ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಪೂಜಿಗೆ ನೂರರ ಮೇಲೈವತ್ತಂತೆ…

ಗಾಂಧಿತ್ವ

ಮುಕುಂದಾ ಬೃಂದಾ

ಚರಕ ತಿರುವಿದವಗೆ
ಕಾಲಚಕ್ರದ ಗಣತಿ
ನೂಲ ನೇಯ್ದವಗೆ
ನೂರರ ಮೇಲೈವತ್ತಂತೆ

ತುಂಡುಪಂಚೆಯ
ಫಕೀರನ ಕೊಂಡಾಡಿ
ಉಂಡುಮೆರೆದವರ
ಹಿಂಡೂ ಹಿಂಡು ಎಲ್ಲೆಲ್ಲೂ

ಟೋಪಿ ಹಾಕಿ ತತ್ವಕ್ಕೆ
ಕೇಕೆ ಹೊಡೆಯುತ
ಆಟಾಟೋಪಗೈವರೇ
ಅತ್ತಿತ್ತ ಎತ್ತನೋಡಿದರಿಂದು

ಖಾದಿಹೊದ್ದು ಕರುಬಿ
ಹೂತುಹಾಕಿ ಸತ್ಯ
ನೇತುಹಾಕಿ ಗೋಡೆಗೆ
ನಿನ್ನ ಮಹಾತ್ಮನೆಂದರೋ

ಕಂಡು ಕದಡಿಹೋದೆಯಾ
ಇಲ್ಲಾ ಕಣ್ಮುಚ್ಚಿ
ಕುಳಿತೆಯಾ ಪುಡಾರಿಗಳ
ಕಟಪುತ್ಥಳಿಯಾಗಿಂದು

ಚಿಗುರುವೆಯ ಮತ್ತೆ
ಗಾಂಧಿತ್ವ ಮನದೊಳಿಂದು
ಇಲ್ಲಾ ಬರಿಬೂಟಾಟಿಕೆ
ತರ್ಪಣ ಹುತಾತ್ಮನಿಗೊಂದು…

‍ಲೇಖಕರು avadhi

3 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading