ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ಬಾ ಗಿಳಿಯೆ…

ಪ ಸ ಕುಮಾರ್ ಮಕ್ಕಳ ಕವಿತೆಗಳನ್ನು ಅತ್ಯಂತ ಪ್ರೀತಿಯಿಂದ ಕ್ಯಾನ್ವಾಸ್ ಗಿಳಿಸಿದ್ದಾರೆ.
ಇಲ್ಲಿ ಶಂ ಗು ಬಿರಾದಾರ ಅವರ ಕವನ ಇದೆ-

ಶಂ ಗು ಬಿರಾದಾರ
ಬಾ ಬಾ ಗಿಳಿಯೆ, ಬಣ್ಣದ ಗಿಳಿಯೇ
ಹಣ್ಣನು ಕೊಡುವೆನು ಬಾ ಬಾ,
ಹಸಿರು ಪಕ್ಕದ ಚಂದದ ಗಿಳಿಯೆ
ನನ್ನೊಡನಾಡಲು  ಬಾ  ಬಾ.
ಕೆಂಪು  ಮೂಗಿನ ಮುದ್ದಿನ ಗಿಳಿಯೆ
ಹಾಡನು ಕಲಿಸುವೆ ಬಾ ಬಾ,
ಮರದಲಿ ಕುಳಿತು ನೋಡುವೆ ಏಕೆ
ಹಾರುತ ಹತ್ತಿರ  ಬಾ  ಬಾ.
ಠಕ್ಕಿನ ಕಾಮಿ  ಮನೆಯೊಳಗಿಲ್ಲ
ಹೆದರುವೆ ಏಕೆ ಬಾ ಬಾ,
ಸೊಕ್ಕಿನ  ಟಾಮಿ  ಹತ್ತಿರವಿಲ್ಲ
ಕುಣಿಕುಣಿದಾಡುತ ಬಾ  ಬಾ.
ಹಾಡುವುದನ್ನು ಕಲಿಸುವೆ ನಿನಗೆ
ಹಾರಲು ಕಲಿಸಲು ಬಾ  ಬಾ,
ಹಣ್ಣನು ತಿಂದು, ಹಾಲನು ಕುಡಿದು
ಮುಗಿಲಿಗೆ ಹಾರುವ ಬಾ  ಬಾ.

‍ಲೇಖಕರು avadhi

21 October, 2008

1 Comment

  1. ಶೆಟ್ಟರು (Shettaru)

    ಧನ್ಯವಾದಳು ಅವಧಿ,
    ಈ ಪದ್ಯ ನಮಗೆ ೨ನೆಯ ತರಗತಿಯ ಪತ್ಯದಲ್ಲಿತ್ತು ಮತ್ತು ಇದು ನನ್ನ ಬಾಲ್ಯದ ಮರೆಯಲಾರದ ಒಂದು ಸವಿನೆನಪು.
    ಇವತ್ತಿಗೂ ಈ ಹಾಡನ್ನು ಕೆಲವೊಮ್ಮೆ ಮೇಲುಕು ಹಾಕುತ್ತಿರುತ್ತೆನೆ ಆದರೆ ಇದರ ಪೂರ್ಣ ಪಾಠ ನೆನಪಿರಲಿಲ್ಲ, ನೆನಪಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮತ್ತು ಈ ಪದ್ಯದಿಂದಾಗಿ ನಮಗೆಲ್ಲ ಉತ್ತಮ ಬಾಲ್ಯ ಮತ್ತು ಅದರ ಸವಿನೆನಪು ಕಟ್ಟಿಕೊಟ್ಟ ಶಂ ಗು ಬಿರಾದಾರರಿಗೆ ಅನಂತನಂತ ಧನ್ಯವಾದಗಳು. ಹಾಗೆಯೆ ಪ ಸ ಕುಮಾರ್ ರವರಿಗೂ ಧನ್ಯವಾದಗಳು.
    ಎಲ್ಲರಿಗೂ ಶುಭ ದೀಪಾವಳಿ
    -ಶೆಟ್ಟರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading