ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೀಜವೆಂದರೆ..

ಮಲ್ಲಿಕಾರ್ಜುನ ಹೊಸಪಾಳ್ಯ

-೧-

ಬೀಜವೆಂದರೆ

ಮೇಲೆ ತೆಳು ಸಿಪ್ಪೆ

ಗಟ್ಟಿ ಹೊರ ಕವಚ

ಒಳಗಿಷ್ಟು ಭಂಡಾರ

-ವಷ್ಟೇ ಅಲ್ಲ

-೨-

ಬೀಜವೆಂದರೆ

ಸೃಷ್ಟಿ

ನೇಗಿಲ ಗೆರೆಯಲ್ಲಿ ಬಿದ್ದು

ಹಲುವೆ ಹೊಡೆದಾಗ ನೆಲದಲ್ಲುದುಗಿ

ಮಣ್ಣ ತನುವಿಗೆ ಮೊಳಕೆಯಾಗಿ

ನೆಲ ಸೀಳಿ ಮೇಲೆದ್ದು ಚಿಗುರಿ

ಎರಡೆಲೆ ಇಕ್ಕಿ

ಆಳಕ್ಕೆ ಬೇರಿಳಿಸಿ

ಎದೆಯುದ್ದ ಬೆಳೆದು

ಹೂ ಕಾಯ್ದು ವಡೆಯಾಗಿ

ಹಾಲ್ದೆನೆ ತುಂಬಿ ಕಾಳು ಕಟ್ಟಿ

ಒಂದು ಹತ್ತಾಗಿ ಹತ್ತು ನೂರಾಗಿ

ನೂರು ಸಾವಿರವಾಗುವ

ಅಚ್ಚರಿ

-೩-

ಬೀಜವೆಂದರೆ

ಭರವಸೆ

ಬಿದಿರ ಜಾಗಾರಕ್ಕೆ ಹಸಿ

ಸಗಣಿ ತುಂಬಿ ನವ

ಧಾನ್ಯ ಬಿತ್ತಿ

ದಿನವೊಂಭತ್ತು ಕಾಲ ನೀರೆರೆದು ನಿಗಾ ಮಾಡಿ

ಉಕ್ಕಿದ ಮೊಳಕೆಯ ಲೆಕ್ಕ ಹಿಡಿದು

ಆ ಲೆಕ್ಕಕ್ಕೆ ಬದುಕಿನ ಲೆಕ್ಕವ ಕೂಡಿ

ಕಳೆಯುವ ಕಾಗುಣಿತ

-೪-

ಬೀಜವೆಂದರೆ

ತಲೆಮಾರಿನಿಂದ ತಲೆಮಾರಿಗೆ

ಕೈಬದಲಾಗುವ ಸಂಪತ್ತು

ಹೆಣ್ಣಿಗೆ ತವರ ನೆನಪು

ಅಜ್ಜಿಗೆ ಇಡುಗಂಟು

‍ಲೇಖಕರು avadhi

27 June, 2019

4 Comments

  1. T S SHRAVANA KUMARI

    ತುಂಬಾ ಚೆನ್ನಾಗಿದೆ

    • Mallikarjuna Hosapalya

      ಧನ್ಯವಾದಗಳು

  2. Narendra

    nice.

    • Mallikarjuna Hosapalya

      ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading