ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಬಷೀರ್ ಕವಿತೆ: ಬರೇ ಹಸಿ ಸೌದೆ

ಅಮ್ಮನ ಕೊಳಲು ಗುಜರಿ ಅಂಗಡಿ ಮೊನ್ನೆ ಕೊಳಲು ವಾದನ ಕಾರ್ಯಕ್ರಮಕ್ಕೆ ಹೋಗಿದ್ದೆ…. ತನ್ನ ಉಸಿರಿಂದ ನಾದವನ್ನು ಹೊರಹೊಮ್ಮಿಸುವ ಆತನ ಯತ್ನವ ಕಂಡು ನನಗೆ ನನ್ನ ತಾಯಿಯ ನೆನಪಾಯಿತು ಅಡುಗೆ ಮನೆಯ ಒಲೆಯ ಮುಂದೆ ಈ ಬಿದಿರಿನ ಕೊಳವೆಯಂತಹದೆ ಕಬ್ಬಿಣದ ಕೊಳವೆಯನ್ನು ಆಕೆ ಊದುತ್ತಿದ್ದರೆ ನಾದವೊಂದು ಹೊರಹೊಮ್ಮುತಿತ್ತು ಆಕೆಯ ಬೆನ್ನಿಗೆ ಆತುಕೊಂಡು ನಾನದನ್ನು ಸವಿಯುತ್ತಿದ್ದೆ   ಮಲಗಿದ ಹಾವು ಥಕ್ಕನೆ ಹೆಡೆ ಬಿಚ್ಚಿದಂತೆ ಆ ನಾದಕ್ಕೆ ಹಸಿಸೌದೆ ಧಗ್ಗನೆ ಹೊತ್ತಿಕೊಳ್ಳುತ್ತಿತ್ತು   ಕಬ್ಬಿಣದ ಕೊಳಲ ಊದಿ ನನ್ನೆದೆಯಲ್ಲಿ ಬೆಂಕಿ ಹಚ್ಚಿದ ನನ್ನಮ್ಮನ ನೆನಪಿನ ನಾದದ ಮುಂದೆ ಈ ವಿದ್ವಾಂಸನ ಕೊಳಲು ಬರೇ ಹಸಿ ಸೌದೆ  ]]>

‍ಲೇಖಕರು G

6 February, 2012

5 Comments

  1. Manjula Narayanarao

    kolalu mattu ooodugoluveya sameekarana chennagide.

  2. basu

    kavite chennagide.

  3. malathi S

    wow tumbaane chennagide!!!
    malathi S

  4. anupavanje

    ತು೦ಬಾ ಇಷ್ಟವಾಯ್ತು….

  5. Sukhesh M.G.

    ತುಂಬಾ ಚೆನ್ನಾಗಿದೆ ಬಷೀರ್ ಸರ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading