ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಸಿ ಉಸಿರಿನ ಸಜೆ ಮಾತ್ರ ಮಡಿಲಲ್ಲಿ – ಕಾವೇರಿ ಬರೀತಾರೆ

ಸುಂದರ ಸ್ವಪ್ನದ ತಿರುಳು

– ಕಾವೇರಿ ಎಸ್ ಎಸ್

ಸುಂದರ ಸ್ವಪ್ನದ ತಿರುಳು
ಸಂಜೆಯ ಇರುಳ ಖದರು
ಮಾತಿಗೆ ಸೋತಿದೆ ಮೆಲ್ಲಗೆ
ಹಸಿದ ಹೊಟ್ಟೆಯ ಬೇಗೆಯ ಮರೆಸಲು
ಸೊಟ್ಟಗಾಗಿದೆ ಸಂಭ್ರಮದ ತೊಟ್ಟಿಲು
 
ನಿತ್ಯ ನೂತನ ರಂಗಿನ ಮೆಟ್ಟಿಲು
ಕಣ್ಣೆದುರಿಗೆ ನರ್ತಿಸುತ್ತಿದೆ ನಿರಂತರ
ಯಾರೂ ಅರಿಯದ ಸತ್ಯ
ಬಟ್ಟೆ ಕಳಚಿದೆ ಇಂದು
 
ಬೆತ್ತಲಾದ ಮೇಲೆ ನಾಚಿಕೆಯ ಸುಳಿವೆಲ್ಲಿ?
ಬಿಸಿ ಉಸಿರಿನ ಸಜೆ ಮಾತ್ರ ಮಡಿಲಲ್ಲಿ
ಕಾಣದ ಊರಿಗೆ ಪಯಣವ ಹೊರಟು
ತನ್ನದೇನಿಲ್ಲ ಎಲ್ಲವೂ ನಿನ್ನದೇ ಎಂಬ ಅರಿವಿನಲಿ
 
ಸಂಜೆಯ ಕತ್ತಲು ಆವರಿಸಿದೆ ಸುತ್ತಲು
ಬದಲಾಗದ ಗಾಳಿಗೆ ಎದೆಯೊಡ್ಡಿ ನಿಲ್ಲಲು
ಬದುಕು ಕರಗುವ ಹೊನಲು
 
ಎಂದಿಗೂ ಸಾಗದ ಪಾಳು ಬಿದ್ದ ಹಾದಿಯಲಿ
ಸಾಗಲು ಅಂಜುವ ಮನ
ಬರೆಯ ಹೊರೆ ಹೊತ್ತು ನಲುಗುತ್ತಿದೆ
ಮಂಜು ಮುಸುಕಿದ ಬಾಳಿನ ಕರೆಗೆ ಓಗೊಟ್ಟು

‍ಲೇಖಕರು avadhi

29 June, 2013

1 Comment

  1. sharath hk

    nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading