ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಗೂರು ಚಂದ್ರು ಇನ್ನಿಲ್ಲ

ಹಿರಿಯ ಹಾಸ್ಯಲೇಖಕ ಶ್ರೀ ಬಿ ಎಸ್ ಚಂದ್ರಶೇಖರ್ (ಬಾಗೂರು ಚಂದ್ರು) ಇಂದು ಬೆಂಗಳೂರಿನಲ್ಲಿ ನಿಧನರಾದರು. ಇವರ ಹಾಸ್ಯಬರೆಹಗಳ ಮೊದಲ ಸಂಕಲನ ‘ಮದುವೆಯ ಉಡುಗೊರೆ’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿತ್ತು. ಬಾಗೂರು ಚಂದ್ರು ಅವರ ಆಯ್ದ ಬರೆಹಗಳ ಸಂಕಲನವನ್ನು ಅಂಕಿತ ಪುಸ್ತಕ ‘ಬೆಸ್ಟ್ ಆಫ್ ಬಾಗೂರು’ ಹೆಸರಿನಲ್ಲಿ ಇತ್ತೀಚೆಗಷ್ಟೆ ಪ್ರಕಟಿಸಿತ್ತು. ದೂರದರ್ಶನ ವೀಕ್ಷಕ ಸಂಶೋಧನಾ ವಿಭಾಗದ ನಿರ್ದೇಶಕರಾಗಿ ನಿವೃತ್ತರಾಗಿದ್ದ ಅವರು ಹಾಸ್ಯ ಬರಹಗಳಷ್ಟೇ ಅಲ್ಲದೆ ಸಮೂಹ ಮಾಧ್ಯಮಗಳ ಬಗೆಗೂ ಗಮನಾರ್ಹ ಕೃತಿಗಳನ್ನು ಬರೆದಿದ್ದಾರೆ. ಮಾಹಿತಿ:  ಶ್ರೀನಿಧಿ ಟಿ ಜಿ ಬಿ ಎಸ್ ಚಂದ್ರಶೇಖರ್ ಅವರು ಆಕಾಶವಾಣಿ, ದೂರದರ್ಶನ ಎರಡರಲ್ಲೂ ಕೆಲಸ ಮಾಡಿದವರು. ಮಾಧ್ಯಮ ಕುರಿತ ಬರವಣಿಗೆಯ ಬಗ್ಗೆ ಆರಂಭದಿಂದಲೂ ಆಸಕ್ತಿ ಇಟ್ಟುಕೊಂಡವರು. ವಿಸ್ತಾರವಾದ ಅಧ್ಯಯನ ನಡೆಸಿ ಅದಕ್ಕೆ ತಮ್ಮ ನೇರ ಅನುಭವಗಳನ್ನು ಮೇಳೈಸಿ, ಎಲ್ಲಾ ರೀತಿಯ ಸಂವಹನ ಮಾಧ್ಯಮಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ‘ಸಂವಹನ ಮಾಧ್ಯಮಗಳು’ ಕೃತಿ ರಚಿಸಿದ್ದಾರೆ. ಇವರ ಆಳವಾದ ನೋಟ ಈ ಪುಸ್ತಕದಲ್ಲಿ ಪ್ರತಿಫಲಿಸಿದೆ. ಹಂಪಿ ವಿಶ್ವವಿದ್ಯಾಲಯ ಹೊರತಂದಿರುವ ಈ ಪುಸ್ತಕದಲ್ಲಿ ಚಂದ್ರಶೇಖರ್ ಅವರು ಪತ್ರಿಕೆ, ರೇಡಿಯೋ, ಟೆಲಿವಿಷನ್ ಅಲ್ಲದೆ ಚಲನಚಿತ್ರ, ನೂತನ ಮಾಧ್ಯಮವಾದ ವೆಬ್ ಸೈಟ್ ವರೆಗೆ ಗಮನ ಹರಿಸಿದ್ದಾರೆ. ಸಂವಹನ, ಮಾಧ್ಯಮ ಅಧ್ಯಯನ ವಿಭಾಗವಂತೂ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳಲು ಒಳ್ಳೇ ಚೌಕಟ್ಟನ್ನು ಒದಗಿಸುತ್ತದೆ (‘ಮೀಡಿಯಾ ಮಿರ್ಚಿ’ಯಾ ಬುಕ್ ಟಾಕ್ ನಿಂದ)]]>

‍ಲೇಖಕರು G

21 January, 2011

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading