ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಹಳ ಜನರನ್ನು ಕಾಡಿದ ಸಿನೆಮಾ

ಆಕೃತಿ ಗುರುಪ್ರಸಾದ್ 
Biffesನಲ್ಲಿ Capernaum ಸಿನೆಮಾ ಬಹಳ ಜನರನ್ನು ಕಾಡಿದೆ. ಬಹಳ ಜನ ಇದನ್ನು ಮೆಚ್ಚಿದ್ದಾರೆ. ಆ ಮಟ್ಟಿಗೆ ಒಂದು ಸಿನೆಮಾ ಹಲವು ಜನರ ಅಂತಃಕರಣವನ್ನು ಒಂದೇ ಬಾರಿಗೆ ಕಲಕಬಲ್ಲ, ಒಂದಷ್ಟು ಮಾನವೀಯ ಮೌಲ್ಯಗಳ ಬಗ್ಗೆ ಚಿಂತಿಸುವಂತೆ ಮಾಡಬಲ್ಲ ಜನಪ್ರಿಯ ಮಾಧ್ಯಮ.
ಜೀವಿಸಲು ಸರಿಯಾದ ದಾಖಲೆಗಳಿಲ್ಲದೆ ಸದಾ ಭಯದಲ್ಲೇ ಇರಬೇಕಾದ ನಿರಾಶ್ರಿತರು, ಅವರ ಬಗ್ಗೆ ಸಣ್ಣ ಕಂಪಾಶನ್ ಕೂಡ ತೋರದ ಸ್ಟೇಟ್, ಕೊನೆಗೆ ಯಾರೋ ಅಪರಿಚಿತರಿಂದ ಸಿಗುವ ಸಹಾಯ ಹೀಗೆ ಸಿರಿಯಾ ಇರಾಕ್ ಮತ್ತಿತರ ದೇಶಗಳು ಯುದ್ಧಕ್ಕೆ ತತ್ತರಿಸಿ ಹೋಗಿ ನಿರಾಶ್ರಿತರಿಗೆ ಯುರೋಪ್ ದೇಶಗಳು ಆಶ್ರಯ ನಿರಾಕರಿಸುತ್ತಿರುವ ಸಮಯದಲ್ಲಿ ಮೂಡುತ್ತಿರುವ ಇಂತಹ ಸಿನೆಮಾಗಳು ಎಲ್ಲೋ ಒಂದು ಕಡೆ ಆಶಾಕಿರಣ ಮೂಡಿಸಬಲ್ಲುವೆ? ಯಾವನೋ ಒಬ್ಬ ಇಮಿಗ್ರೇಷನ್ ಅಧಿಕಾರಿಯ ಹೃದಯದಲ್ಲಿ ಪ್ರೀತಿ ತುಂಬಬಲ್ಲವೇ?
shopliftersನಲ್ಲಿ ಕೂಡ ಹೀಗೆ ಅನಾಥರೆನಿಸಿಕೊಳ್ಳುವವರು ಒಟ್ಟಿಗೆ ಸೇರಿ ಪ್ರೀತಿಯಿಂದ ಬದುಕುವ ಕಥೆ ಇದೆ. TheOtherSideOfTheHopeನಲ್ಲೂ ಫಿನ್ ಲ್ಯಾನ್ಡ್ ಹಿರಿಯನೊಬ್ಬ ಸ್ಟೇಟ್ ನ ಕಾನೂನುಗಳನ್ನು ಪಕ್ಕಕೆ ಸರಿಸಿ, ಸಿರಿಯಾದ ನಿರಾಶ್ರಿತ ಯುವಕನಿಗೆ ತನ್ನ ಹೋಟೆಲ್ ನಲ್ಲಿ ಕೆಲಸ ಕೊಡುತ್ತಾನೆ. ಅವನಿಗೆ ಒಂದು ನಕಲಿ ದಾಖಲೆ ಸೃಷ್ಟಿಸಿಕೊಡುತ್ತಾನೆ. ಆತನ ತಂಗಿಯನ್ನು ತನ್ನ ದೇಶದ ಒಳಕ್ಕೆ ಬರಮಾಡಿಕೊಳ್ಳಲು ರಿಸ್ಕ್ ತೆಗೆದುಕೊಳ್ಳುತ್ತಾನೆ.
ಇವೆಲ್ಲಾ ನಮ್ಮ ನಾಡಿದ ಕ್ರೌರ್ಯವನ್ನು ಪ್ರತಿನಿಧಿಸುವುದಿಲ್ಲವೇ? TheCitizenshipAmendmentBill ನಿಂದ ವರ್ಷಾನುವರ್ಷಗಳಿಂದ ಬಾಂಗ್ಲಾ ಯುದ್ಧದಲ್ಲಿ ನಿರಾಶ್ರಿತರಾಗಿ ಭಾರತದ ಈಶಾನ್ಯರಾಜ್ಯಗಳಿಗೆ ವಲಸೆ ಬಂದ ಜನರ ಜೀವನದ ಮೇಲೆ ತೂಗುಕತ್ತಿ ಇದೆ. ಇದರಿಂದ ಅಲ್ಲಿನ ಅಷ್ಟೋ ಮಕ್ಕಳು ಅನಾಥರಾಗಬಹುದು. Capernaumದಲ್ಲಿ ಸಣ್ಣ ಮುಗ್ಧ ಮಕ್ಕಳ ಮೇಲೆ ಮೂಡಿದ ದೌರ್ಜನ್ಯ ಇಲ್ಲಿನ ಮಕ್ಕಳ ಮೇಲೂ ಆಗಬಹುದು.
Capernaum ನಮ್ಮಲ್ಲಿ ನಮ್ಮ ಸ್ಟೇಟ್ ನಡೆಸುತ್ತಿರುವ ಕ್ರೌರ್ಯದ ಬಗ್ಗೆಯೂ ನಮಗೆ ಪಾಪಪ್ರಜ್ಞೆ ಹುಟ್ಟಿಸಬೇಕು. ಅದರ ವಿರುದ್ಧ ಹೋರಾಡುವ ಒಂದು ಸಣ್ಣ ಭಾವನೆಯನ್ನೂ ಹುಟ್ಟಿಸಬೇಕು. ಅದು ಯಶಸ್ವಿಯಾಗಿದೆ ಅನ್ನಿಸುತ್ತೆ.

‍ಲೇಖಕರು avadhi

25 February, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading