ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಗನಗೌಡ ಹಿರೇಗೌಡ ಹೊಸ ಕವಿತೆ – ಚಾರಣ…

ಸಂಗನಗೌಡ ಹಿರೇಗೌಡ

ಚಾರಣ
ಒಮ್ಮಿಲೇ ಗೆಜ್ಜೆಬಿಗಿದಂತಾಗಿ
ಅಲ್ಲೆ ಬಾಜು ಕಂಪೌಂಡ್ ಕಡೆಗೆ ನಡೆದೆ
ಚಿಂದಿ ಚಿಪಾಟಿ ಅದು ಇದು ಇನ್ನೇನೋ ಇನ್ನೇನೋಗಳ
ಮಧ್ಯ ಚೈನೆಳೆದು ಉಚ್ಚೆ ಹೊಯ್ಯುತಿದ್ದೆ…

ತುಸುದೂರ ಯಾರೋ ಕಂಡಂತಾಗಿ
ಮನುಷ್ಯರೆಂಬ ಅರ್ದಸತ್ಯ ಅರಿವಿಗೆ ಬಂದು
ನಿಂತವನು ಮರೆಯಲ್ಲಿ ಕೂತುಬಿಟ್ಟೆ
ಹಿಂದ್ಗಡೆ ಯಾರೋ ಬಂದು ಕಿವಿಮಡ್ಡಿಗೆ
ಬಡಿದಂತಾಯಿತು ಕೂತವನನ್ನ ರಟ್ಟೆ ಹಿಡಿದೆಬ್ಬಿಸಿದ್ದು
ಗೊತ್ತೇ ಆಗಲಿಲ್ಲ…

ಕಯ್ತೊಳೆದವನೆ ಭುಜದ ಮೇಲೆ ಬೆಳಕು ಹೊತ್ತು
ಕಯ್ಯಲ್ಲಿ ತಾಟಿಡಿದು ಹೋಗುತ್ತಿದ್ದೆ
ಸಂತೆ ಎಂದರೆ ಸುಮ್ಮನೆಯೇ?
ಇಟ್ಕೊಂಡವರು ಕಟ್ಕೊಂಡವರು ಇದ್ದವರು ಕದ್ದವರು
ಮಾರಿಕೊಂಡವರು ಮುಟ್ಟಿಸಿಕೊಂಡವರು ಹೀಗೆ ಸತ್ತವರನ್ನು ಬಿಟ್ಟು ಇನ್ನೇನೋ ಇನ್ನೇನೋ…

ನೀಡಿದವರ ಮಧ್ಯಯೇ ತಾಟು ನೋಡಿದ ಕೆಲವರು
ನಕ್ಕರು ಅತ್ತರು ಬೈದರು
ಹೊಡೆದರು ಹೊದ್ದರು
ಕೆಲವರಂತೂ ಬೆರಳೇ ಮುರಿದುಕೊಂಡರು!
ಹೀಗೆ ಸದ್ದುಗದ್ದಲಗಳ ನಡುವೆ ಯಾರದೋ ಒಂದೇಟು
ಭುಜದ ಮೇಲೊತ್ತ ಬೆಳಕಿಗೆ ತಾಗಿತು
ಕತ್ತಲು ಆವರಿಸಿ ಮತ್ತೆ ಇನ್ನೇನಾಯಿತೋ
ಗೊತ್ತಾಗಲಿಲ್ಲ…

ಮಣ್ಣು ತೂರಿದ ಹಾದಿ ಮತ್ತೆ ತುಳಿಯಬಾರದೆಂದು
ಒಡೆದ ಬೆಳಕನ್ನು ಹೊಲೆದು ಭುಜದಮೇಲೊತ್ತು
ತಾಟಿಡಿದು ಹೋಗುತ್ತಿದ್ದೆ
ತೂರಿದ ಹಾದಿಡಿದು ಬಂದ ಕೆಲವರು
ತಡೆದು ತರುಬಿ ತಾಟುಕಸಿದವರೆ
‘ಬೇಡುವ ಮುನ್ನ ಹಾಡಿದ್ದಿಯಂತೆ ನಿಜವೆ’.!? ಅನ್ನುವಷ್ಟೊತ್ತಿಗೆ
ಹೊದ್ದು ಮಲಗಿದ ಕೌದಿಯ ಕಾಲುಗಳು ಎಚ್ಚರಗೊಳಿಸಿದವು…

‍ಲೇಖಕರು Admin

26 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading