ಬಿ ಎನ್ ಶ್ರೀರಾಮ್ ಸೇರಿದಂತೆ ನಾಲ್ವರಿಗೆ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ…

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಾದ ೨೦೨೨ನೇ ಸಾಲಿನ ‘ಸಾಹಿತ್ಯ ರತ್ನ-೨೦೨೨’, ‘ಯುವ ಸಾಹಿತ್ಯ ರತ್ನ-೨೦೨೨’, ‘ಪುಸ್ತಕ ರತ್ನ-೨೦೨೨’ ಮತ್ತು ‘ಮುದ್ರಣ ರತ್ನ-೨೦೨೨’ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಪ್ರಶಸ್ತಿ ಪುರಸ್ಕೃತರು.

೧. ‘ಸಾಹಿತ್ಯ ರತ್ನ-೨೦೨೨’ : ಡಾ. ಪಿ.ಎಸ್. ಶಂಕರ್, ಲೇಖಕರು
ಕೃತಿ : ‘ವೈದ್ಯ ನಿನಗೆ ನಮೋ’ ನಗದು ರೂ. ೧೦,೦೦೦/- ಸ್ಮರಣಿಕೆ, ಪ್ರಶಸ್ತಿ ಪತ್ರ

೨. ‘ಯುವ ಸಾಹಿತ್ಯ ರತ್ನ-೨೦೨೨’ : ಶ್ರೀ ಕೌಶಿಕ್ ಕೂಡುರಸ್ತೆ, ಲೇಖಕರು
ಕೃತಿ :’ಒಂದು ಕೋಪಿಯ ಕಥೆ’ ನಗದು ರೂ. ೧೦,೦೦೦/- ಸ್ಮರಣಿಕೆ, ಪ್ರಶಸ್ತಿ ಪತ್ರ

೩. ‘ಪುಸ್ತಕ ರತ್ನ-೨೦೨೨’ : ಪ್ರೊ|| ಬಿ.ಎನ್. ಶ್ರೀರಾಮ್
ಸಂಸ್ಥೆ:’ಪುಸ್ತಕ ಪ್ರಕಾಶನ, ಮೈಸೂರು’ ನಗದು ರೂ. ೧೦,೦೦೦/- ಸ್ಮರಣಿಕೆ, ಪ್ರಶಸ್ತಿ ಪತ್ರ

೪. ‘ಮುದ್ರಣ ರತ್ನ-೨೦೨೨’ : ಶ್ರೀ ಜಿ.ಹೆಚ್. ಕೃಷ್ಣಮೂರ್ತಿ
ಸಂಸ್ಥೆ: ‘ಮೈಸೂರು ಪ್ರಿಂಟಿ೦ಗ್ ಅಂಡ್ ಪಬ್ಲಿಷಿಂಗ್ ಹೌಸ್’ ನಗದು ರೂ. ೧೦,೦೦೦/- ಸ್ಮರಣಿಕೆ, ಪ್ರಶಸ್ತಿ ಪತ್ರ

೨೦೨೩ರ ಜೂನ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಡಾ. ಪಿ.ಎಸ್. ಶಂಕರ್, ಲೇಖಕರು
‘ಸಾಹಿತ್ಯ ರತ್ನ-೨೦೨೨’
ಕೃತಿ : ವೈದ್ಯ ನಿನಗೆ ನಮೋ

ಕಳೆದ ೬೦ ವರ್ಷಗಳಿಂದಲೂ ವೈದ್ಯಶಾಸ್ತçವನ್ನು ಕಲಿಸುತ್ತಿರುವ ನಾಡೋಜ ಡಾ. ಪಿ.ಎಸ್. ಶಂಕರ್ ಅವರು ಇಂಗ್ಲಿಷ್ ಮತ್ತು ಕನ್ನಡದಲ್ಲಿ ೨೪೦ ಪುಸ್ತಕಗಳನ್ನು ರಚಿಸಿದ್ದಾರೆ ಮತ್ತು ಸಂಪಾದಿಸಿದ್ದಾರೆ. ಇಂಗ್ಲಿಷ್‌ನಲ್ಲಿ ವೈದ್ಯ ಪದಕೋಶವನ್ನು, ಕನ್ನಡದಲ್ಲಿ ವೈದ್ಯ ವಿಶ್ವಕೋಶವನ್ನು ರಚಿಸಿದ ಹೆಗ್ಗಳಿಕೆ ಅವರದು. ಹಲವಾರು ವಿಶ್ವವಿದ್ಯಾಲಯಗಳಿಂದ, ವಿಜ್ಞಾನ ಪರಿಷತ್ತು, ಸಾಹಿತ್ಯ ಅಕಾಡೆಮಿ ಹಾಗೂ ಸಾಹಿತ್ಯ ಪರಿಷತ್ತಿನಿಂದಲೂ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ನ್ಯಾಷನಲ್ ಚೆಸ್ಟ್ ಇನ್‌ಸ್ಟಿಟ್ಯೂಟ್‌ನಿಂದ ಅತ್ಯುತ್ತಮ ಎದೆರೋಗ ತಜ್ಞ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿ, ಡಾ. ಬಿ.ಸಿ. ರಾಯ್ ರಾಷ್ಟ್ರೀಯ ಸಮರ್ಥ ಶಿಕ್ಷಕ, ಭಾರತ ಸರಿಕಾರದ ಉತ್ತಮ ವಿಜ್ಞಾನ ಸಂವಹನಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಸದ್ಯ ಗುಲ್ಬರ್ಗಾದಲ್ಲಿ ವಾಸವಾಗಿದ್ದಾರೆ. ಇವರಿಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರತಿಷ್ಠಿತ ೨೦೨೨ನೇ ಸಾಲಿನ ‘ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಶ್ರೀ ಕೌಶಿಕ್ ಕೂಡುರಸ್ತೆ
‘ಯುವ ಸಾಹಿತ್ಯ ರತ್ನ-೨೦೨೨’
ಕೃತಿ: ಒಂದು ಕೋಪಿಯ ಕಥೆ

ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದ ಶ್ರೀಯುತ ಕೌಶಿಕ್ ಕೂಡುರಸ್ತೆಯವರು ಏರೋನಾಟಿಕಲ್ ಇಂಜಿನಿಯರ್ ಪದವಿ ಪಡೆದಿರುವ ಇವರು ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪ್ರೇಮ ಕಾದಂಬರಿ, ಕವನ ಸಂಕಲನ ಹಾಗೂ ಪತ್ತೇದಾರಿ ಕಾದಂಬರಿಗಳನ್ನು ರಚಿಸಿ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಕಿರು ಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ. ಈ ಯುವ ಪ್ರತಿಭೆಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರತಿಷ್ಠಿತ ೨೦೨೨ನೇ ಸಾಲಿನ ‘ಯುವ ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪ್ರೊ|| ಬಿ.ಎನ್. ಶ್ರೀರಾಮ್, ಪ್ರಕಾಶಕರು
‘ಪುಸ್ತಕ ರತ್ನ-೨೦೨೨’
ಸಂಸ್ಥೆ: ಪುಸ್ತಕ ಪ್ರಕಾಶನ, ಮೈಸೂರು

ಬೆಂಗಳೂರಿನ ಉತ್ತರ ತಾಲ್ಲೂಕಿನ ಬ್ಯಾತ ಎಂಬ ಗ್ರಾಮದಲ್ಲಿ ಜನಿಸಿದ ಇವರು ಬೆಂಗಳೂರು ಮತ್ತು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಂ.ಎ (ಇಂಗ್ಲಿಷ್) ವಿದ್ಯಾಭ್ಯಾಸ ಮುಗಿಸಿ, ಅಧ್ಯಾಪಕರಾಗಿ ಶೃಂಗೇರಿ ಹಾಗೂ ಮೈಸೂರಿನ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ, ಮೈಸೂರಿನ ಡಿ. ಬನುಮಯ್ಯ ಕಾಲೇಜ್‌ನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದುತ್ತಾರೆ. ನಂತರ ಶ್ರೀಯುತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಹಾಗೂ ಶ್ರೀಯುತ ರಾಘವೇಂದ್ರ ಅವರೊಂದಿಗೆ ಸೇರಿ ‘ಪುಸ್ತಕ ಪ್ರಕಾಶನ’ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ನೂರಾರು ಗುಣಮಟ್ಟದ ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸುತ್ತಾ ಮುನ್ನಡೆದಿದ್ದಾರೆ. ಇವರಿಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರತಿಷ್ಠಿತ ೨೦೨೨ನೇ ಸಾಲಿನ ‘ಪುಸ್ತಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಶ್ರೀ ಜಿ.ಹೆಚ್. ಕೃಷ್ಣಮೂರ್ತಿ, ಮುದ್ರಕರು
‘ಮುದ್ರಣ ರತ್ನ-೨೦೨೨’

ಸಂಸ್ಥೆ: ಮೈಸೂರು ಪ್ರಿಂಟಿ೦ಗ್ ಅಂಡ್ ಪಬ್ಲಿಷಿಂಗ್ ಹೌಸ್
ಸ್ವಾತಂತ್ರೋತ್ಸವದ ಪ್ರಾರಂಭದ ದಿನಗಳಲ್ಲಿ ಮುದ್ರಣ ಕ್ಷೇತ್ರದಲ್ಲಿ ಉತ್ಕೃಷ್ಟತೆಗೆ ಪರ್ಯಾಯ ನಾಮ ಎಂದರೆ ಅದು ‘ಮೈಸೂರು ಪ್ರಿಂಟಿ೦ಗ್ ಅಂಡ್ ಪಬ್ಲಿಷಿಂಗ್ ಹೌಸ್’ ಮುದ್ರಣಾಲಯ, ಶ್ರೀ ಜಿ. ಹನುಮಂತರಾಯರ ಮಗ ಶ್ರೀ ಜಿ.ಹೆಚ್. ರಾಮರಾಯರು ೧೯೪೪ರಲ್ಲಿ ಪ್ರಾರಂಭಿಸಿ ಅನೇಕ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣರದರು. ಅಂದಿನ ದಿನಗಳಲ್ಲಿ ಮುದ್ರಣಾಲಯವನ್ನು ಬೆಳೆಸುವುದು ಕಷ್ಟಸಾಧ್ಯವಾಗಿತ್ತು. ಅಂತಹ ಸಮಯದಲ್ಲಿ ಬಂಡಿಯನ್ನು ಮುನ್ನಡೆಸಲು ಅವರೊಂದಿಗೆ ನೊಗಕ್ಕೆ ಹೆಗಲು ಕೊಟ್ಟವರು ಅವರ ತಮ್ಮ ಶ್ರೀ ಜಿ.ಹೆಚ್. ಕೃಷ್ಣಮೂರ್ತಿಯವರು. ಅವರ ಪರಿಶ್ರಮದ ಫಲದಿಂದಾಗಿ ಮುದ್ರಣಾಲಯ ಉನ್ನತ ಸ್ಥಾನಕ್ಕೆರಿತು. ಆಗ ನಾಡಿನ ಸಾಹಿತಿಗಳು, ಪ್ರಕಾಶಕರು ಸರತಿ ಸಾಲಿನಲ್ಲಿ ನಿಲ್ಲುವಷ್ಟರ ಮಟ್ಟಿಗೆ ಮುದ್ರಣಾಲಯ ಹೆಸರು ಮಾಡಿತು. ಅಷ್ಟಕ್ಕೆ ಸೀಮಿತವಾಗದೇ ಸಾಹಿತಿಗಳು, ಪ್ರಕಾಶಕರು, ಹೋರಾಟಗಾರರು ಮುದ್ರಣಾಲಯದಲ್ಲಿ ಸೇರಿ ಪ್ರಸ್ತುತ ವಿಷಯಗಳ ಬಗ್ಗೆ ಚರ್ಚಿಸುವ ಸಾಹಿತ್ಯ-ಸಾಂಸ್ಕೃತಿಕ ಅಡ್ಡೆಯಾಗಿತ್ತು. ವಯೋಸಹಜವಾಗಿ ೯೦ರ ಹರೆಯದಲ್ಲಿ ಶ್ರೀ ಜಿ.ಹೆಚ್. ಕೃಷ್ಣಮೂರ್ತಿಯವರು ವಿಶ್ರಾಂತಿ, ಜೀವನಕ್ಕೆ ತೆರಳುತ್ತಾರೆ. ನಂತರ ಅವರ ಪುತ್ರ ಶ್ರೀ ಜಿ.ಆರ್. ನಾಗೇಂದ್ರ ‘ಕರ್ನಾಟಕ ಪ್ರೆಸ್’ ಹೆಸರಿನಲ್ಲಿ ಮುಂದುವರೆಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಶಿಫಾರಸ್ಸಿನಂತೆ- ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರತಿಷ್ಠಿತ ೨೦೨೨ನೇ ಸಾಲಿನ ‘ಮುದ್ರಣ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.


‍ಲೇಖಕರು avadhi

May 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: