ ಬೆಳಕನ್ನು ನಾನೀಗ ಮಂಕರಿಯೊಳಗೆ ತುಂಬಿಕೊಳ್ಳುತ್ತಿದ್ದೇನೆ.
 

‍ಲೇಖಕರು G

22 August, 2014

2 Comments

  1. ಲಕ್ಷ್ಮೀಕಾಂತ ಇಟ್ನಾಳ

    ಕ್ಷೀಷೆ ಇಲ್ಲದ ತಾಜಾ ಕವಿತೆ…

  2. hema

    awesome

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading