ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ, ನಂದಿನಿ ಹೆದ್ದುರ್ಗಗೆ ‘ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ’

ಚಾಮರಾಜನಗರದ ಪ್ರತಿಷ್ಠಿತಿ ರಂಗವಾಹಿನಿ ಸಂಸ್ಥೆ ನೀಡುವ ‘ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ’ಗೆ ಕವಯತ್ರಿ ನಂದಿನಿ ಹೆದ್ದುರ್ಗ ಮತ್ತು ಕವಿ ಬಿದಲೋಟಿ ರಂಗನಾಥ ಆಯ್ಕೆಯಾಗಿದ್ದಾರೆ. ಖ್ಯಾತ ಸಾಹಿತಿ-ಕವಿ ದಿವಂಗತ ಮುಳ್ಳೂರು ನಾಗರಾಜ ಅವರ ಹೆಸರಿನಲ್ಲಿ ರಂಗವಾಹಿನಿ ಸಂಸ್ಥೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡುತ್ತಿದೆ.

ಅದರಂತೆ, ಪ್ರಸ್ತುತ 11ನೇ ವರ್ಷದ ಪ್ರಶಸ್ತಿಗೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದವರಾದ ಶ್ರೀಮತಿ ನಂದಿನಿ ಹೆದ್ದುರ್ಗ ಅವರ ‘ರತಿ ಕಂಬನಿ’ ಹಾಗೂ ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದವರಾದ ಬಿದಲೋಟಿ ರಂಗನಾಥ ಅವರ ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಕವನ ಸಂಕಲನಗಳು ಆಯ್ಕೆಯಾಗಿವೆ. ಪ್ರಶಸ್ತಿಯು ತಲಾ 5 ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.

‍ಲೇಖಕರು Admin

14 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading