ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ
ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಈ ವಾರದ ಅಂಕಣದಲ್ಲಿ ಚಿತ್ರದುರ‍್ಗಜಿಲ್ಲೆಯ ಬಗ್ಗೆ ಬೆಳಕು
ಚೆಲ್ಲಲಾಗಿದೆ.
12
ಚಿತ್ರದುರ‍್ಗ
ಚಿತ್ರದುರ‍್ಗ ಜಿಲ್ಲೆಯಲ್ಲಿ ಸುಮಾರು 83% ಕನ್ನಡ ಬಾಶೆ ಬಳಕೆಯಲ್ಲಿದೆ. ಉರ‍್ದು ಮತ್ತು ತೆಲುಗು ಇಲ್ಲಿಯ ದೊಡ್ಡ ಬಾಶೆಗಳಾಗಿವೆ. ಲಂಬಾಣಿ ದೊಡ್ಡ ಸಂಕೆಯಲ್ಲಿ ಇಲ್ಲಿ ದಾಕಲಾಗಿರುವುದನ್ನು ಕಾಣಬಹುದು. ಆನಂತರ ತಮಿಳು ಪರಿಗಣಿಸುವಶ್ಟು ಮಂದಿಯನ್ನು ಹೊಂದಿದೆ. ಜಿಲ್ಲೆಯಲ್ಲಿ ಕನಿಶ್ಟ ಇಪ್ಪತ್ತಯ್ದು ಬಾಶೆಗಳು ಮತ್ತು ಕನಿಶ್ಟ ನಲ್ವತ್ತೊಂದು ತಾಯ್ಮಾತುಗಳು ಬಳಕೆಯಲ್ಲಿವೆ.
ಜನಗಣತಿಯು ಒದಗಿಸಿರುವ ಚಿತ್ರದುರ‍್ಗ ಜಿಲ್ಲೆಯ ಬಾಶಿಕ ಮಾಹಿತಿಯನ್ನು ಕೆಳಗೆ ಪಟ್ಟಿ ಮಾಡಿ ಕೊಟ್ಟಿದೆ.
| ಬಾಶೆ | ತಾಯ್ಮಾತು | ಒಟ್ಟು ಮಾತುಗರು | ಗಂಡು | ಹೆಣ್ಣು |
| ಆಸ್ಸಾಮಿ | 8 | 8 | 0 | |
| ಆಸ್ಸಾಮಿ | 8 | 8 | 0 | |
| ಬೆಂಗಾಲಿ | 84 | 61 | 23 | |
| ಬೆಂಗಾಲಿ | 84 | 61 | 23 | |
| ಗುಜರಾತಿ | 370 | 163 | 207 | |
| ಗುಜರಾತಿ | 344 | 149 | 195 | |
| ಸವರಾಶ್ಟ್ರ/ಸವರಾಶ್ಟ್ರಿ | 5 | 4 | 1 | |
| ಇತರ | 21 | 10 | 11 | |
| ಹಿಂದಿ | 44133 | 22382 | 21751 | |
| ಬಂಜಾರಿ | 53 | 29 | 24 | |
| ಬೋಜ್ಪುರಿ | 3 | 3 | 0 | |
| ಹಿಂದಿ | 4985 | 2698 | 2287 | |
| ಲಮಾಣಿ/ಲಂಬಾಡಿ | 37963 | 19048 | 18915 | |
| ಮಾರ‍್ವಾರಿ | 887 | 470 | 417 | |
| ರಾಜಸ್ತಾನಿ | 184 | 103 | 81 | |
| ಇತರ | 58 | 31 | 27 | |
| ಕನ್ನಡ | 1382860 | 701454 | 681406 | |
| ಕನ್ನಡ | 1382085 | 701074 | 681011 | |
| ಕುರುಬ/ಕುರುಂಬ | 17 | 10 | 7 | |
| ಇತರ | 758 | 370 | 388 | |
| ಕಾಶ್ಮೀರಿ | 9 | 3 | 6 | |
| ಕಾಶ್ಮೀರಿ | 9 | 3 | 6 | |
| ಕೊಂಕಣಿ | 353 | 172 | 181 | |
| ಕೊಂಕಣಿ | 345 | 166 | 179 | |
| ಕುಡುಬಿ/ಕುಡುಂಬಿ | 8 | 6 | 2 | |
| ಮಲಯಾಳಂ | 791 | 363 | 428 | |
| ಮಲಯಾಳಂ | 788 | 362 | 426 | |
| ಯರವ | 3 | 1 | 2 | |
| ಮಣಿಪುರಿ | 3 | 2 | 1 | |
| ಮಣಿಪುರಿ | 3 | 2 | 1 | |
| ಮರಾಟಿ | 6212 | 3160 | 3052 | |
| ಮರಾಟಿ | 6212 | 3160 | 3052 | |
| ನೇಪಾಲಿ | 31 | 14 | 17 | |
| ನೇಪಾಲಿ | 31 | 14 | 17 | |
| ಓಡಿಯಾ | 39 | 22 | 17 | |
| ಓಡಿಯಾ | 24 | 12 | 12 | |
| ಇತರ | 15 | 10 | 5 | |
| ಪಂಜಾಬಿ | 49 | 29 | 20 | |
| ಪಂಜಾಬಿ | 49 | 29 | 20 | |
| ಸಂಸ್ಕ್ರುತ | 1 | 1 | 0 | |
| ಸಂಸ್ಕ್ರುತ | 1 | 1 | 0 | |
| ತಮಿಳು | 13105 | 6558 | 6547 | |
| ತಮಿಳು | 13105 | 6558 | 6547 | |
| ತೆಲುಗು | 89382 | 44798 | 44584 | |
| ತೆಲುಗು | 89374 | 44793 | 44581 | |
| ಇತರ | 8 | 5 | 3 | |
| ಉರ‍್ದು | 121651 | 61449 | 60202 | |
| ಉರ‍್ದು | 121645 | 61446 | 60199 | |
| ಇತರ | 6 | 3 | 3 | |
| ಅರಾಬಿಕ್/ಅರ‍್ಬಿ | 16 | 8 | 8 | |
| ಅರಾಬಿಕ್/ಅರ‍್ಬಿ | 16 | 8 | 8 | |
| ಬಿಲಿ/ಬಿಲೊಡಿ | 55 | 30 | 25 | |
| ಇತರ | 55 | 30 | 25 | |
| ಬೊಟಿಯ | 23 | 13 | 10 | |
| ಇತರ | 23 | 13 | 10 | |
| ಕೂರ‍್ಗಿ/ಕೊಡಗು | 38 | 22 | 16 | |
| ಕೂರ‍್ಗಿ/ಕೊಡಗು | 4 | 2 | 2 | |
| ಕೊಡವ | 34 | 20 | 14 | |
| ಇಂಗ್ಲೀಶು | 55 | 29 | 26 | |
| ಇಂಗ್ಲೀಶು | 55 | 29 | 26 | |
| ಟಿಬೆಟನ್ | 1 | 1 | 0 | |
| ಟಿಬೆಟನ್ | 1 | 1 | 0 | |
| ತುಳು | 156 | 79 | 77 | |
| ತುಳು | 156 | 79 | 77 | |
| ಇತರ | 31 | 22 | 9 |
ಚಿತ್ರದುರ‍್ಗ ಜಿಲ್ಲೆಯಲ್ಲಿ ದಾಕಲಾಗಿರುವ ಒಟ್ಟು ಬಾಶೆಗಳ ಸಂಕೆ ಇಪ್ಪತ್ನಾಲ್ಕು. ಇತರ ಎಂಬ ಒಂದು ಗುಂಪನ್ನು ಒಂದು ಬಾಶೆ ಎಂದು ಪರಿಗಣಿಸಿ ಚಿತ್ರದುರ‍್ಗ ಜಿಲ್ಲೆಯಲ್ಲಿ ದಾಕಲಾದ ಬಾಶೆಗಳ ಸಂಕೆ ಇಪ್ಪತ್ತಯ್ದು ಎಂದೆನ್ನಬಹುದು. ಚಿತ್ರದುರ‍್ಗದಲ್ಲಿ ಒಟ್ಟು ನಲವತ್ತು ತಾಯ್ಮಾತುಗಳು ದಾಕಲಾಗಿವೆ. ಇತರ ಎಂಬ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ಎಣಿಸಿ ಒಟ್ಟು ನಲ್ವತ್ತೊಂದು ತಾಯ್ಮಾತುಗಳು ಎಂದೆನ್ನಬಹುದು. ಇವುಗಳಲ್ಲಿ ಎಂಟು ಬಾಶೆಗಳ ಒಳಗೆ ಇತರ ಎಂಬ ಗುಂಪು ಇದೆ. ಅಂದರೆ ಒಟ್ಟು ಮೂವತ್ತೆರಡು ತಾಯ್ಮಾತುಗಳನ್ನು ಹೆಸರಿಸಿದೆ.
ಚಿತ್ರದುರ‍್ಗ ಜಿಲ್ಲೆಯಲ್ಲಿನ ಒಟ್ಟು ಜನಸಂಕೆ 16,59,456. ಜಿಲ್ಲೆಯಲ್ಲಿ ಹೆಚ್ಚಿನ ಮಂದಿ ಮಾತಾಡುವ ಬಾಶೆ ಕನ್ನಡವಾಗಿದ್ದು ಹತ್ತು ಲಕ್ಶಕ್ಕೂ ಹೆಚ್ಚು ಮಂದಿ ಮಾತುಗರು ಇದ್ದಾರೆ. 13,82,860 ಮಂದಿ ಕನ್ನಡ ಮಾತಾಡುತ್ತಾರೆ. ಇದು ಜಿಲ್ಲೆಯ ಒಟ್ಟು ಜನಸಂಕೆಯ 83.332% ಆಗುತ್ತದೆ. ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆ ಉರ‍್ದು ಆಗಿದ್ದು 1,21,651 (7.330%) ಮಾತುಗರನ್ನು ಹೊಂದಿದೆ. ಆನಂತರ ಒಂದು ಲಕ್ಶಕ್ಕಿಂತ ಕಮ್ಮಿ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರನ್ನು ಹೊಂದಿರುವ ಮೂರು ಬಾಶೆಗಳು ಇವೆ. ತೆಲುಗು – 89,382 (5.386%), ಹಿಂದಿ – 44,133 (2.659%) ಮತ್ತು ತಮಿಳು – 13,105 (0.789%) ಈ ಮೂರು ಬಾಶೆಗಳಾಗಿವೆ.
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆ ಮರಾಟಿ ಮಾತ್ರ ಇದೆ. ಮರಾಟಿಗೆ 6,212 (0.374%) ಮಂದಿ ಮಾತುಗರು ಇದ್ದಾರೆ. ಸಾವಿರಕ್ಕಿಂತ ಕಡಿಮೆ ಮಂದಿ ಮಾತಾಡುವ ನಾಲ್ಕು ಬಾಶೆಗಳು ಇವೆ. ಅವು, ಮಲಯಾಳಂ, ಗುಜರಾತಿ, ಕೊಂಕಣಿ ಮತ್ತು ತುಳು. ಇನ್ನು ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಇಪ್ಪತ್ತೆರಡು ಬಾಶೆಗಳು ದಾಕಲಾಗಿವೆ. ಈಗ ಚಿತ್ರದುರ‍್ಗ ಜಿಲ್ಲೆಯ ಬಾಶೆಗಳನ್ನು ಕೆಳಗಿನಂತೆ ಪಟ್ಟಿಸಿ ತೋರಿಸಿದೆ.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಒಂದು ಲಕ್ಶಕ್ಕಿಂತ ಹೆಚ್ಚ | ಕನ್ನಡ | 13,82,860 | 83.332% |
| ’’ | ಉರ‍್ದು | 1,21,651 | 7.330% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ತೆಲುಗು | 89,382 | 5.386% |
| ’’ | ಹಿಂದಿ | 44,133 | 2.659% |
| ’’ | ತಮಿಳು | 13,105 | 0.789% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಮರಾಟಿ | 6,212 | 0.374% |
| ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು | ಮಲಯಾಳಂ, ಗುಜರಾತಿ, ಕೊಂಕಣಿ, ತುಳು | 1,670 | 0.100% |
| ನೂರಕ್ಕಿಂತ ಕಡಿಮೆ | ಇಪ್ಪತ್ತೆರಡು ಬಾಶೆಗಳು | 443 | 0.026% |
| ಒಟ್ಟು ಮಾತುಗರು | 16,59,456 | 100% |
ಇನ್ನು ಚಿತ್ರದುರ‍್ಗ ಜಿಲ್ಲೆಯಲ್ಲಿ ದಾಕಲಾಗಿರುವ ತಾಯ್ಮಾತುಗಳನ್ನು ಗಮನಿಸಿ ಅಂಕಿಸಂಕೆಗಳನ್ನು ವಿಶ್ಲೇಶಿಸಬಹುದು.
ಹಿಂದಿ 44,133
ಬಂಜಾರಿ 53
ಬೋಜ್ಪುರಿ 3
ಹಿಂದಿ 4,985
ಲಮಾಣಿ/ಲಂಬಾಡಿ 37,963
ಮಾರ‍್ವಾರಿ 887
ರಾಜಸ್ತಾನಿ 184
ಹಿಂದಿಯಲ್ಲಿ ಒಟ್ಟು 44,133 ಮಂದಿ ಮಾತುಗರು ದಾಕಲಾಗಿದ್ದಾರೆ. ಇದರಲ್ಲಿ ಹಿಂದಿ ಮಾತಾಡುವವರು 4,985 ಇದ್ದಾರೆ. ಇದು ಚಿತ್ರದುರ‍್ಗ ಜಿಲ್ಲೆಯ ಹಿಂದಿಯ 11.295% ಮತ್ತು ಜಿಲ್ಲೆಯ 0.300% ಆಗುತ್ತದೆ. ಲಮಾಣಿ ಹೆಸರಿನಲ್ಲಿ 37,963 ಮಂದಿ ಇದ್ದಾರೆ, ಹಾಗೆಯೆ ಬಂಜಾರಿ ಹೆಸರಲ್ಲಿ 53 ಮಂದಿ ಇದ್ದು, ಅವೆರಡನ್ನು ಸೇರಿಸಿ ಲಂಬಾಣಿ ಮಾತುಗರ ಸಂಕೆಯು 38,016 ಆಗುತ್ತದೆ. ಇದು ಹಿಂದಿಯ 86.139% ಆಗುತ್ತದೆ ಮತ್ತು ಜಿಲ್ಲೆಯ 2.290% ಆಗುತ್ತದೆ. ಉಳಿದಂತೆ ಜಿಲ್ಲೆಯಲ್ಲಿ ಬೇರೆ ತಾಯ್ಮಾತುಗಳಲ್ಲಿ ಹೆಚ್ಚಿನ ಬದಲಾವಣೆ ಕಾಣಿಸುವುದಿಲ್ಲ. ಈಗ ಲಂಬಾಣಿಯು ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಗಳ ಪಟ್ಟಿಗೆ ಬರುತ್ತದೆ ಮತ್ತು ಹಿಂದಿಯು ಅದರಿಂದ ಕೆಳಗಿಳಿದು ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರಿರುವ ಬಾಶೆಗಳ ಪಟ್ಟಿಗೆ ಬರುತ್ತದೆ. ಈ ಚರ್ಚೆಯನ್ನು ಗಮನಿಸಿ ಚಿತ್ರದುರ‍್ಗ ಜಿಲ್ಲೆಯ ಬಾಶೆಗಳನ್ನು ಇನ್ನೊಮ್ಮೆ ಇಲ್ಲಿ ವಿವರಿಸಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಒಂದು ಲಕ್ಶಕ್ಕಿಂತ ಹೆಚ್ಚ | ಕನ್ನಡ | 13,82,085 | 83.285% |
| ’’ | ಉರ‍್ದು | 1,21,645 | 7.330% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ತೆಲುಗು | 89,374 | 5.385% |
| ’’ | ಲಂಬಾಣಿ | 38,016 | 2.290% |
| ’’ | ತಮಿಳು | 13,105 | 0.789% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಮರಾಟಿ | 6,212 | 0.374% |
| ’’ | ಹಿಂದಿ | 4,985 | 0.300% |
ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಬಾಶೆ | ಮಾತುಗರು | ಜಿಲ್ಲೆಯ % | ಜಿಲ್ಲೆಯಲ್ಲಿ ಸ್ತಾನ |
| ಚಿತ್ರದುರ‍್ಗ | 16,59,456 | ಕನ್ನಡ | 13,82,085 | 83.285% | 1 |
| ಉರ‍್ದು | 1,21,645 | 7.330% | 2 | ||
| ತೆಲುಗು | 89,374 | 5.385% | 3 | ||
| ಲಂಬಾಣಿ | 38,016 | 2.290% | 4 | ||
| ತಮಿಳು | 13,105 | 0.789% | 5 | ||
| ಮರಾಟಿ | 6,212 | 0.374% | 6 | ||
| ಹಿಂದಿ | 4,985 | 0.300% | 7 | ||
| ಮಾರ‍್ವಾರಿ | 887 | 0.053% | 8 | ||
| ಮಲಯಾಳಂ | 788 | 0.047% | 9 | ||
| ಕನ್ನಡ-ಇತರ | 758 | 0.045% | 10 |






0 Comments