ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬಾನ ಖಾಲಿತನವ ಆಹ್ವಾನಿಸುತ್ತಾ…' – ನಳಿನಾ

ದಂಡೆ ದೋಣಿಯ ಅಳಲು

– ನಳಿನಾ

ಸಮುದ್ರದ ಎದೆಯ ಏರಿಳಿತಕ್ಕೆ ಧಸಕ್ಕನೆ ಸಿಕ್ಕಿ
ಮೂಲೆಗುಂಪಾದ ಮೀನು ಮೂತಿಯ ದೋಣಿಯ
ಬೆಕ್ಕಸ ಬೆರಗಾದ ಕಣ್ಣಿನ ಕತೆಯೊಳಗಣ
ದಣಿಯ ನೆನಪಿನ ಗೆರೆಗಳು
ಹೇಳುವುದು ನೂರು ವ್ಯಥೆ.
 
ನೂರಾರು ವರ್ಷಗಳ ಹಿಂದೆ
ತಯಾರಾಗಿ ಭರತವರ್ಷದ
ಬಾವುಟದ ಬಣ್ಣದೊಳು
ನಳನಳಿಸುತ್ತಾ, ಮೆರೆದ
ದೋಣಿಗೂ ಒಂದು ಮನಸ್ಸಿದೆ.
ತನ್ನ ದಣಿಯ ತುತ್ತಿನ ಚೀಲವ ತುಂಬಿಸಲಾಗದ
ಅದರ ಅಸಾಯಕತೆಯಲ್ಲೂ
ಮಾನವೀಯತೆಯ ಹತ್ತಾರು
ಮಜಲುಗಳಲ್ಲೆಲ್ಲಾ
ದಣಿಯ ಅಳಲು,

ಅವನ ಹೆಂಡತಿಯ ಹೊಸ ಸೀರೆಯ
ಕನಸು, ಮಗನ ಹೊಸ ಮೀನು ಹಿಡಿಯುವ
ತವಕಗಳು, ಹೀಗೆ ನೆನಪು ಕಣ್ತುಂಬುತ್ತವೆ.
 
ದಂಡೆಯ ಬಯಲಿಗೆ ಮೈಯೊಡ್ಡಿ
ಅಲ್ಲಾಡದೆ ನಿಂತರೂ, ದಣಿಯ
ಆತ್ಮದೊಂದಿಗೆ ತನ್ನ ನಿರ್ಗತಿಕ
ಸ್ಥಿತಿಯನ್ನು ನಿವೇದಿಸುತ್ತದೆ
ಅದೇ ಕಣ್ಣು.
ಏನು ಮಾಡಲಿ?
ವೃದ್ಧಾಪ್ಯದ ಘೋರ,
ಇದ್ದು, ಈಸಿ ಜೈಸಿದವನು,
ನಿನ್ನೊಂದಿಗೆ ಎದೆಯೊಡ್ಡಿ,
ಛಲವಾಗಿ ಹರಿದವನು ನಾನು,
ಮುದಿತನಕ್ಕೆ ಸಿಕ್ಕಿ ಕೃಷನಾಗಿ,
ಬಾನ ಖಾಲಿತನವ ಆಹ್ವಾನಿಸುತ್ತಾ,
ದೂರದ ಮಕ್ಕಳ ಮರಳು ಗುಡ್ಡೆಯಾಟಕ್ಕೆ
ನಗುತ್ತಾ, ಇಲ್ಲಿ ಕಲ್ಲಾಗಿ ನಿಲ್ಲಿಸಿರುವುದು
ಕಾಲ. ದಣಿಯ ಹೊಟ್ಟೆ ತುಂಬಿಸಿದ್ದು ಒಂದು ಕಾಲ.
 

‍ಲೇಖಕರು G

28 June, 2014

2 Comments

  1. mmshaik

    chennaagide..madam

  2. w basavaraj

    e kavithe istivayitu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading