ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ –ಮರಾಟಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

35

ಮರಾಟಿ ಕರ‍್ನಾಟಕದ ನಾಲ್ಕನೆ ಅತಿದೊಡ್ಡ ಬಾಶೆ. ಕರ‍್ನಾಟಕದಲ್ಲಿ ಮರಾಟಿ ಮಾತುಗರ ಸಂಕೆ 20,64,906 ಆಗಿದೆ. ಇದು ದೇಶದ ಒಟ್ಟು ಮರಾಟಿ ಮಾತುಗರ 2.487% ಆಗುತ್ತದೆ. ಮರಾಟಿ ಬಾಶೆಯಲ್ಲಿ ಮೂರು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದಾಕಲಾಗಿವೆ. ಅವು, ಆರೆ (50,339), ಕೋಳಿ (9), ಮರಾಟಿ (20,13,090) ಮತ್ತು ಇತರ (1,468). ಇಲ್ಲಿ ಮರಾಟಿ ಮಾತಾಡುವ ಬಹುದೊಡ್ಡ ಸಂಕೆಯ ಮಂದಿ ಇದ್ದಾರೆ. ಅದರೊಟ್ಟಿಗೆ ಆರೆ ಮಾತಾಡುವವರ ಸಂಕೆಯೂ ಪರಿಗಣಿಸುವಶ್ಟಿದೆ. 

ಮರಾಟಿ ಮಾತಾಡುವವರನ್ನು ಗಮನಿಸಿದಾಗ ಹೆಚ್ಚಿನ ಸಂಕೆಯ ಮರಾಟಿಗರು ಬೆಳಗಾವಿ (8,93,878) ಜಿಲ್ಲೆಯಲ್ಲಿ ಇರುವುದು ಕಾಣಿಸುತ್ತದೆ. ಕರ‍್ನಾಟಕದ ಮರಾಟಿಗರ ಒಟ್ಟು ಸುಮಾರು 45% ಮಂದಿ ಅಂದರೆ ಸುಮಾರು ಒಂಬತ್ತು ಲಕ್ಶದಶ್ಟು ಮಂದಿ ಬೆಳಗಾವಿಯಲ್ಲೆ ಇದ್ದಾರೆ. ಇದರ ಹೊರತಾಗಿ ಬೀದರಿನಲ್ಲಿ (3,13,176) ಮೂರು ಲಕ್ಶಕ್ಕೂ ಹೆಚ್ಚು ಮಂದಿ, ಬೆಂಗಳೂರಿನಲ್ಲಿ (1,84,459) ಎರಡು ಲಕ್ಶದಶ್ಟು ಮಂದಿ ಮತ್ತು ಕಾರವಾರ (1,36,720) ಜಿಲ್ಲೆಯಲ್ಲಿ ಒಂದೂವರೆ ಲಕ್ಶದಶ್ಟು ಮಂದಿ ಇದ್ದಾರೆ. ಕರ‍್ನಾಟಕದ 75%ಕ್ಕೂ ಹೆಚ್ಚು ಮಂದಿ ಮರಾಟಿಗರು ಈ ನಾಲ್ಕು ಜಿಲ್ಲೆಗಳಲ್ಲಿಯೆ ದಾಕಲಾಗಿದ್ದಾರೆ. ಉಳಿದಂತೆ ಹದಿಮೂರು ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮತ್ತು ಇನ್ನೂ ಹದಿಮೂರು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮಂದಿ ಇದ್ದಾರೆ. 

ಇಲ್ಲಿ ಕೆಳಗೆ ಮರಾಟಿ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ. 

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ6,10,95,29720,13,0903.295%100%
ಬೆಳಗಾವಿ47,79,6618,93,87818.701%44.403%
ಬೀದರ17,03,3003,13,17618.386%15.556%
ಬೆಂಗಳೂರು96,21,5511,84,4591.917%9.162%
ಉತ್ತರ ಕನ್ನಡ14,37,1691,36,7209.513%6.791%
ಕಲಬುರಗಿ25,66,32663,2902.466%3.143%
ದಾರವಾಡ18,47,02358,1693.149%2.889%
ವಿಜಯಪುರ21,77,33153,7342.467%2.669%
ಶಿವಮೊಗ್ಗ17,52,75336,7592.097%1.825%
ಮಯ್ಸೂರು30,01,12733,7081.123%1.674%
ಉಡುಪಿ11,77,36133,3232.830%1.655%
ಬಾಗಲಕೋಟೆ18,89,75228,0321.483%1.392%
ಬಳ್ಳಾರಿ24,52,59519,9100.811%0.989%
ದಕ್ಶಿಣ ಕನ್ನಡ20,89,64918,5850.889%0.923%
ದಾವಣಗೆರೆ19,45,49717,6210.905%0.875%
ತುಮಕೂರು26,78,98013,2650.495%0.658%
ಕೋಲಾರ15,36,40110,4260.678%0.517%
ರಾಯಚೂರು19,28,81210,1750.527%0.505%
ಚಿಕ್ಕಮಗಳೂರು11,37,9619,8170.862%0.487%
ಹಾವೇರಿ15,97,6689,5420.597%0.473%
ಯಾದಗಿರಿ11,74,2719,4870.807%0.471%
ಮಂಡ್ಯ18,05,7697,9230.438%0.393%
ಗದಗ10,20,7917,8130.765%0.388%
ಹಾಸನ17,76,4217,4830.421%0.371%
ಕೊಪ್ಪಳ13,89,9216,9610.500%0.345%
ರಾಮನಗರ10,82,6366,9140.638%0.343%
ಚಿತ್ರದುರ‍್ಗ16,59,4566,2120.374%0.308%
ಬೆಂಗಳೂರು ಗ್ರಾಮಾಂತರ9,90,9236,1170.617%0.289%
ಚಿಕ್ಕಬಳ್ಳಾಪುರ12,55,1045,4760.436%0.272%
ಕೊಡಗು5,54,5192,7170.489%0.134%
ಚಾಮರಾಜನಗರ10,20,7911,3980.136%0.069%

 ಮರಾಟಿ ಮಾತುಗರ ಹಂಚಿಕೆ 

C:\Users\DELL\Downloads\distribution of Marati2.jpg

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

10 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading