ಪುಸ್ತಕದೊಳಗೆ ಏನೇನಿದೆ ..?

ರಾಜೇಂದ್ರ ಪ್ರಸಾದ್
‘ಲಾವೋನ ಕನಸು’ – ಮುಂದಿನ ತಿಂಗಳು ಅಂದರೆ ಆಗಸ್ಟ್ 9 ರಂದು ಉಡುಪಿಯಲ್ಲಿ ಬಿಡುಗಡೆಯಾಗುತ್ತಿದೆ.
ಅದೇ ದಿನ ‘ಕಡೆಂಗೋಡ್ಲು ಕಾವ್ಯ ಪುರಸ್ಕಾರವೂ ಆ ಕೃತಿಗೆ ಪ್ರದಾನವಾಗಲಿದೆ.
ಲಾವೋನ ಚಿತ್ರ ಬರೆಸಬೇಕು ಅಂದುಕೊಂಡಾಗ ನನಗಿದ್ದ ಏಕಮಾತ್ರ ಆಯ್ಕೆ Kiran Madalu ಕಾರಣ ಕಿರಣರಿಗೆ ಇರುವ ಝೆನ್ ಪರಂಪರೆಯ ನಂಟು. ಝೆನ್: ಕಲೆ ಮತ್ತು ಕಾವ್ಯದ ಓದು ಅವರಿಗೆ ಚೆನ್ನಾಗಿದೆ. ನಾನು ಮನವಿ ಇತ್ತ ಕೆಲವೇ ದಿನಗಳಲ್ಲಿ ಲಾವೋ ತಾತನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟರು. ಅವರಿಗೆ ನಾನು ಆಭಾರಿ
ಕಿರಣ್ ಅವರ ಲಾವೋ ಪೈಂಟಿಂಗ್ ಅನ್ನು ತುಂಬಾ ಒಳ್ಳೆಯ ಫ್ರೇಮಿನಲ್ಲಿ ಕೂರಿಸಿ ಪುಸ್ತಕದ ರೂಪಕ್ಕೆ ವಿನ್ಯಾಸ ಮಾಡಿದ್ದು Sowmyakka 🙂 ಇವರ ಈ ಪ್ರೀತಿಗೆ ಬದಲಿ ಇಲ್ಲ 🙂

ನನ್ನ ಅಂದದ ಚಿತ್ರ ತೆಗೆದಿದ್ದು ಮಂಡ್ಯದ ಲೀಲಾ ಅಪ್ಪಾಜಿಯವರು .. ಅವರಿಗೆ ಫೋಟೋ ತೆಗೆಯಲು ಹಕ್ಕಿ ಗೂಡು ತೋರಿಸಿರೋದ್ರಿಂದ ಥ್ಯಾಂಕ್ಸ್ ಹೇಳಲಾಗುವುದಿಲ್ಲ. 😛
ಪುಸ್ತಕದೊಳಗೆ ಏನೇನಿದೆ ..
ಪುರುಷೋತ್ತಮ ಬಿಳಿಮಲೆ, ಎಂ ಆರ್ ಕಮಲ, ಕೆ ಪಿ ಮೃತ್ಯುಂಜಯ ಅವರ ಮಾತುಗಳು,
ಸೃಜನ್ ರೇಖಾಚಿತ್ರಗಳು, ಕಿರಣ್ ಮಾಡಾಳು ಪೈಂಟಿಂಗ್, ಸೌಮ್ಯ ಕಲ್ಯಾಣಕರ್ ವಿನ್ಯಾಸ
ಕಡೆಗೆ ನನ್ನ ಕವಿತೆಗಳು ಮತ್ತು ಮುಖ್ಯವಾಗಿ ನೀವು.. (ನಿಮ್ಮನ್ನು ನೀವೇ ಹುಡುಕಿಕೊಳ್ಳಬೇಕು .. ನಾನೆಲ್ಲೂ ತೋರಿಸುವುದಿಲ್ಲ )




All the best Rajendra, very happy about your award winning book.
ಥ್ಯಾಂಕ್ಸ್ ಪ್ರಜ್ಞಕ್ಕ 🙂 🙂
Eagerly waiting.