ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಲುಭಾರ ನಿನ್ನ ನೆನಪು..

ಎಚ್ ಕಾವ್ಯಶ್ರೀ 

 

 

ಕಣ್ಣ ತುಂಬ ತೂಗುತ್ತಿತ್ತು ನಿನ್ನ ನೆನಪ ತೊಟ್ಟಿಲು
ರೆಪ್ಪೆಯಂತೂ ಬಾಗುತ್ತಿತ್ತು ನಿನ್ನ ಕನಸು ಕದವ ತಟ್ಟಲು,
ಬಲುಭಾರ ನಿನ್ನ ನೆನಪು
she butterflieನೀನೇ ಕಟ್ಟಿಕೊಟ್ಟ ಕನಸೂ
ಜಗ್ಗಿದ ರಭಸಕೆ ಬೆಚ್ಚಿದೆ ಮಂಪರು
ಬಾಗುವ ರೆಪ್ಪೆಗೆ
ತೂಗುವ ಕಣ್ಣಿಗೆ
ಎಲ್ಲವೂ ಬೆರಗು
ಒಂದೊಂದು ಮಾತಿಗೂ
ಸಾವಿರ ಸಾವಿರ ಸಲ ತೂಗುವುದು

ಆ ಮೊದಲ ಸಂಜೆಗೆಂಪು
ತುದಿಬೆರಳ ನವಿರು ಹಸಿರು
ನೀಲಿಯೆದೆಯಾಗಸದಲ್ಲಿ
ಕಣ್ಣ ತುಂಬಿಕೊಂಡಷ್ಟೂ ಮಿಗುವ ಬಣ್ಣಗಳು

ಬಡಿವ ರೆಪ್ಪೆಗಳು ಹನಿಗಳ ಹೆತ್ತು
ಮೂಡಿದ್ದ ಚಿತ್ರವೀಗ ಕರಗಿ
ಕರಗಿ ಕಟ್ಟಿನಾಚೆ ಜಾರಿ
ಜಾರಿ ಬೀಳುತ್ತಿತ್ತು

ಹೌದು ನಂಬಿದುದು ಸಂದೇಹಿಸದು
ಆದರೆ
ನಂಬಿದವರು ಮಾತ್ರ ಬಯಲಾದರು
ರೆಪ್ಪೆಗಳು ಹಾರಿ ಹಗುರಾದವು

‍ಲೇಖಕರು Admin

30 May, 2016

2 Comments

  1. ಕಿರಣ್ ಕಾಂಗೋಕರ್

    ನನ್ನವಳ ನೆನಪು

    ನೀನೇ ಬೇಕೆಂದಿಲ್ಲ ನನಗೆ
    ನೀನೆಂಬ ನೆಪಸಾಕು ನಿನ್ನ ನೆನೆಯಲು

    ನೀ ಬಿಟ್ಟುಹೋದ ನೆನಪುಗಳನ್ನು
    ನಾ ಹೊರಲಾರದೆ ಮೂಟೆಯಲಿ ಕಟ್ಟಿಟ್ಟಿರುವೆ

    ನೀ ಕೊಟ್ಟ ಕಹಿ ನೆನಪುಗಳಲ್ಲಾ
    ನಿನ್ನ ಮುಂಗುರಳ ನೆನೆದೊಡೆ ಸಿಹಿಯಾದವು

    ಕಣ್ಣು ಮುಚ್ಚಿದರೆ ಸಾಕು
    ಕತ್ತಲೆಯ ಬದಲು ನಿನ್ನ ಮುದ್ದು ಮುಖವೇ ಕಾಣುವುದೆನಗೆ

    ಎಂದೋ ಕೇಳಿದ ನಿನ್ನ ಧ್ವನಿಯೇ ಸಾಕು
    ನಿನ್ನ ಕಳೆದುಹೋದ ನೆನಪುಗಳ ಹುಡುಕಲು

    ಎಂದೋ ಅಸ್ಪಷ್ಟವಾಗಿ ನೋಡಿದ ನಿನ್ನ ಮುದ್ದು ಮಖವೇ ಸಾಕು
    ನಿನ್ನ ಮರೆಯಾದ ನೆನಪುಗಳ ನೋಡಲು

    ನಿನ್ನ ಜೊತೆ ಕಳೆದ ಕೆಲಸಮಯ ಸಾಕು
    ನಿನ್ನ ಮರೆತ ನೆನಪುಗಳ ಕಲೆಹಾಕಲು

    ನಿನ್ನ ಗಲ್ಲ ಮೇಲೆ ಗೀಚಿದ ನನ್ನ ಉಗುರುಗಳೇ ಸಾಕು
    ನಿನ್ನ ಗುಳಿಬಿದ್ದ ಕೆಂಪುಗಲ್ಲ ನೆನೆಯಲು

    ನಿನ್ನ ಹೆಸರು ಕೇಳಿದರೆ ಸಾಕು
    ಸತ್ತುಹೋಹ ನೆನಪುಗಳಿಗೂ ಜೀವ ಬರುವುದು

    ನಿನ್ನ ನೆನೆಯಬಾರದೆಂದುಕೊಳ್ಳುವೆ
    ಆದರೆ ನೆಪವೇ ಬೇಡದಂತೆ ನೆನಪಾಗುತ್ತೀಯ

    ನೀನು ಕೊಟ್ಟುಹೋದ ಕೋಟಿ ಕನಸುಗಳಿವೆ
    ನೀನು ಬಿಟ್ಟುಹೋದ ಸಾವಿರ ನೆನಪುಗಳಿವೆ
    ನೆನಪುಗಳ ನೆನೆಯಲು ನಿನ್ನ ನೆಪ ಬೇಕಷ್ಟೆ….
    -ಕೆ.ಕೆ

  2. ಮಲ್ಲಿಕಾರ್ಜುನಗೌಡ ತೂಲಹಳ್ಳಿ

    ಖುಷಿ ಕೊಡುವ ಪದ್ಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading