ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೀಚ್ ರೆಸಾರ್ಟ್ ನ ಬಾಲ್ಕನಿಯಿಂದ..

ಅಭಿಲಾಷಾ ಎಸ್.

ಅವಡುಗಚ್ಚಿ ,ಉಸಿರ ಬಿಗಿಹಿಡಿದು

ನರನರವ ಸೆಟೆದು ಬಿಮ್ಮನಿರುವ ಬಾನು

ಇಡಿಕಿರಿದ ಮೋಡಗಳ ಚಡಿಯೆಡೆಯಲ್ಲೆ

ನುಸುಳಿ ಬಳುಕುವ ಸೂರ್ಯ ಕೋಲು

ಮಬ್ಬು ಹರಿದೆಸೆವ ಸೊಕ್ಕಿನಲಿ ಎಗ್ಗಿಲ್ಲದೆ

ಮರಗಿಡಗಳ ಮೈ ಮುರಿದು ನುಗ್ಗಿ ನೊಸೆವ ಬಿರುಗಾಳಿ

ಗುಡುಗು ಸಿಡಿಲಿನಭ್ರಭಡಿತೆಗೆ

ಅಲೆಗಳಾಂಗಿಕದಿ ಧಿಗುಣಿಸಿ ಕುಣಿದು

ರಂಗಸ್ಥಳವ ಪುಡಿಗಟ್ಟುತಿರುವ

ಕಣ್ಣಗಲದಗಾಧ ರಾಶಿಕಡಲು

 

ದೂರ ದ್ವೀಪದಾಗಸದಿಂದ ಹೊರಟ

ಮಳೆಯ ಮೆರವಣಿಗೆ

ಬೀಸುಗಾಳಿಯ ಬೆಂಬತ್ತಿ

ದಿವದುದ್ದ ಆಕ್ರಮಿಸಿ ಬುವಿಗಪ್ಪಳಿಸಿ

ಜಪ್ಪಿ‌  ಬಾನ್ ಸಾಗರವನಪ್ಪಿ

ಎರಡೊಂದಾದ ವಿಸ್ಮಯ!

ಕಡಲು ಮಳೆಯೊಳಗೊ

ಮಳೆಯು ಕಡಲಿನ ಒಳಗೊ

ನಾ ನಿನಗೆ ನೀ ಎನಗೆ

ದ್ವೈತ ಅದ್ವೈತ ಜುಗಲ್ಬಂದಿ

ಸುರಿ ಸುರಿದು ಬರಿದಾದ ಬಟ್ಟ ಬಾನು

ನಿಶ್ಶಬ್ದ ನಿಶ್ಚಲ ನಿರುಮ್ಮಳ

ಕುಡಿಕುಡಿದು ವಿಜೃಂಭಿಸುವ ಕಡಲು

ಕಡು ಶಕ್ತಿ ಅಪರಿಮಿತ ಅನವರತ

 

ಇಲ್ಲಿ..

ರೆಸಾರ್ಟ್ ನ ಕಾಂಕ್ರೀಟು ಬಾಲ್ಕನಿಯಳತೆಯೊಳಗೆ

ಅಬ್ಬರದ ಮಳೆ ಮಧ್ಯಾಹ್ನಕೆ

ಗಾಳ ಹಾಕಿ ಕಾದಿರುವ ಬೆರಗುಗಣ್ಣುಗಳು!

 

ಪಂಚ ದ್ವಾರಗಳ ಸೀಳಿ

ಒಳ ಹೊಕ್ಕ ಕಡಲು

ಎದೆಯೊಳಗೆ

ನಿಶ್ಶಬ್ದ‌ ಹೊದ್ದು ಮಲಗಿದ

ಜಡ  ಸಾಗರದಲಿ ಎದ್ದ ಸುನಾಮಿ

ಉಕ್ಕಿ ಸೊಕ್ಕಿ ದಡಗಳ ನುಂಗಿ

ಅಲ್ಲೋಲ ಕಲ್ಲೋಲ

ಹಿಸಿದ ತಡೆಗೋಡೆ !

ಆಲಯವೆ ಬಯಲು

ಗರ್ಭಕ್ಕಂಟಿದ ಬಯಕೆಗಳು

ಪುಟಿದೆದ್ದು ದಿಕ್ಕಾಪಾಲು!

 

ಹೊತ್ತು ಕಂತಿತು

ಬಾಲ್ಕನಿಯ ಬಾಗಿಲು ಮುಚ್ಚಿತು

ಕಡಲಬ್ಬರ ತಗ್ಗಿತು

 

ಆಳದಿಂದೆದ್ದು ಹೊರ ಬಿದ್ದು

ದಡದುದ್ದಕೆ ವಿಲಿವಿಲಿಗುಡುವ

ಜಲಚರಿಗಳು

ಕಾಯುತ್ತಲೇ ಇರುವ

ಒಡೆದ  ಶಂಖ ಚಿಪ್ಪುಗಳು

‍ಲೇಖಕರು avadhi

10 February, 2020

7 Comments

  1. Sudha Hegde

    ವಾವ್…. ಗೆಳತಿ ಅಭಿಲಾಷಾ ಅವಧಿಯಲ್ಲಿ…
    Thank u avadhi

    • poornima suresh

      ಸುಂದರ ಕವಿತೆ

  2. Parimala rao

    Nice poem Parimala rao

  3. Ashwini

    Super mam…

  4. ವನಿತ ಮಾರ್ಟಿಸ್, ಬಾರ್ಕೂರ್

    ಚೆನ್ನಾಗಿದೆ Madam.
    ಬಾಲ್ಕನಿಯಿಂದ ಪ್ರಕೃತಿಯಾಳಕ್ಕೆ…..
    ಸುಂದರ ವರ್ಣನೆ.

  5. Shreelatha Rao

    Beautiful poem abhilasha. Gives the feeling of sitting near the window and experiencing the heavy rains oneself.

  6. RKHudgi

    Philosophially thrilling and thrillingly philosophical vision of the nature and its mysterious phenomenon as conceived by the poet’s Abhilasha!!!!!!!!! Raahu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading