ಬಸವರಾಜ ಕೋಡಗುಂಟಿ ಅಂಕಣ – ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಾತುಗರ ರಾಜ್ಯದ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

57

ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರಿರುವ ಬಾಶೆಗಳು

ಸಾವಿರಕ್ಕಿಂತ ಕಡಿಮೆ ಮಂದಿ ಮಾತುಗರು ದಾಕಲಾಗಿರುವ ಬಾಶೆಗಳ ಸಂಕೆ ಕರ‍್ನಾಟಕ ರಾಜ್ಯದಲ್ಲಿ ಮೂವತ್ಮೂರು ಇವೆ. ಇದರಲ್ಲಿ ಇಪ್ಪತ್ತೊಂದು ಬಾಶೆಗಳು ಎಂದು ದಾಕಲಾಗಿವೆ. ಇನ್ನುಳಿದ ಹನ್ನೆರಡು ಬಾಶೆಗಳು ವಿವಿದ ಬಾಶೆಗಳ ಒಳಗೆ ತಾಯ್ಮಾತುಗಳಾಗಿ ದಾಕಲಾಗಿವೆ. ಇವುಗಳಲ್ಲಿ ಹೆಚ್ಚಿನವು ಇತ್ತೀಚೆಗೆ ನಾಡಿಗೆ ದೇಶದ ವಿವಿದ ಮೂಲೆಗಳಿಂದ ವಲಸೆ ಬಂದವರು. 

ಕಡಿಮೆ ಸಂಕೆಯ ಮಾತುಗರು ಇರುವ ಬಾಶೆಗಳಲ್ಲಿ ಕೆಲವಕ್ಕೆ ಒಂದಕ್ಕಿಂತ ಹೆಚ್ಚು ತಾಯ್ಮಾತುಗಳು ದಾಕಲಾಗಿವೆ. ಆದರೆ, ಇಲ್ಲಿ ಮಾತುಗರ ಸಂಕೆಯು ತುಂಬಾ ಕಡಿಮೆ ಇರುವುದರಿಂದ ಅದರೊಳಗಿನ ತಾಯ್ಮಾತುಗಳನ್ನು ಬಿನ್ನವಾಗಿಸುವ ಪ್ರಯತ್ನವನ್ನು ಮಾಡಿಲ್ಲ. ಉಳಿದ ದೊಡ್ಡ ಬಾಶೆಗಳಿಗೆ ಎಲ್ಲೆಲ್ಲಿ ಸಾದ್ಯವೊ ಅಲ್ಲೆಲ್ಲ ತಾಯ್ಮಾತು ಎಂದು ದಾಕಲಾಗಿರುವವುಗಳನ್ನು ಪರಿಗಣಿಸಲಾಗಿದ್ದಿತು. ಆದರೆ, ಇಲ್ಲಿ ಬಾಶೆಯ ಸಂಕೆಯನ್ನು ಮಾತ್ರ ಪರಿಗಣಿಸಿ ಬಾಶೆಗಳನ್ನು ಪಟ್ಟಿಸಿದೆ. ಈಗಾಗಲೆ ಹೇಳಿರುವಂತೆ ಈ ಬಾಶೆಗಳಿಗೆ ದೇಶಮಟ್ಟದಲ್ಲಿ ಹತ್ತು ಸಾವಿರ ಮಂದಿ ದಾಕಲಾಗಿದ್ದು ಕರ‍್ನಾಟಕ ರಾಜ್ಯದಲ್ಲಿ ಆ ಬಾಶೆಗಳ ಮಾತುಗರ ಸಂಕೆ ಕಡಿಮೆ ಇದೆ.

ಇದರಲ್ಲಿ ನಾಲ್ಕು ಬಾಶೆಗಳಿಗೆ ಮಾತುಗರ ಸಂಕೆ ಸಾವಿರಕ್ಕಿಂತ ಕಡಿಮೆ ಮತ್ತು ಅಯ್ದು ನೂರಕ್ಕಿಂತ ಹೆಚ್ಚು ಇದೆ. ಅವುಗಳೆಂದರೆ ಬೊಟಿಯ (888), ಡೋಗ್ರಿ (834), ಮೊನ್ಪ (767) ಮತ್ತು ಲಡಾಕಿ (666). 

ಇವುಗಳ ನಂತರ ಹದಿನಾಲ್ಕು ಬಾಶೆಗಳಿಗೆ ಅಯ್ದು ನೂರಕ್ಕಿಂತ ಕಡಿಮೆ ಮತ್ತು ಒಂದು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾಗಿದ್ದಾರೆ. ಅವುಗಳೆಂದರೆ ಕಾಂದೇಶಿ (490), ಲುಶಾಯಿ/ಮಿಜೊ (453), ಕಾಸಿ (359), ಲಹಂದ (289), ಕುರುಕ್/ಓರಾನ್ (284), ಕೊಡ/ಕೊರ (227), ತಂಗ್ಕುಲ್ (209), ಮುಂಡ (176), ಆದಿ (136), ತಾಡೊ (133), ಕೊರ‍್ವ (132), ಕೊಂಡ/ಕೊಂದ (125), ಪಯ್ತೆ (118), ತ್ರಿಪುರಿ (114) ಮತ್ತು ಕುಕಿ (111). 

ಬೊಟಿಯ888
ಡೋಗ್ರಿ834
ಮೊನ್ಪ767
ಲಡಾಕಿ666
ಕಾಂದೇಶಿ490
ಲುಶಾಯಿ/ಮಿಜೊ453
ಬೊಡೊ439
ಕಾಸಿ359
ಸಂತಾಲಿ311
ಲಹಂದ289
ಕುರುಕ್/ಓರಾನ್284
ಕೊಡ/ಕೊರ227
ತಂಗ್ಕುಲ್209
ಮುಂಡ176
ಆದಿ136
ತಾಡೊ133
ಕೊರ‍್ವ132
ಕೊಂಡ್125
ಪಯ್ಟೆ118
ತ್ರಿಪುರಿ114
ಕುಕಿ111

ಇನ್ನು ಬೇರೆ ಬೇರೆ ಬಾಶೆಗಳ ಕೆಳಗೆ ತಾಯ್ಮಾತುಗಳಾಗಿ ದಾಕಲಾಗಿರುವ ಹಲವಾರು ಬಾಶೆಗಳಿಗೆ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ರಾಜ್ಯದಲ್ಲಿ ದಾಕಲಾಗಿದ್ದಾರೆ. ಇಂತಾ ಹದಿನಾರು ಬಾಶೆಗಳು ಸಿಗುತ್ತವೆ. ಇಲ್ಲಿ ಕೆಳಗೆ ಈ ಪಟ್ಟಿಯನ್ನು ತಯಾರಿಸಿ ಕೊಟ್ಟಿದೆ.

ಇವುಗಳಲ್ಲಿ ನಾಲ್ಕು ಬಾಶೆಗಳಿಗೆ ಸಾವಿರಕ್ಕಿಂತ ಕಡಿಮೆ ಮತ್ತು ಅಯ್ದು ನೂರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಅವುಗಳೆಂದರೆ, ಹಿಂದಿ ಒಳಗಿನ ಹರಿಯಾಣ್ವಿ (690), ಕನ್ನಡದ ಒಳಗಿನ ಬಡಗ (619), ಬಿಲಿಯ ಒಳಗಿನ ವಾಗ್ದಿ (575), ತಮಿಳಿನ ಒಳಗಿನ ಕಯ್ಕಾಡಿ (523), ಇವುಗಳಿಗೆ ಅಯ್ದು ನೂರಕ್ಕಿಂತ ಹೆಚ್ಚು ಮತ್ತು ಸಾವಿರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಇನ್ನುಳಿದ ಹನ್ನೆರಡು ಬಾಶೆಗಳಿಗೆ ಅಯ್ದು ನೂರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. 

ಇದರಲ್ಲಿ ಹಿಂದಿ ಒಳಗೆ ದಾಕಲಾದ ಏಳು ಬಾಶೆಗಳು ಇವೆ. ಉಳಿದಂತೆ ಕ್ರಮವಾಗಿ ಕನ್ನಡ ಮತ್ತು ಬಿಲಿ/ಬಿಲೊಡಿ ಬಾಶೆಗಳಲ್ಲಿ ಎರಡು ಬಾಶೆಗಳು ದಾಕಲಾಗಿವೆ. ಇನ್ನುಳಿದಂತೆ ಕಾಶ್ಮೀರಿ, ತಮಿಳು, ತೆಲುಗು, ಬೊಡೊ ಮತ್ತು ಮಲಯಾಳಂ ಬಾಶೆಗಳ ಒಳಗೆ ಒಂದೊಂದು ಬಾಶೆಗಳು ದಾಕಲಾಗಿವೆ.  

ಹಿಂದಿ-ಹರಿಯಾಣ್ವಿ690
ಕನ್ನಡ-ಬಡಗ619
ಬಿಲಿ/ಬಿಲೊಡಿ-ವಾಗ್ದಿ575
ತಮಿಳು-ಕಯ್ಕಾಡಿ523
ಬಿಲಿ/ಬಿಲೊಡಿ-ಪರದಿ454
ಬೊಡೊ-ಬೊಡೊ/ಬೊರೊ430
ಕಾಶ್ಮೀರಿ-ದಾರ‍್ದಿ403
ಕನ್ನಡ-ಪ್ರಾಕ್ರುತ/ ಪ್ರಾಕ್ರುತ ಬಾಶಾ385
ಹಿಂದಿ-ಗರ‍್ವಾಲಿ381
ಮಲಯಾಳಂ-ಪಣಿಯ257
ತೆಲುಗು-ವಡರಿ204
ಹಿಂದಿ-ಕುಮೋನಿ201
ಹಿಂದಿ-ಪಹರಿ163
ಹಿಂದಿ-ಸದನ್/ಸಾದ್ರಿ152
ಹಿಂದಿ-ಮಗದಿ/ಮಗಹಿ144
ಹಿಂದಿ-ಚತ್ತೀಸ್ಗರಿ139

‍ಲೇಖಕರು avadhi

May 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: