ಬಸವರಾಜ ಕೋಡಗುಂಟಿ ಅಂಕಣ – ದಾವಣಗೆರೆ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ದಾವಣಗೆರೆ ಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

15

ದಾವಣಗೆರೆ

ದಾವಣಗೆರೆ ಜಿಲ್ಲೆಯಲ್ಲಿ ಕನಿಶ್ಟ ಮೂವತ್ತಯ್ದು ಬಾಶೆಗಳು ಮತ್ತು ಅರ‍್ವತ್ನಾಲ್ಕು ತಾಯ್ಮಾತುಗಳು ಬಳಕೆಯಲ್ಲಿವೆ. ಜಿಲ್ಲೆಯಲ್ಲಿ ಕನ್ನಡ ಮಾತಾಡುವವರ ಸಂಕೆ ಸುಮಾರು 78% ಇದೆ. ಉರ‍್ದು ಎರಡೂವರೆ ಲಕ್ಶದಶ್ಟು ಮಂದಿಯೊಂದಿಗೆ ಜಿಲ್ಲೆಯ ಪ್ರದಾನ ಬಾಶೆಯಾಗಿದೆ. ಜಿಲ್ಲೆಯ ಮೂರನೆ ದೊಡ್ಡ ಬಾಶೆಯಾಗಿ ಲಂಬಾಣಿ ಕಾಣಿಸುವುದು ಗಮನೀಯ. ತೆಲುಗು ಕೂಡ ಜಿಲ್ಲೆಯ ದೊಡ್ಡ ಬಾಶೆಯಾಗಿದೆ.

***

ಜನಗಣತಿ ಒದಗಿಸಿರುವ ಮಾಹಿತಿಯನ್ನು ಆದರಿಸಿ ದಾವಣಗೆರೆ ಜಿಲ್ಲೆಯ ಮಾಹಿತಿಯನ್ನು ಇಲ್ಲಿ ಜೋಡಿಸಿ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ11110
ಆಸ್ಸಾಮಿ880
ಇತರ330
ಬೆಂಗಾಲಿ26217983
ಬೆಂಗಾಲಿ26217983
ಬೊಡೊ110
ಬೊಡೊ110
ಡೋಗ್ರಿ220
ಡೋಗ್ರಿ220
ಗುಜರಾತಿ20421063979
ಗುಜರಾತಿ1209624585
ಸವರಾಶ್ಟ್ರ/ಸವರಾಶ್ಟ್ರಿ633
ಇತರ827436391
ಹಿಂದಿ800134092839085
ಬಂಜಾರಿ260013051295
ಬೋಜ್ಪುರಿ1275
ಗರ‍್ವಾಲಿ211
ಹರಿಯಾಣ್ವಿ523
ಹಿಂದಿ575332562497
ಲಮಾಣಿ/ಲಂಬಾಡಿ694013519334208
ಮಗದಿ/ಮಗಹಿ220
ಮಾರ‍್ವಾರಿ1870972898
ರಾಜಸ್ತಾನಿ325167158
ಸಾದನ್/ಸಾದ್ರಿ211
ಇತರ412219
ಕನ್ನಡ1516084768718747366
ಕನ್ನಡ1513297767324745973
ಕುರುಬ/ಕುರುಂಬ241113
ಪ್ರಾಕ್ರುತ/ಪ್ರಾಕ್ರುತ ಬಾಶಾ422
ಇತರ275913811378
ಕಾಶ್ಮೀರಿ1798
ಕಾಶ್ಮೀರಿ1798
ಕೊಂಕಣಿ546828662602
ಕೊಂಕಣಿ545128572594
ಕುಡುಬಿ/ಕುಡುಂಬಿ422
ಇತರ1376
ಮಯ್ತಿಲಿ440
ಮಯ್ತಿಲಿ440
ಮಲಯಾಳಂ1249611638
ಮಲಯಾಳಂ1242608634
ಯರವ422
ಇತರ312
ಮಣಿಪುರಿ321
ಮಣಿಪುರಿ321
ಮರಾಟಿ1773889308808
ಆರೆ211
ಮರಾಟಿ 1762188668755
ಇತರ1156352
ನೇಪಾಲಿ644222
ನೇಪಾಲಿ644222
ಓಡಿಯಾ945539
ಓಡಿಯಾ905238
ಇತರ431
ಪಂಜಾಬಿ542925
ಪಂಜಾಬಿ542925
ಸಂಸ್ಕ್ರುತ725
ಸಂಸ್ಕ್ರುತ725
ಸಿಂದಿ391821
ಕಚ್ಚಿ241014
ಸಿಂದಿ1587
ತಮಿಳು1045553285127
ತಮಿಳು1045553285127
ತೆಲುಗು549042758127323
ತೆಲುಗು548992757827321
ಇತರ532
ಉರ‍್ದು254486128778125708
ಉರ‍್ದು254482128774125708
ಬನ್ಸಾರಿ330
ಇತರ110
ಅರಾಬಿಕ್/ಅರ‍್ಬಿ422
ಅರಾಬಿಕ್/ಅರ‍್ಬಿ422
ಬಿಲಿ/ಬಿಲೊಡಿ16106
ಇತರ16106
ಕೂರ‍್ಗಿ/ಕೊಡಗು623428
ಕೂರ‍್ಗಿ/ಕೊಡಗು734
ಕೊಡವ553124
ಇಂಗ್ಲೀಶು945539
ಇಂಗ್ಲೀಶು945539
ಗೊಂಡಿ277141136
ಗೊಂಡಿ277141136
ಕೊಂಡ್110
ಕೊಂಡ್110
ಕೊಂಡ110
ಕೊಂಡ110
ಲಕೇರ್110
ಮರ110
ಲುಶಾಯಿ/ಮಿಜೊ 220
ಲುಶಾಯಿ/ಮಿಜೊ 220
ನಿಸ್ಸಿ/ದಪ್ಲ101
ಅಪ್ತಾನಿ101
ಪೊಚುರಿ431
ಪೊಚುರಿ431
ಟಿಬೆಟನ್844
ಟಿಬೆಟನ್844
ತುಳು958466492
ತುಳು957465492
ಇತರ110
ಇತರ1071523548

ದಾವಣಗೆರೆ ಜಿಲ್ಲೆಯಲ್ಲಿ ಜನಗಣತಿ ಪ್ರಕಾರ ಬಳಕೆಯಲ್ಲಿರುವ ಬಾಶೆಗಳ ಸಂಕೆ ಮೂವತ್ನಾಲ್ಕು. ಇತರ ಎಂಬ ಒಂದು ಗುಂಪನ್ನು ಸೇರಿಸಿದಾಗ ಇದು ಮೂವತ್ತಯ್ದು ಆಗುತ್ತದೆ. ಇತರ ಎಂಬ ಗುಂಪಿನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ದಾಕಲಾಗಿದ್ದಾರೆ. ಅದನ್ನು ಒಂದು ಎಂದು ಲೆಕ್ಕ ಹಿಡಿದಿದೆ. ಒಟ್ಟು ಅರವತ್ಮೂರು ತಾಯ್ಮಾತುಗಳನ್ನು ದಾವಣಗೆರೆ ಜಿಲ್ಲೆಯಲ್ಲಿ ದಾಕಲಿಸಿದೆ. ಇತರ ಎಂಬ ಗುಂಪನ್ನು ಒಂದು ತಾಯ್ಮಾತು ಎಂದು ಪರಿಗಣಿಸಿದರೆ ಅರವತ್ನಾಲ್ಕು ತಾಯ್ಮಾತುಗಳು ಆಗುತ್ತವೆ. ಹನ್ನೆರಡು ಬಾಶೆಗಳ ಒಳಗೆ ಇತರ ಎಂಬ ಗುಂಪನ್ನು ಕೊಟ್ಟಿದೆ. ಅವುಗಳೆಂದರೆ, ಆಸ್ಸಾಮಿ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಮರಾಟಿ, ಓಡಿಯಾ, ತೆಲುಗು, ಉರ‍್ದು, ಬಿಲಿ/ಬಿಲೊಡಿ ಮತ್ತು ತುಳು. ಇವುಗಳನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಹೆಸರಿಸಲಾದ ತಾಯ್ಮಾತುಗಳ ಸಂಕೆ ಅಯ್ವತ್ತೆರಡು. 

ದಾವಣಗೆರೆ ಜಿಲ್ಲೆಯಲ್ಲಿ ಇರುವ ಒಟ್ಟು ಜನಸಂಕೆ 19,45,497 ಆಗಿದೆ. ಇದರಲ್ಲಿ ಕನ್ನಡ ಮಾತಾಡುವ ಮಂದಿ 15,16,084 ಇದ್ದಾರೆ. ಇದು ಜಿಲ್ಲೆಯ 77.927% ಆಗುತ್ತದೆ. ಹತ್ತು ಲಕ್ಶಕ್ಕೂ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾಗಿದೆ. ಆನಂತರ ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಬಳಸುವ ಬಾಶೆ ಉರ‍್ದು ಆಗಿದೆ. ಉರ‍್ದು  ಮಾತುಗರು 2,54,486 (13.080%) ಆಗಿದ್ದಾರೆ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ನಾಲ್ಕು ಬಾಶೆಗಳು ಇವೆ. ಅವುಗಳೆಂದರೆ, ಹಿಂದಿ – 80,013 (4.112%), ತೆಲುಗು -54,904 (2.822%), ಮರಾಟಿ – 17,738 (0.911%) ಮತ್ತು ತಮಿಳು – 10,455 (0.537%). ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಮೂರು ಬಾಶೆಗಳು ಇವೆ, ಕೊಂಕಣಿ – 5,468 (0.281%), ಗುಜರಾತಿ – 2,042 (0.104%) ಮತ್ತು ಮಲಯಾಳಂ – 1,249 (0.064%). ಇವುಗಳ ಜೊತೆಗೆ ದಾವಣಗೆರೆ ಜಿಲ್ಲೆಯಲ್ಲಿ ದಾಕಲಾಗಿರುವ ಇತರ ಎಂಬ ಗುಂಪಿನಲ್ಲಿಯೂ ಸಾವಿರಕ್ಕೂ ಹೆಚ್ಚು ಮಂದಿ ಅಂದರೆ 1,071 ಮಂದಿ (0.055%) ದಾಕಲಾಗಿದ್ದಾರೆ. ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಇರುವ ಮೂರು ಬಾಶೆಗಳು, ತುಳು, ಗೊಂಡಿ ಮತ್ತು ಬೆಂಗಾಲಿ ಇವೆ. ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಇಪ್ಪತ್ತೆರಡು ಬಾಶೆಗಳು ಇವೆ. ದಾವಣಗೆರೆ ಜಿಲ್ಲೆಯ ಬಾಶೆಗಳನ್ನು ಈ ಅಂಕೆಸಂಕೆಯನ್ನು ಆದರಿಸಿ ಕೆಳಗಿನಂತೆ ಚಿತ್ರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ15,16,084 77.927%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,54,486 13.080%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಹಿಂದಿ 80,013 4.112%
’’ತೆಲುಗು54,904 2.822%
’’ಮರಾಟಿ17,738 0.911%
’’ತಮಿಳು 10,455 0.537%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಕೊಂಕಣಿ 5,468 0.281%
’’ಗುಜರಾತಿ2,042 0.104%
’’ಮಲಯಾಳಂ 1,249 0.064%
’’ಇತರ1,071 0.055%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ತುಳು, ಗೊಂಡಿ, ಬೆಂಗಾಲಿ1,4970.076%
ನೂರಕ್ಕಿಂತ ಕಡಿಮೆಇಪ್ಪತ್ತೆರಡು ಬಾಶೆಗಳು4900.025%
ಒಟ್ಟು ಮಾತುಗರು19,45,497100%

ಇನ್ನು ಜಿಲ್ಲೆಯ ತಾಯ್ಮಾತುಗಳನ್ನು ಕುರಿತು ಚರ‍್ಚೆಯನ್ನು ಮಾಡಬಹುದು. ಗುಜರಾತಿ ಬಾಶೆಯಲ್ಲಿ 2,042 ಮಂದಿ ಮಾತುಗರು ಇದ್ದಾರೆ. ಇದರೊಳಗೆ ಗುಜರಾತಿ ಮಾತನಾಡುವ 1,209 ಮಂದಿ ಮತ್ತು ಇತರ ಎಂಬ ಗುಂಪಿನಲ್ಲಿ 827 ಮಂದಿ ದಾಕಲಾಗಿದ್ದಾರೆ. 

ಹಿಂದಿಯ ಒಳಗೆ ದಾಕಲಾಗಿರುವ ಕರ‍್ನಾಟಕದ ಸಂದರ‍್ಬದಲ್ಲಿ ಮಹತ್ವವೆನಿಸುವ ಕೆಲವು ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಹಿಂದಿ 80,013

ಬಂಜಾರಿ 2,600

ಬೋಜ್ಪುರಿ 12

ಹಿಂದಿ 5,753

ಲಮಾಣಿ/ಲಂಬಾಡಿ 69,401 

ಮಾರ‍್ವಾರಿ 1,870

ರಾಜಸ್ತಾನಿ 325

ದಾವಣಗೆರೆ ಜಿಲ್ಲೆಯಲ್ಲಿ ಹಿಂದಿ ಮಾತನಾಡುವ 80,013 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಲಂಬಾಣಿ ಮಾತುಗರು ಬಹುತೇಕರು ಇದ್ದಾರೆ. ಲಮಾಣಿ ಹೆಸರಿನಲ್ಲಿ 69,401 ಮಂದಿ ಮತ್ತು ಬಂಜಾರಿ ಹೆಸರಿನಲ್ಲಿ 2,600 ಇದ್ದು ಇವೆರಡನ್ನು ಸೇರಿಸಿದಾಗ ಲಂಬಾಣಿ ಬಾಶೆಯ ಮಾತುಗರ ಸಂಕೆ 72,001 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 89.986% ಮತ್ತು ಜಿಲ್ಲೆಯ 3.700% ಆಗುತ್ತದೆ. ಹಿಂದಿ ಮಾತುಗರ ಸಂಕೆ ಕೇವಲ 5,753 ಇದೆ. ಇದು ಜಿಲ್ಲೆಯ ಹಿಂದಿಯ 7.190% ಮತ್ತು ಜಿಲ್ಲೆಯ 0.295% ಆಗುತ್ತದೆ. ಮಾರ‍್ವಾರಿ ಬಾಶೆಗೆ ಜಿಲ್ಲೆಯಲ್ಲಿ 1,870 (0.096%) ಇದ್ದಾರೆ. ಈಗ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರಿರುವ ಪಟ್ಟಿಗೆ ಲಂಬಾಣಿ ಬರುತ್ತದೆ ಮತ್ತು ಹಿಂದಿ ಅದರಿಂದ ಕೆಳಗಿಳಿದು ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರಿರುವ ಬಾಶೆಗಳ ಪಟ್ಟಿಗೆ ಬರುತ್ತದೆ. ಹಾಗೆಯೆ ಈ ಪಟ್ಟಿಗೆ ಮಾರ‍್ವಾರಿ ಬರುತ್ತದೆ. ಕನ್ನಡ ಬಾಶೆಯೊಳಗಿನ ಇತರ ಗುಂಪಿನಲ್ಲಿ ಪರಿಗಣಿಸುವಶ್ಟು ಅಂದರೆ 2,759 (0.141%) ಮಂದಿ ದಾಕಲಾಗಿದ್ದಾರೆ. ಈಗ ಈ ಚರ‍್ಚೆಯನ್ನು ಗಮನಕ್ಕೆ ತೆಗೆದುಕೊಂಡು ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮತ್ತೊಮ್ಮೆ ರಚಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ15,13,29777.784%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,54,48213.080%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಲಂಬಾಣಿ72,0013.700%
’’ತೆಲುಗು54,8992.821%
’’ಮರಾಟಿ17,6210.905%
’’ತಮಿಳು10,4550.537%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಹಿಂದಿ5,7530.295%
’’ಕೊಂಕಣಿ5,4510.280%
’’ಇತರ-ಕನ್ನಡ2,7590.141%
’’ಗುಜರಾತಿ2,0420.104%
’’ಮಾರ‍್ವಾರಿ1,8700.096%
’’ಮಲಯಾಳಂ 1,249 0.064%
’’ಇತರ1,071 0.055%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ದಾವಣಗೆರೆ19,45,497ಕನ್ನಡ15,13,29777.784%1
ಉರ‍್ದು2,54,48213.080%2
ಲಂಬಾಣಿ72,0013.700%3
ತೆಲುಗು54,8992.821%4
ಮರಾಟಿ17,6210.905%5
ತಮಿಳು10,4550.537%6
ಹಿಂದಿ5,7530.295%7
ಕೊಂಕಣಿ5,4510.280%8
ಕನ್ನಡ-ಇತರ2,7590.141%9
ಗುಜರಾತಿ2,0420.104%10

‍ಲೇಖಕರು Admin

June 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: