ಕವಿಯಾಗುವುದೂ ಬೇಕಿಲ್ಲ….
– ಚಲಂ

ಹಾಗೆ ಬರೆಯುವುದ ನಿಲ್ಲಿಸಿ
ಚುಕ್ಕಿ ಅಂತ ವಿರಾಮವನ್ನಿಡುವಾಗ
ಬರೆಯದಿರುವ ಸುಖ ಮುದ ನೀಡುತ್ತದೆ.
ಒಳಗಿನಿಂದ ಒತ್ತರಿಸಿ ಇನ್ನೇನು
ಸಾದ್ಯವೇ ಇಲ್ಲ ಅಂತ ಹುಟ್ಟಿಕೊಳ್ಳದ
ಸಾಲುಗಳಲ್ಲಿ ಚಳಿಗಾಲದ ಎಲೆಗಳೇ ತುಂಬಿವೆ
ಬಿಳಿ ಹಾಳೆಯ ಮೇಲೆ
ಕಪ್ಪು ಬಣ್ಣದ ಸೂಜಿಮೊನೆಯಿಂದ
ಕೆತ್ತಿದ್ದು ಕಲೆಯೋ..?
ನಡೆಸಿದ ಅತ್ಯಾಚಾರವೋ..?
ಕಡೆಯ ಚುಕ್ಕಿಯಲ್ಲಿ ನಿಂತು ನೋಡಿದರೆ
ಶಿಸ್ತಿಲ್ಲದ ಅಕ್ಷರಜಾತ್ರೆ
ಬರೆದ ಒಂದಷ್ಟು ದುಃಖಗಳು
ನನ್ನನ್ನೇ ಮತ್ತೆ ಅವಮಾನಿಸಿವಾಗ
ಬರೆಯದೇ ಇರುವ ಸುಖಗಳು
ಸಂತೈಸುತ್ತವೆ…….ಮತ್ತೆ ಬರೆಯದಂತೆ
ನೆಲ ಸಪಾಟಾಗಿದ್ದರೂ
ಕಂಬದಿಂದ ಕಂಬಕ್ಕೆ ತಂತಿ ಕಟ್ಟುತ್ತೇನೆ
ಕೆಳಗಿನ ಚಪ್ಪಾಳೆಗೆ ನನ್ನ ನಡಿಗೆ ಶುರು…
ಮುಖ್ಯವಾಗಿ ನಿನ್ನ ಬಗ್ಗೆ ಬರೆಯುವಾಗ
ಯಾವಾಗಲೂ ತಂತಿ ಮೇಲಿನ ನಡಿಗೆಯೇ
ಜೋರು ಚಪ್ಪಾಳೆ ಮುಗಿದ ನಂತರ
ಅನುಕಂಪದ ಚೂರುಗಳನ್ನಷ್ಟೇ
ಆಯ್ದುಕೊಳ್ಳುತ್ತೇನೆ.
ಬರೆದದ್ದನ್ನು ಓದುವುದು ಇದೆ
ಕಿವಿಗಳನ್ನು ಸವರಿ ಹೋಗುವ ಪದಗಳು
ಎದೆಗಿಳಿಯುವುದಿಲ್ಲ….
ಬಿಟ್ಟರೆ ಇವ ಬರೆಯುತ್ತಲೇ ಇರುವ ಅಂತ
ಕವಿ ಅನ್ನುತ್ತಾರೆ,
ಬರೆಯದಿರುವ ಸುಖ ಗೊತ್ತಿಲ್ಲದವನಿಗೇ
ಕವಿಯಾಗುವುದು ಬೇಕಿಲ್ಲ.







ಪ್ರಿಯ ಪ್ರಸನ್ನ,
ಕವಿತೆ ಮನ ಮುಟ್ಟುವಂತಿದೆ.
ರೂಪ
uttama kavana..
nanage iShTavaaytu 🙂
Mechchide
nice
Good One!!
ಈ ಅಂತರ್ಜಾಲದ ಕ್ಯಾನ್ವಾಸಿನಲ್ಲಿ ಅಕ್ಷರ ಧ್ವನಿ ಅಂದರೆ ಈ ಕವಿತೆಯ ಹಾಗೆ.ಕಾವ್ಯ ನವೋಲ್ಲಾಸ ಭರಿಸುತ್ತೀರಿ. ಕಂಬದಿಂದ ಕಂಬಕ್ಕೆ ಕಟ್ಟುವ ತಂತಿಯ ಸೂಕ್ಷ್ಮ ಸಂವೇದನೆ ಸುಂದರ ಕಾವ್ಯ ಮೈಯನ್ನು ಅಚ್ಚುಕಟ್ಟುಗೊಳಿಸಿತು. ಅಭಿನಂದನೆಗಳು.
🙂