ಬಿಳಿಮಲೆ ಖಂಡನೆ

ಮಂಗಳೂರಿನ ಪತ್ರಕರ್ತ ಶ್ರೀ ನವೀನ್ ಸೂರಿಂಜೆ ಅವರ ಬಂಧನವನ್ನು ನಾನು ತೀವ್ರವಾಗಿ ಖಂಡಿ ಸುತ್ತೇನೆ. ಶ್ರೀ ಸೂರಿಂಜೆ ಅವರು ಸಕಾಲದಲ್ಲಿ ವರದಿ ಮಾಡದೇ ಇರುತ್ತಿದ್ದರೆ ಕರಾವಳಿಯ ಕೋಮುವಾದಿಗಳ ಕುಕೃತ್ಯ ಬಯಲಿಗೆ ಬರುತ್ತಿರಲಿಲ್ಲ. ಈ ಘಟನೆ ಕರಾವಳಿಯ ಕೊಮುವಾದಿಗಳೊಡನೆ ಪೋಲಿಸ್ ಶಕ್ತಿ ಸೇರಿ ಕೊಂಡಿದ್ದರ ಸಂಕೇತ. ಇದರ ವಿರುದ್ದ ದೇಶದ ಎಲ್ಲರೂ ಸ್ವರ ಎತ್ತಬೇಕಾಗಿದೆ. .

ಕರ್ನಾಟಕ ಮಾನ ದೇಶದಾದ್ಯಂತ ಇನ್ನೊಮ್ಮೆ ಹರಾಜಾಗುತ್ತಿದೆ

ಪುರುಷೋತ್ತಮ ಬಿಳಿಮಲೆ

 

‍ಲೇಖಕರು G

November 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. armanikanth

    ಬಿಳಿಮಲೆಯವರ ಅಭಿಪ್ರಾಯವೇ ನನ್ನ ಅಭಿಪ್ರಾಯವೂ ಆಗಿದೆ.
    ನವೀನ್ ಅವರನ್ನು ಬಂಧಿಸಿದ ಪೋಲೀಸರ ಕ್ರಮಕ್ಕೆ ಧಿಕ್ಕಾರ.
    ಇಂಥ ಕೆಲಸಕ್ಕೆ ಪರೋಕ್ಷವಾಗಿ ಬೆಂಬಲಿಸಿರುವ ರಾಜ್ಯ ಸರ್ಕಾರಕ್ಕೂ ಧಿಕ್ಕಾರ…
    ಎ ಆರ್ ಮಣಿಕಾಂತ್.

    ಪ್ರತಿಕ್ರಿಯೆ
  2. laxminarayana v.n

    ತಕ್ಷಣದ ಪ್ರತಿಕ್ರಿಯೆಯಾಗಿ ಇಂಥ ಕ್ರಮಗಳನ್ನು ಖಂಡಿಸುವುದು ಸರಿ. ಜೊತೆಗೆ ಜನಾಭಿಪ್ರಾಯ ರೂಪಿಸುವಂಥ ರಾಜಕೀಯ ಆಂದೋಲನಗಳು ಇಂದಿನ ಅಗತ್ಯ. ಈ ಕುರಿತು ನಮ್ಮ ಬರಹಗಾರರು, ಕಲಾವಿದರು, ರಾಜಕೀಯ ಪಕ್ಷಗಳು ಹಾಗೂ ಕಾನೂನು ತಜ್ಞರು ಒಕ್ಕೊರಲ ದನಿಯಾಗಿ ಪ್ರತಿಭಟಿಸುವಂಥ ಕ್ರಮಗಳ ಬಗ್ಗೆ ನಾವೆಲ್ಲರೂ ಗಮನಹರಿಸೋಣ. ಪ್ರಜ್ಞಾವಂತ ಮಹಿಳೆಯರ ಖಂಡನೆ ಇಂದಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.
    ಮಂಗಳೂರಿನ ಬಿ.ವಿ.ಸೀತಾರಾಮ ಭಟ್ಟರ ಮೇಲೆ ನಡೆದ ದೌರ್ಜನ್ಯವನ್ನು ನಾವಿನ್ನೂ ಮರೆತಿಲ್ಲ. ನಾಗರಿಕ ಸ್ವಾತಂತ್ರ್ಯದ ದಮನ ಕೇವಲ ಸಂಘಪರಿವಾರದ ಫ್ಯಾಸಿಸ್ಟ್ ಧೋರಣೆ ಮಾತ್ರವಲ್ಲ. ಕೇಂದ್ರ ಸರ್ಕಾರದ ಜನವಿರೋಧೀ ಧೋರಣೆಯೂ ಆಗಿದೆ.

    ಪ್ರತಿಕ್ರಿಯೆ
    • ನಾ ದಿವಾಕರ

      ಆಳುವ ವರ್ಗಗಳ ದಮನಕಾರಿ ನೀತಿಗೆ ಲೇಟೆಸ್ಟ್ ಬಲಿ ಸೂರಿಂಜೆ. ಈ ಆಳ್ವಿಕರು ಯಾರನ್ನು ಬಿಟ್ಟಿದ್ದಾರೆ. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದ ಯಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಎಂಬ ಅಲಿಖಿತ ಸಂವಿಧಾನ ದೇಶದಲ್ಲಿ ಜಾರಿಮಾಡಿರುವುದು ಸ್ವತಂತ್ರ ಭಾರತದ ಆಳ್ವಿಕರ ಹೆಗ್ಗಳಿಕೆಯೇನೋ ? ಸರ್ಕಾರಗಳ ಇಂತಹ ನೀತಿಗಳ ವಿರುದ್ಧ ಹೋರಾಡಲು ಮಾನವ ಹಕ್ಕು ಚಳುವಳಿಗಳು ಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ಯಾವುದೇ ಪೂರ್ವಾಗ್ರಹವಿಲ್ಲದೆ ಪ್ರತಿಭಟನೆಯ ದನಿಗಳು ಮಾನವ ಹಕ್ಕು ಆಂದೋಲನದಲ್ಲಿ ಭಾಗಿಯಾಗುವ ಕಾಲ ಸನ್ನಿಹಿತವಾಗಿದೆ ಎನಿಸುತ್ತದೆ. ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಹೋರಾಟಗಳು ಅನಿವಾರ್ಯ
      ನಾ ದಿವಾಕರ

      ಪ್ರತಿಕ್ರಿಯೆ
  3. Sharadhi

    I fully agree that in India human rights are repeatedly violated and it’s high time for the elite crowd to raise their voice against the entire corrupt system. On a related note, this article (please read the last paragraph) is of immediate relevance.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: