‘ಗಾಂಧಿ’ ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ಮತ್ತೆ ಮತ್ತೆ ನಮ್ಮನೆಚ್ಚರಿಸುವ, ಕಾಡಿಸುವ ಒಳ ಬೆಳಕು. ಸೂಕ್ಷ್ಮತೆಯುಳ್ಳ ಪ್ರತಿಯೊಬ್ಬ ನಾಡಿನ ಹಿತಚಿಂತಕ, ಸಾಹಿತಿ, ಕವಿ ಗಾಂಧಿಯೊಂದಿಗೆ ಅನುಸಂಧಾನಿಸಿದ್ದಾರೆ, ಮುಖಾಮುಖಿಯಾಗಿದ್ದಾರೆ. ಪ್ರಶ್ನಿಸಿಕೊಳ್ಳುತ್ತಾ, ಎಚ್ಚರಿಸಿಕೊಳ್ಳುತ್ತಾ ತಮ್ಮನ್ನು ತಾವೇ ನಿಕಷಕ್ಕೊಡ್ಡಿಕೊಂಡಿದ್ದಾರೆ. ಹೀಗೆ ‘ಗಾಂಧಿ’ ಯನ್ನು ವಸ್ತುವಾಗುಳ್ಳ ಕವಿತೆ ರಚಿಸಿರುವ ಹಿರಿ-ಕಿರಿಯ ಕವಿಗಳ ಕವಿತೆಯನ್ನೊಳಗೊಂಡ ಒಂದು ಪ್ರಾತಿನಿಧಿಕ ಸಂಕಲನವನ್ನು ಹೊರತರಬೇಕೆಂಬ ಇಚ್ಛೆ ಇದ್ದು ಅಂತಹ ಕವಿತೆಗಳನ್ನು ಜನವರಿ 1, 2012ರ ಒಳಗೆ ತಲುಪುವಂತೆ ರೂಪ ಹಾಸನ, ಪ್ರೇರಣಾ, ಉತ್ತರ ಬಡಾವಣೆ, ಹಾಸನ-573201 ಅಥವಾ rupahassan@gmail.com <mailto:rupahassan@gmail.com> ಇಲ್ಲಿಗೆ ಕಳುಹಿಸಿಕೊಡಬೇಕೆಂದು ಕೋರುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ ಸುಬ್ಬು ಹೊಲೆಯಾರ್-9483974089 ಅಥವಾ ರೂಪ ಹಾಸನ-08172-263881 ಸಂಪಕರ್ಿಸಬಹುದಾಗಿದೆ.







0 Comments