ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಿಫೋರ್ ನೈಟ್ ಫಾಲ್’

‘ನನ್ನ ಸಾವನ್ನು ಸೋಲೆಂದು ಭಾವಿಸಬೇಡಿ’
ಹೀಗೊಂದು ವಿದಾಯ ಪತ್ರವನ್ನು ಸಾಯುವುದಕ್ಕೂ ಮುನ್ನ ಪತ್ರಿಯೊಂದಕ್ಕೆ ಕಳಿಸಿ ಸತ್ತ ರೀನಾಲ್ಡೋ ಅರೆನಾಸ್. ಈತ ಕ್ಯೂಬಾದ ಕವಿ, ಕಾದಂಬರಿಕಾರ. ಈತನ ಕವನವನ್ನು ನೆಟ್ ನಲ್ಲಿ ಜಾಲಾಡಿ ‘ಅಲೆಮಾರಿ’ ಅನುವಾದಿಸಿದ್ದಾರೆ.

ಐದು ಕಾದಂಬರಿಗಳನ್ನು, ಕವನ ಸಂಕಲನಗಳನ್ನು ಬರೆದ ಅರೆನಾಸ್ ‘ಬಿಫೋರ್ ನೈಟ್ ಫಾಲ್’ ಎನ್ನುವ ಆತ್ಮಕತೆಯನ್ನು ಬರೆದಿದ್ದಾನೆ. ಮೊನ್ನೆ ಇದನ್ನು ಆಧರಿಸಿ ನಿರ್ಮಿಸಿದ ಚಿತ್ರವನ್ನು ನೋಡಿದೆ. ಚಿತ್ರದ ಕಡೆಗೆ ಒಂದು ಪದ್ಯ ಸಾಲುಗಳು ಜಾರುತ್ತಾ ಇದ್ದವು. I am that angry and lonely child… ಇದು ಅರೆನಾಸ್ ಬರೆದ ಮೈ ಲವರ್ ದಿ ಸಿ ಪದ್ಯದ ಸಾಲುಗಳು ಅಂತಾ ಗೊತ್ತಾಗಿದ್ದು. ಇಂಟರ್ನೆಟ್‌ನಲ್ಲಿ ಜಾಲಾಡಿದ ಮೇಲೆ.

p1.jpg

ನನ್ನ ಪ್ರೀತಿಯ ಸಮುದ್ರ..


ದುಂಡಾದ, ಕೊಳಕು ಮುಖ ಹೊತ್ತ,
ಅದೇ ಹುಡುಗ ನಾನು…
‘ನಾಕಾಣೆ ಕೊಡಿ’ ಎನ್ನುತ್ತಾ,
ಪ್ರತಿ ಮೂಲೆಯಲ್ಲೂ ಸಿಕ್ಕು ಕಾಡುವವ.
ನಾನು ಅದೇ ಕೊಳಕು ಮುಖದ ಹುಡುಗ,
ಬೇಡದವನು, ಸಂದೇಹ ಬೇಡ;
ದೂರದಲ್ಲಿ ಅಲ್ಲಿ…
ನಗೆ ಉಕ್ಕಿಸಿ, ಕುಣಿದಾಡುವ ಮಕ್ಕಳಿಂದ
ದೂರ ಉಳಿದವನು.

ನಾನು ಅದೇ ನೋಡಲಿಚ್ಛಿಸಿದ ಹುಡುಗ,
ಖಂಡಿತವಾಗಿಯೂ ಬೇಡದವನು.
ದುಂಡು, ಆದರೂ ಕೊಳಕಾದ ಮುಖ-
ಬೀದಿ ದೀಪದ ಮುಂದೆ,
ಅಜ್ಜಿಯರ ಮುಂದೆ ಬೆಳಗುವ,
ಕುಣಿದಾಡುವ ಪುಟ್ಟ ಮಕ್ಕಳು,
ನನ್ನ ಮುಖದ ಮೇಲೆ ಎಸೆವ
ಅವಮಾನವನ್ನು ಹೊತ್ತ ಮುಖ.

ಸದಾ, ಸಿಟ್ಟು ಒಂಟಿತನ ತುಂಬಿಕೊಂಡ
ನಾನು ಅದೇ ಹುಡುಗ,
ಅವಮಾನದ ಸಿಟ್ಟನ್ನು ಎಸೆದು,
ಎಚ್ಚರಿಸುವವನು,
ಸುಳ್ಳು ಸುಳ್ಳೇ ತಲೆ ನೇವರಿಸಿ
ಮುಂದೆ ಸಾಗುವಾಗ
ನಿಮ್ಮ ಜೇಬನ್ನು ಕತ್ತರಿಸುವವನು.

ಘೋರ ಉಗ್ರವಾದವನ್ನು,
ಅಪಾಯಕಾರಿ ಕುಷ್ಠ,
ಕಾಡುವ ಅಪರಾಧ ಕೀಟಗಳು,
ದುಷ್ಕೃತ್ಯಗಳ ಎದುರು ನಿಂತ ನಾನು
ಅದೇ ಹುಡುಗ..
ನಾನು ಅದೇ ಅಹಸ್ಯ ಹುಟ್ಟಿಸುವ ಹುಡುಗ,
ಕಟ್ಟಿಗೆ ಪೆಟ್ಟಿಗೆಯನ್ನು ಹಾಸಿಗೆ
ಮಾಡಿಕೊಂಡು
ನೀನು ನಿಶ್ಚಿತವಾಗಿಯೂ
ಬಂದು ಸೇರುವೆ ಎಂದು
ಕಾಯುವವನು.

‍ಲೇಖಕರು avadhi

3 March, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading