
ವಿಜಯಾ ಕುಲಕಣಿ೯
ಎಲ್ಲೆಲ್ಲೂ ವಸಂತನ ಆಗಮನ
ಮನದಲ್ಲಿ ಚಿಗುರೊಡೆಯುವ
ಮತ್ತದೇ ಬರಿದಾದ ಭಾವನೆಗಳು
ಎಲ್ಲಿ ನೋಡಿದರಲ್ಲಿ ನಿನ್ನ ನೆನಪುಗಳನ್ನೇ
ಮತ್ತೆ ಮತ್ತೆ ಚಿಗುರಿಸುವ ವಸಂತನ
ಪರಿ, ನೋಡಿ ನಿಬ್ಬೆರಗಾಗುವ ಮತ್ತದೇ ನಾನು
ಬಾಚಿ ತಬ್ಬಿ ಮುದ್ದಾಡಿ
ಬರಿಗೈಯಲ್ಲಿ ಹಿಂದಿರುಗಿದವಳು ನಾನು
ಅಂಗೈ ಅಂದಕೆ ಕನ್ನಡಿ ಮೂಕವಾದಂತೆ
ನೆನಪುಗಳನ್ನೆಲ್ಲ ತಂಗುದಾಣದಲ್ಲಿ
ಹುಗಿದು ಬಂದವಳು
ಒಡಲ ಚಿಗುರಿಗೆ ವಸಂತ ಋತು
ಬೇಕೆಂದಿಲ್ಲ, ನಿಶ್ಚಲ ಪ್ರೇಮವೊಂದು ಸಾಕು
ನಂಬಿಕೆಯ ಅಪ್ಪುಗೆಯು ಸಾಕು
ಭೋಗ೯ರೆವ ಸಾಗರದ
ಅಲೆಗಳ ಅಬ್ಬರ ಸಾಕು
ಬಿಗಿದಾದ ಅಪ್ಪುಗೆಯಲ್ಲಿ
ಕಂಗಳ ಕಾಂತಿಯ ಧಾರೆಯರದವಳು
ನಾನು, ಒಡಲ ತುಂಬಿ ಹೆಜ್ಜೆ
ಬೀಡುಬಿಟ್ಟ ನಡೆದವ ನೀನು
ಅರೆಬಿರಿದ ಭಾವಗಳ ಗೋಡೆಯಾಚೆ
ಕನಸುಗಳನ್ನೆಲ್ಲ ಬಚ್ಚಿಟ್ಟಿರುವೆ
ನಿನ್ನದೇ ಪ್ರೇಮದ ಮತ್ತಿನಲ್ಲಿ
ಇಂದಿಗೂ ಸಂಪಿಗೆ ಮುಡಿದು
ಅಂಗಳದಲ್ಲಿ ರಂಗೋಲಿ
ಬಿಡಿಸುತ್ತಿರುವೆನು
ವಷ೯ವೂ ವಸಂತ ಋತು ನಿತ್ಯ ನಿರಂತರ
ನಿನ್ನ ಕಾಯುವಿಕೆಯೂ ನಿತ್ಯ ನಿರಂತರ
ಒಡಲ ಕುಡಿಯ ಚಿಗುರಿನ ಹಾಗೆ
ಸದಾ ಹಸನ್ಮುಖಿ
ಬರಿಗೈಯಲ್ಲಿ ಹಿಂದುರುಗಿದವಳು ನಾನು
ಮತ್ತದೇ ಚಡಪಡಿಕೆಯಲ್ಲಿ, ವಸಂತದ
ಆಗಮನದ ನೀರೀಕ್ಷೆಯಲ್ಲಿ







ಅವಧಿಗೆ ಧನ್ಯವಾದಗಳು
Super