ಬಸವರಾಜ ಎಮ್ಮಿಯವರ
**
ಎರಡು ಅಕ್ಷರಗಳ ಜೋಡಿಸಿದರೆ
ಪ್ರೀತಿ ಹುಟ್ಟುತ್ತದೆ ಎಂದಾದರೆ
ಜೋಡಿಸಿಬಿಡೋಣ
ಅಗಲಿಕೆಗೂ ಜೋಡಣೆಗೂ ವ್ಯತ್ಯಾಸವಿರುವುದಂತೂ ಗೊತ್ತಿರುವ ಸಂಗತಿಯೇ!
ದಾರಿಯಲ್ಲಿ ಬಿದ್ದ ಎಲೆಗಳ ಬಾಚಿ ತಂದು
ಬೋಳಾದ ಮರದ ಟೊಂಗೆಗಳಿಗೆ
ಅಂಟಿಸಿಬಿಡೋಣ
ನಂಟಿಗೂ ಅಂಟಿಗೂ ವ್ಯತ್ಯಾಸವಿರುವುದಂತೂ
ಗೊತ್ತಿರುವ ಸಂಗತಿಯೇ!
ಮರದ ನೆರಳಲಿ ಸೂರ್ಯನ ಬೆಳಕಿಗೆ
ಬೆಚ್ಚಗೆ ತುಸುಕೂತು ಹಿಂದಾಡಿದ ಮಾತುಗಳ
ಮರೆಯೋಣ
ಮುನಿಸಿಗೂ ಮರುವಿಗೂ ವ್ಯತ್ಯಾಸವಿರುವುದಂತೂ
ಗೊತ್ತಿರುವ ಸಂಗತಿಯೇ!
ಸಾಕು ಸಾಕು ಎನ್ನುವಷ್ಟು
ಬೇಸರವಾದಾಗ
ಪ್ರೀತಿಯ ಹಂಚಿಕೊಳ್ಳುವ
ಮತ್ತೆ ಮತ್ತೆ ಬರುತ್ತೇನೆ
ಅದೇ ಪ್ರೀತಿಯ ಹೊತ್ತು ಚಿಂತಿಸಬೇಡ
ಪ್ರೀತಿಯ ಹಂಚಿಕೊಳ್ಳುವ
0 ಪ್ರತಿಕ್ರಿಯೆಗಳು