ನಾನು ಬರೆಯುತ್ತೇನೆ…
ಸುರೇಶ ಎಲ್ ರಾಜಮಾನೆ

ನನ್ನ ನರನಾಡಿಗಳೊಂದಿಗೆ
ನನ್ನ ಭಾವಗಳನ್ನು ನನ್ನತನವನ್ನು
ನನ್ನೊಂದಿಗೆ ಹಂಚಿಕೊಳ್ಳಲು
ನನ್ನೊಳಗಿನ ನನ್ನನ್ನು ಎಚ್ಚರಿಸಿ
ಸುಧಾರಿಸಿಕೊಳ್ಳಲು
ಹಗುರಾಗಿಸಿಕೊಳ್ಳಲು…..
ನಾನು ಅನುಭವಿಸಿದ ಕ್ಷಣಗಳು
ನನಗೆ ನೀಡಿದ ನೋವುಗಳ
ನನ್ನವರಿಗೆ ತಿಳಿಸಲು..
ಬಣ್ಣ ಬಣ್ಣ ಲೋಕದಲಿ
ಕಾಣದೆ ಕುಳಿತಿರುವ
ಸಣ್ಣ ಸಣ್ಣವರ ಬಗ್ಗೆ ತಿಳಿಸಿಕೊಡಲು
ಅವರನ್ನು ಉಳಿಸಿಕೊಳ್ಳಲು..
ಬಾಯಿಗೆ ಬರುವ ಮಾತುಗಳು
ಮನಸಿನ ಎದೆಯಮೇಲೆ ಕುಳಿತು
ನಾಯಿಯಂತಾಗದಂತೆ
ಕಾಯಲು…
ಬೆವರ ಹನಿಗೆ ಬೆಲೆಯಿಲ್ಲದೆ
ನೆರೆಯಮನೆಗೆ ಬೆಂಕಿ ಹಚ್ಚುವ
ಹುಚ್ಚು ಮನಸುಗಳನ್ನು ಸ್ವಚ್ಚಗೊಳಿಸಲು..
ಹೊತ್ತಿ ಉರಿಯುವಾಗ ನಂದಿಸಲು
ಬಂದು ನೀರು ಹಾಕುವ ಸಹಾಯಕರು
ನಾಯಕರಾಗಬೇಕು
ನಾನಾಗಲಿಲ್ಲವೆಂಬ ಮರುಕವನ್ನು
ಅಸಹಾಯಕತೆಯನ್ನು ತೋಡಿಕೊಳ್ಳಲು..
ನಾನಂದುಕೊಂಡಂತೆ ನಡೆಯದಿದ್ದರೂ
ನನ್ನ ಕರ್ತವ್ಯದೊಳಗೆ
ನಾನು ನಾನಾಗಿ ಉಳಿದು ಹೋಗಲು
ನನ್ನೊಂದಿಗೆ ನನ್ನವರೆಲ್ಲರನ್ನೂ ಉಳಿಸಿಕೊಳ್ಳಲು..
ನಾನು ಬರೆಯುತ್ತೆನೆ…..!






ಚೆನ್ನಾಗಿದೆ
very nice..
thumba dhanyavaadagalu …