ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಗಿಲು ಸರಿಸಿ ಒಳ ಬಂದರೆ..

ಅಜ್ಜಿಮನೆ

ವಿನಿ ನಾಯಕ್ 

ಹಳೆ ಮನೆಯ
ಬಾಗಿಲಿಗೊಂದು
ಫಳ ಫಳ ಹೊಳೆಯುವ ಬೀಗ

she houseತುಳಸಿ ಕಟ್ಟೆಯಂಚಿನ
ಹಣತೆಯೊಳಗೊಂದು
ಒಣಗಿದ ಬತ್ತಿ

ಗುಡಿಸದೆ ಬಿಟ್ಟ
ಅಂಗಳದ ತುಂಬ
ಒಣಗಿದ ಎಲೆಯ ಕಸ
ಬಾಡಿ ಬೆಂಡಾಗಿ
ಕೋಲಂತೆ ಕಾಣುವ
ಗಿಡಗಳು.

ಊಟವಿಲ್ಲದೆ
ಕೃಶವಾಗಿ ಹೋದ
ಬಿಳಿ ಬೆಕ್ಕು.
ಬಾಗಿಸಿದ ಅನ್ನದ
ಘಮವಿಲ್ಲ
ಕೆಲಸದವಳಿನ್ನು ಬಂದಿಲ್ಲ
ಎಂಬ ಗೊಣಗಾಟವೂ ಇಲ್ಲ.

ಬಾಗಿಲು ಸರಿಸಿ
ಒಳ ಬಂದರೆ
ಅಕ್ಕರೆಯಿಂದ
ಕರೆಯುವರಾರಿಲ್ಲ.

ಅಜ್ಜಿಯೇ ಇಲ್ಲದ
ಅಜ್ಜಿಮನೆ ಇನ್ನು
ಬರಿಯ ಮನೆ ಮಾತ್ರ

‍ಲೇಖಕರು Admin

16 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading