ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರ್ತಾ ಇದೆ 'ಭಾವಯಾನ'

 
****
ಸಂತೋಷ್ ಬಾಗಿಲಗದ್ದೆ 
ಬಹು ಕಾಲದ ಒಂದು ಕನಸು ನನಸಾಗಲು ಕ್ಷಣಗಣನೆ ಶುರುವಾಗಿದೆ.
ಊರ ಕಡೆ ಕೃಷಿ ಮಾಡುತ್ತಾ ಕಥೆ ಗಿಥೆ ಕವಿತೆ ಬರೆದುಕೊಂಡು ಅಲ್ಲೇ ಕಳೆದು ಹೋಗಬೇಕೆಂದು ಮಾಡಿದ ಕಸರತ್ತುಗಳ ಬಾಬತ್ತೆಲ್ಲವೂ ಎತ್ತೆಸೆದದ್ದು ಬೆಂಗಳೂರಿಗೆ. ಅದು ಸೀದಾ ತಗೊಂಡು ಹೋಗಿ ಬಿಟ್ಟಿದ್ದು ಪತ್ರಿಕೋದ್ಯಮದ ತಿರುಗಣಿಗೆ.
ಆ ನಂತರದ್ದು ಕತ್ತಿಯಂಚಿನ ನಡಿಗೆ.
ಯಾರ ವಿರುದ್ಧವೋ ಬರೆದು, ಸತ್ಯವೊಂದರ ಹೊರತಾಗಿ ಬೇರೆ ಯಾವ ಆಯುಧವೂ ಇಲ್ಲದೆ ಎದೆಕೊಟ್ಟ ಸವಾಲುಗಳು, ಬೆದರಿಕೆ, ಕೋರ್ಟು, ಕೇಸು… ಇದೆಲ್ಲದರಾಚೆ ಒಂದಷ್ಟು ಕಾಲವಾದರೂ ನಿಂತು ಯಾರದ್ದೋ ಮನಸಿಗೆ ನವಿಲುಗರಿ ತೀಡಿದಂಥಾ ಬರಹಗಳಲ್ಲಿ ಕಳೆದು ಹೋಗಬೇಕೆಂದು ಸದ್ಯಕ್ಕೆ ನಿರ್ಧರಿಸಿದ್ದೇನೆ.
ಅದರ ಭಾಗವಾಗಿ ಇನ್ನೇನು `ಭಾವಯಾನ’ ಎಂಬ ಕನಸಿನ ಕೂಸು ಕಣ್ತೆರೆಯಲಿದೆ.
ಇದರ ಜೊತೆ ಜೊತೆಗೇ ನನ್ನವೆರಡು ಪುಸ್ತಕಗಳು ಎರಡ್ಮೂರು ತಿಂಗಳಲ್ಲಿಯೇ ಬಿಡುಗಡೆಯಾಗಲಿವೆ. ಆ ಬಗ್ಗೆ ಇಷ್ಟರಲ್ಲೇ ವಿವರ ಕೊಡುತ್ತೇನೆ.
ಸದ್ಯ ಭಾವಯಾನ ರೂಪಿಸುವ ಕೆಲಸ ಚಾಲ್ತಿಯಲ್ಲಿದೆ. ಹೊಸಾ ಆಲೋಚನೆ, ಯುವ ಬರಹಗಾರರ ಲಹರಿ ಸೇರಿದಂತೆ ಹೊಸಾ ಭಾವಲೋಕವೊಂದನ್ನು ಅನಾವರಣಗೊಳಿಸುವ ಕನಸು ಹೊತ್ತು ಭಾವಯಾನ ಆರಂಭಿಸಲು ತಯಾರಿ ನಡೆದಿದೆ.
ಅರುಣ್ ಕುಮಾರ್ ಜಿ ಕುಸುರಿಯಲ್ಲಿ ರೂಪುಗೊಂಡಿರುವ ಟೈಟಲ್ ಅನ್ನಷ್ಟೇ ಸದ್ಯಕ್ಕಿಲ್ಲಿ ಕೊಡುತ್ತಿದ್ದೇನೆ..

‍ಲೇಖಕರು admin

9 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading