ಬಾವಲಿಗೆ ಬಂದ ಗಂಡಾಂತರ
ಎಲ್ ಸಿ ನಾಗರಾಜ್
ಬಾವಲಿಗಳು ಸಸ್ತನಿ ವರ್ಗಕ್ಕೆ ಸೇರಿದ ನಿಶಾಚರ ಜೀವಿಗಳು, ಪ್ರಾಣಿಗಳಂತಿರುವ ಅವು ಪಕ್ಷಿಗಳಂತೆ ಹಾರುತ್ತವೆ. ಬಾವಲಿಗಳಿಗೆ ಕಣ್ಣುಗಳಿಲ್ಲ, ಹಾರುವಾಗ ಅವು ಹಾಕುವ ಸಿಳ್ಳು ಅಡ್ಡಲಾಗಿ ಬರುವ ಮರಗಿಡಗಳಿಗೆ ಬಡಿದು ಅದರಿಂದ ಬರುವ ಪ್ರತಿಧ್ವನಿಗೆ ಅನುಗುಣವಾಗಿ ಹಾರುವ ದಿಕ್ಕು ಮತ್ತು ಎತ್ತರವನ್ನ ಬದಲಾಯಿಸಿಕೊಳ್ಳುತ್ತವೆ
ಬಾವಲಿಯಲ್ಲಿ ವಿವಿಧ ಪ್ರಭೇಧಗಳಿದ್ದು ಅದಕ್ಕನುಗುಣವಾಗಿ ಅವುಗಳ ಆಹಾರ ಕ್ರಮ ಬದಲಾಗುತ್ತದೆ ; ಕೆಲವು ಹಣ್ಣುಗಳನ್ನ, ಕೆಲವು ಕೀಟಗಳನ್ನ ಆಹಾರವಾಗಿ ಬಳಸುತ್ತವೆ, ಕೆಲವು ಪ್ರಭೇಧಗಳು ರಕ್ತವನ್ನ ನೆಕ್ಕುತ್ತವೆ .
ಕೃಷಿ ಪರಿಸರ ವ್ಯವಸ್ಥೆಯಲ್ಲಿ ಬಾವಲಿಗಳದು ಪ್ರಧಾನ ಪಾತ್ರ, ಒಂದು ಬೀಸಿನ ಹಾರಾಟದಲ್ಲಿ ಬಾವಲಿ ವಿವಿಧ ಎತ್ತರಗಳಲ್ಲಿ ಹಾರುತ್ತ ಸುಮಾರು 500 ಗ್ರಾಮ್ ನಷ್ಟು ಕೀಟಗಳನ್ನ ಗಬಕಾಯಿಸುತ್ತದೆ. ಎತ್ತರದ ಮರ ಹಾಳುಬಾವಿಗಳು, ಗಿರಿ ಕಂದರಗಳಲ್ಲಿ ತಲೆ ಕೆಳಗಾಗಿ ಜೋತು ಬೀಳುವ ಇವು ಅನೇಕ ಸಲ ಜೇನುಹುಳುಗಳು ಮತ್ತು ಕಣಜಗಳ ದಾಳಿಯಿಂದ ತತ್ತರಿಸುತ್ತವೆ; ಸಂಜೆಗತ್ತಲಾದಾಗ ಹಾರತೊಡಗುವ ಬಾವಲಿಗಳು ಮತ್ತೆ ಸ್ವಸ್ಥಾನಕ್ಕೆ ಮರಳುವುದು ಬೆಳಗಿನ ಜಾವದಲ್ಲಿ .
ಕೃಷಿ ಪರಿಸರ ವ್ಯವಸ್ಥೆಯಲ್ಲಿ ಅನೇಕ ಕೀಟಗಳನ್ನ ಗಬಕಾಯಿಸುವ ಬಾವಲಿಗಳ ಉಪಯೋಗವನ್ನ ಅರಿತಿದ್ದ ಕ್ಯಾಲಿಫೋರ್ನಿಯ ಯೂನಿವರ್ಸಿಟಿ ಬಾವಲಿಗಳ ರಕ್ಷಣೆಗಾಗಿ ತಲಾ 10 $ ಹಣ ಖರ್ಚು ಮಾಡುತ್ತಿತ್ತು
ಬಾವಲಿಗಳ ಜೊಲ್ಲಿನಲ್ಲಿ ‘ನಿಫಾ’ ಎಂಬ ವೈರಸ್ ಪತ್ತೆಯಾಗಿರುವುದು ಈಗ ಸುದ್ಧಿ; ಬಾವಿ ಮತ್ತು ಕಾಡಿನ ಕಣಿವೆಗಳಿಂದ ಸರ್ಕಾರ ಬಾವಲಿಗಳನ್ನ ಹಿಡಿಯಲು ಮುಂದಾಗಿದೆ .
ಈ ಹಿಂದೆ ಬಾವಲಿಗಳು ಅಧಿಕ ಪ್ರಮಾಣದಲ್ಲಿ ಸರಿಸುಮಾರು ಎಲ್ಲ ಭೂಪ್ರದೇಶಗಳಲ್ಲಿ ವಾಸಿಸುತ್ತಿದ್ದವು, ಕೆಲವು ಜನಸಮುದಾಯಗಳು ಈ ಬಾವಲಿಗಳನ್ನ ಆಹಾರಕ್ಕಾಗಿ ಬೇಟೆಯಾಡುತ್ತಿದ್ದರು, ಕ್ರಮೇಣ ಬಾವಲಿಗಳ ಸಂಖ್ಯೆ ಕ್ಚೀಣಿಸಿತು.
ಈ ತನಕ ಮನುಷ್ಯರಿಗೆ ತೊಂದರೆಯಾಗಿರದ ‘ನಿಫಾ’ ವೈರಸ್ ಇದ್ದಕ್ಕಿದ್ದಂತೆ ಯಾಕೆ ತೊಂದರೆ ಕೊಡುತ್ತಿದೆ? ಮನುಷ್ಯರನ್ನ ರಕ್ಷಿಸಲು ಈ ಬಾವಲಿಗಳನ್ನೆಲ್ಲ ಹಿಡಿದು ನಾಶಪಡಿಸಿಬಿಟ್ಟರೆ ಕೃಷಿ ಪರಿಸರ ವ್ಯವಸ್ಥೆಯ ಮೇಲೆ ಎಂತಹ ಪರಿಣಾಮವಾಗಬಹುದು?
ಇದೀಗ ಪರಿಸರ ವ್ಯವಸ್ಥೆಯ ಗಂಭೀರ ಸಮಸ್ಯೆ; ಇದುವರೆಗೆ ನಮಗೆ ಬೇಕಾಗಿದ್ದದ್ದು ಈಗ ಬೇಡವಾಗುತ್ತಿದೆ.






ಬಾವಲಿಗಳ ಮಾರಣ ಹೋಮಕ್ಕೆ ಸರ್ಕಾರ ಮುಂದಾಗಿರುವುದು ಕೇಳಿ ಬಹಳ ನೋವಾಯ್ತೂ.., ಅವುಗಳೂ ಜೀವಿಗಳಲ್ಲವೇ..?? ಉತ್ತಮ ಮಾಹಿತಿ ನೀಡಿದ್ದೀರಿ…