ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ವಿ ಭಾರತಿ ಬರೆದ ಹನಿಗವನಗಳು

– ಬಿ ವಿ ಭಾರತಿ

ಅವತ್ತು ನಿನ್ನ

ತಡಕಿದಲ್ಲೆಲ್ಲ

ಪರಿಮಳದ

ಕವಿತೆಗಳಿದ್ದವಲ್ಲ …

ಅವು ಮಾಯವಾಗಿದ್ದೆಲ್ಲಿ?

**

ಕನಸುಗಳ

ರತ್ನಗ೦ಬಳಿಯನ್ನ

ಹೆಣೆಹೆಣೆದು

ಹೊದ್ದು ಮಲಗಲು ಹೋದರೆ

ನನ್ನ ಬೆರಳೂ

… ಸೇರಿಸಿ ನೇಯ್ದು ಬಿಟ್ಟಿದ್ದೆ !

ಅದಕ್ಕೆ ನೋಡು

ಬಿಡಿಸಿಕೊಳ್ಳಲಾಗುತ್ತಿಲ್ಲ…

**

ವಿಷದಂತೆ ಕಹಿ

ಅನ್ನುವ ಮುನ್ನ

ನೀವು ಕೇಳಬೇಕು

ಅವನ ಮಾತು ..

ಅವ ಅದ

… ಆಡಿದ ಬಳಿಕ

ನನ್ನೆದೆಯೆಲ್ಲ

ನೀಲ ನೀಲ …

]]>

‍ಲೇಖಕರು G

5 May, 2012

11 Comments

  1. D.RAVI VARMA

    ಮೇಡಂ,ತುಂಬಾ ತುಂಬಾ ಚೆನ್ನಾಗಿದೆ,ಅಸ್ಟೇ ಅರ್ಥಪುರ್ಣವಾಗಿದೆ ಕೂಡ
    ರವಿ ವರ್ಮ ಹೊಸಪೇಟೆ

  2. lalitha siddabasavaiah

    ಭಾರತಿಯವರೆ , ಪುಟ್ಟ ಪದ್ಯಗಳು ತುಂಬಾ ಮುದ್ದಾಗಿವೆ.

    • ಭಾರತಿ ಬಿ ವಿ

      ಲಲಿತಾ ಮೇಡಂ ಮೆಚ್ಚಿದಾರಾ! ಛೇ ಮಿಸ್ ಆಗಿದ್ದು ಹೇಗೆ ಇದು!

  3. -ರವಿ ಮುರ್ನಾಡು, ಕ್ಯಾಮರೂನ್.

    ತಡಕಾಡಿದಾಗ ಸಿಕ್ಕಿದ್ದೆಲ್ಲ ಅಪ್ಪಟ ಭಾವ ಪ್ರತಿಮೆಗಳು…! ಓದಿದಾಗ ಮನ ತುಂಬಾ ತಡಕಾಡಿತು. ಇನ್ನಷ್ಟು ಉಣಬಡಿಸಿ ಮಾನ್ಯ ಭಾರತಿಯವರೇ.

  4. sandhya

    ಭಾರತಿ ಸುಳಿದು ಮಾಯವಾಗುವ ಮಿ೦ಚಿನ೦ತಹ ಕವನಗಳು.. ಓದಿ ಮನಸ್ಸು ನೀಲ ನೀಲ..

  5. RJ

    ಕನಸುಗಳ
    ರತ್ನಗ೦ಬಳಿಯನ್ನ
    ಹೆಣೆಹೆಣೆದು
    ಹೊದ್ದು ಮಲಗಲು ಹೋದರೆ
    ನನ್ನ ಬೆರಳೂ
    … ಸೇರಿಸಿ ನೇಯ್ದು ಬಿಟ್ಟಿದ್ದೆ !
    ಅದಕ್ಕೆ ನೋಡು
    ಬಿಡಿಸಿಕೊಳ್ಳಲಾಗುತ್ತಿಲ್ಲ…
    ** aha..Sure shot! 🙂

  6. sunil

    manassu bhinn ennuva saalugalu bhaarathi.

  7. savitri

    Nice honies Madam:-)

  8. Jayanth Nadig

    nice one 🙂

  9. shubha

    your a very multi tallent

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading