ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಬೋಜ್ಪುರಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

55

ಬೋಜ್ಪುರಿ ಹಿಂದಿಯ ಒಳಗೆ ತಾಯ್ಮಾತು ಆಗಿ ದಾಕಲಾಗಿದೆ. ಬೋಜ್ಪುರಿಗೆ ದೊಡ್ಡ ಸಂಕೆಯ ಮಾತುಗರಿದ್ದು ಬಾರತದ ಪ್ರಮುಕ ಬಾಶೆಗಳಲ್ಲಿ ಒಂದಾಗಿದೆ. ದೇಶದಲ್ಲಿ ಬೋಜ್ಪುರಿಗೆ ದಾಕಲಾದ ಮಾತಗರ ಸಂಕೆ 5,05,79,447. ಇದರಲ್ಲಿ ಕರ‍್ನಾಟಕದಲ್ಲಿ ದಾಕಲಾದ ಬೋಜ್ಪುರಿಗಳು 7,675. ಇದು ದೇಶದ ಒಟ್ಟು ಬೋಜ್ಪುರಿಗಳ 0.015% ಆಗುತ್ತದೆ. ಇದು ಕರ‍್ನಾಟಕದ ಒಟ್ಟು ಜನಸಂಕೆಯಲ್ಲಿ 0.012% ರೂಪಿಸುತ್ತದೆ. 

ಕರ‍್ನಾಟಕದಲ್ಲಿ ದಾಕಲಾದ ಬೋಜ್ಪುರಿಗಳಲ್ಲಿ ಹೆಚ್ಚಿನವರು ಅಂದರೆ 4,948 ಮಂದಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೆ ಕಂಡುಬರುತ್ತಾರೆ. ಇದು ಕರ‍್ನಾಟಕದ ಬೋಜ್ಪುರಿಗಳ 64.469% ಆಗುತ್ತದೆ. ಬೆಂಗಳೂರು ಹೊರತು ಪಡಿಸಿ ಕರ‍್ನಾಟಕದ ಹತ್ತು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮತ್ತು ಉಳಿದ ಹತ್ತೊಂಬತ್ತು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ಬೋಜ್ಪುರಿಗಳು ದಾಕಲಾಗಿದ್ದಾರೆ.

ಇಲ್ಲಿ ಕೆಳಗೆ ಬೋಜ್ಪುರಿ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ.

ಪ್ರದೇಶಜಿಲ್ಲೆಯ ಜನಸಂಕೆಮಾತುಗರು ಆ ಜಿಲ್ಲೆಯ %ಆ ಬಾಶೆಯ % 
ಕರ‍್ನಾಟಕ 6,10,95,2977,6750.012%100%
ಬೆಂಗಳೂರು ನಗರ  47,79,6614,9480.103%64.469%
ದಕ್ಶಿಣ ಕನ್ನಡ  18,89,7525510.029%7.179%
ಬಳ್ಳಾರಿ 21,77,3314330.019%5.641%
ಬೆಳಗಾವಿ 17,03,3003620.021%4.716%
ಉತ್ತರ ಕನ್ನಡ 19,28,8123100.016%4.039%
ಹಾವೇರಿ 13,89,9212110.015%2.749%
ಬೀದರ  10,20,7911590.015%2.071%
ಬೆಂಗಳೂರು ಗ್ರಾಮಂತರ 18,47,0231400.007%1.824%
ಉಡುಪಿ  14,37,1691180.008%1.537%
ಮಂಡ್ಯ 15,97,6681180.007%1.537%
ಕಲಬುರಗಿ  24,52,5951030.004%1.342%
ಮಯ್ಸೂರು  16,59,456821.068%
ವಿಜಯಪುರ 19,45,497520.677%
ಬಾಗಲಕೋಟೆ  17,52,753410.534%
ಕೋಲಾರ 11,77,361350.456%
ರಾಮನಗರ  11,37,961300.390%
ತುಮಕೂರು 26,78,980290.377%
ಚಿಕ್ಕಮಗಳೂರು 96,21,551270.482%
ಹಾಸನ 18,05,769250.325%
ಕೊಪ್ಪಳ 17,76,421240.312%
ಶಿವಮೊಗ್ಗ 20,89,649160.208%
ಕೊಡಗು 5,54,519160.208%
ರಾಯಚೂರು  30,01,127130.169%
ದಾವಣಗೆರೆ 10,20,791120.156%
ದಾರವಾಡ  25,66,326110.143%
ಯಾದಗಿರಿ  11,74,27190.117%
ಗದಗ  15,36,40140.052%
ಚಿತ್ರದುರ‍್ಗ 12,55,10430.039%
ಚಿಕ್ಕಬಳ್ಳಾಪುರ 9,90,92310.013%
ಚಾಮರಾಜನಗರ 10,82,63610.013%

ಬೋಜ್ಪುರಿ ಮಾತುಗರ ಹಂಚಿಕೆ

‍ಲೇಖಕರು avadhi

20 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading