ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ಕೈ ಜೋಡಿಸು ಆರದಿರಲಿ ಒಲವಿನ ಹಣತೆ..

 

ಕಾವ್ಯಶ್ರೀ ಎಚ್ 

ವಿದಾಯಕೂ ಮೊದಲೇ
ಮುಂದಿನ ಭೇಟಿಯ ನಿರೀಕ್ಷೆ
ನಿನ್ನೊಂದಿಗೆ ಮಾತ್ರ ಸಾಧ್ಯ

pink flowersಮಾತಿಗೂ ಮೊದಲೇ
ಶುರುವಾಗುವ ಸಂವಾದ
ಮಳೆಗೂ ಮೊದಲಿನ ತಂಗಾಳಿಯಂತೆ
ಬೆಳುದಿಂಗಳೇ ಸೋಂಕಿದಂತೆ

ಕಣ್ಬೆಳಕಿನಲಿ ಅರಳುವ ಮೊಗ
ಎದೆಬಡಿತಕೆ ಹೊಮ್ಮುವ ರಾಗ
ಮೌನದಲೇ ಲೀನವಾದಂತೆ ಧ್ಯಾನ
ಸಾನಿಧ್ಯವೇ ಸಾರ್ಥಕ್ಯವಾಗುವ ಪರಿ
ಯಾವ ದರುಶನವೂ ತೋರದ ದಾರಿ
ಒಲವೇ
ನಿನ್ನೊಂದಿಗೆ ಮಾತ್ರ ಸಾಧ್ಯ

srujan art1

 

 

 

ಅಲ್ಲಿ ಆ ಊರಿನಲ್ಲಿ
ಮುಳುಗುವುದಿಲ್ಲ ಚಂದಿರ
ನನ್ನಪ್ಪಣೆಯಿಲ್ಲದೆ. . .
ಮೂಡುವುದಿಲ್ಲ ಸೂರ್ಯ
ನಿನ್ನ ಅನುಮತಿಯಿಲ್ಲದೇ…

ಕಾಲ ಚಲಿಸದ ಊರಿಗೆ
ಯಾರೂ ಕರೆಯದ ತಾವಿಗೆ
ನನ್ನ ಕರೆದೊಯ್ಯುವುದು ಎಂದಿಗೆ

srujan art1

 

 

 

ಬೀಸುಗಾಳಿಗೆದುರಾಗಿ
ಕದಲುತಿದೆ ಸೊಡರು
ಬಾ ಕೈ ಜೋಡಿಸು
ಆರದಿರಲಿ ಒಲವಿನ ಹಣತೆ

‍ಲೇಖಕರು admin

8 December, 2015

9 Comments

  1. ಮುಗಿಯದ ಮೌನ- GKN

    ಒಲವಿನ ಬೆಳಕು ಉಳಿಸಿಕೊಳ್ಳುವ ಹಂಬಲ ಚೆನ್ನಾಗಿ ಮೂಡಿ ಬಂದಿದೆ,

  2. Paramesh

    ಬಾ ಕೈ ಜೋಡಿಸು
    ಆರದಿರಲಿ ಒಲವಿನ ಹಣತೆ
    Tumba Chennagide…

    • Kavyashree H

      Thank you

  3. ಲೋಕೇಶ್ ಕೆ ಆರ್

    ಕಣ್ಬೆಳಕಿನಲಿ ಅರಳುವ ಮೊಗ
    ಎದೆಬಡಿತಕೆ ಹೊಮ್ಮುವ ರಾಗ
    ಮೌನದಲೇ ಲೀನವಾದಂತೆ ಧ್ಯಾನ…..
    ಅಧ್ಬುತ ಸಾಲುಗಳು…ತುಂಬಾನೆ ಇಷ್ಟ ಆಯ್ತು….
    ಮತ್ತೆ ಶಬ್ದಕ್ಕೆ ಸ್ಥಳವೆಲ್ಲಿ?

    • Kavyashree H

      Thank you .ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತ

  4. Kavyashree H

    Dhanyavadagalu avadhi balagakke

  5. Kavyashree H

    Thank you. GKN?

  6. sudarshan

    Very nice poem indeed with positive and optimistic elements.

    • Kavyashree H

      Thank you Sudarshanji

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading