ಆರ್ ವಿಜಯರಾಘವನ್
ಲಾರೆನ್ಸ್ ಸ್ಟರ್ನ್‌ನ ಟ್ರಿಸ್ಟ್ರಾಮ್ ಶಾಂಡಿ ಕಾದಂಬರಿಯನ್ನು ಓದಿದ್ದೀರಾ?
ಅವನ ಚಿಕ್ಕಪ್ಪ ಟೋಬಿ ಕೇಳಿದ ಪ್ರಶ್ನೆಯನ್ನು ಕೇಳಿದ್ದೀರಾ
ನೀವು ಎಂದೂ ನೋಡದಿರುವ ಬಿಳಿಕರಡಿಯ ಬಗ್ಗೆ ಮಾತಾಡಬಲ್ಲಿರಾ?
ಸ್ವಲ್ಪ ಶ್ರಮ ಪಟ್ಟರೆ ಅದನ್ನು ನೀವು ನೋಡಿರಲೇ ಬೇಕೆಂದಿಲ್ಲ
ಅದರ ಬಗ್ಗೆ ಓದಿರಲೇ ಬೇಕೆಂದಿಲ್ಲ, ಕೇಳಿರಲೇ ಬೇಕೆಂದಿಲ್ಲ
ಕೊಂಚ ಭಾಷೆ, ಕೊಂಚ ಅದರ ಜೊತೆ ಹಾದರ ಅಷ್ಟೇ ಬೇಕಿರುವುದು
ಅಲ್ಲಿಲ್ಲದಿರುವುದನ್ನು ಅಲ್ಲಿಗೆ ತರಲು, ಅಲ್ಲಿಂದ ಅಳಿಸಿಬಿಡಲು.

ಅದೇ ಕೊರಳಲ್ಲಿ ಕೇಳೋಣ, ಬಿಳಿ ಕರಡಿ, ಸರಿ ಸರಿ,
ಯಾವಾಗಲಾದರೂ ನಾನೊಂದನ್ನು ನೋಡಿದ್ದೇನೆಯೇ?
ಎಲ್ಲಾದರೂ ಅದನ್ನು ನೋಡಿರಬಹುದೇ?
ನಾನದನ್ನು ಎಂದಾದರೂ ನೋಡಲುಬಹುದೇ
ನಾನದನ್ನು ಎಂದಾದರೂ ನೋಡಲೇ ಬೇಕೇ
ಅದನ್ನು ನೋಡಲು ಸಾಧ್ಯವೇ ನನಗೆ
ನಾನು ಒಂದು ಬಿಳಿ ಕರಡಿಯನ್ನು ನೋಡಿರಲೂಬಹುದು
ಅದನ್ನು ಊಹಿಸುವುದು ಹೇಗೆ?
ಒಂದೊಮ್ಮೆ ಬಿಳಿ ಕರಡಿಯನ್ನು ನಾನು ನೋಡಿದ್ದಾದರೆ
ನಾನು ಏನು ಹೇಳಬೇಕು
ಒಂದೊಮ್ಮೆ ನಾನು ಬಿಳಿ ಕರಡಿಯನ್ನು ನೋಡಲಾರೆನಾದರೆ
ನಾನು ಏನು ಹೇಳಬೇಕು.
ನಾನು ಈವರೆಗೂ ಜೀವಂತ ಬಿಳಿ ಕರಡಿಯನ್ನು ನೋಡದಿದ್ದರೆ
ನೋಡಿರದಿದ್ದರೆ, ನೋಡಲಾಗದಿದ್ದರೆ, ನೋಡಲೇಬೇಕೆಂದಾದರೆ
ನಾನು ಒಂದು ಬಿಳಿ ಕರಡಿಯ ಚರ್ಮವನ್ನು ನೋಡಲು ಸಾಧ್ಯವೇ
ಬಣ್ಣದಲ್ಲಿ ಬಿಡಿಸಿದ ಒಂದನ್ನು ವರ್ಣಿಸಲು ಅಥವಾ ಕನಸಿನಲ್ಲಿ ಕಾಣಲು ಸಾಧ್ಯವೇ.
ಎಂದಾದರೂ ನನ್ನಪ್ಪ, ನನ್ನಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಕ್ಕಂದಿರು, ತಂಗಿಯರು
ಎಂದಾದರೂ ಬಿಳಿ ಕರಡಿಯನ್ನು ಕಂಡಿದ್ದಾರೆಯೇ? ಕಂಡಿದ್ದರೆ ಅವರು
ಅದಕ್ಕೆ ಏನು ಕೊಟ್ಟರು, ಅವರು ಅದರೊಡನೆ ಹೇಗೆ ವರ್ತಿಸಿದರು
ಆ ಬಿಳಿ ಕರಡಿ ಅವರೊಡನೆ ಹೇಗೆ ವರ್ತಿಸಿತು, ಅದು ಕಾಡು ಮೃಗದಂತೆ ವರ್ತಿಸಿತೇ
ಅಥವಾ ಪಳಗಿದಂತೆ, ಒರಟಾಗಿ, ನಯವಾಗಿ?
ಇಷ್ಟಕ್ಕೂ ಆ ಬಿಳಿ ಕರಡಿಯು ನೋಡುವಷ್ಟು ಮುಖ್ಯವೇ,
ಅದರಲ್ಲೇನಾದರೂ ಪಾಪ ದೋಷಗಳಿವೆಯೇ
ಅದು ಕರಿ ಕರಡಿಗಿಂತ ಮೇಲಾದುದೇ?





0 Comments