ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬನ್ನಿ ಪತ್ರಿಕೆಗಳನ್ನು ಚರ್ಚಿಸೋಣ

‘ತ್ರಿಜ್ಯ’ ಪತ್ರಿಕಾ ಸಂವಾದ

ಚಿಂತನಾಸಕ್ತರೆ, ಆತ್ಮೀಯರೆ,

ನಮಸ್ಕಾರ.

ನಮ್ಮ ಧಾರವಾಡದಲ್ಲಿ ಈ ವರ್ಷ ಮೇ ಹೂವುಗಳೊಟ್ಟಿಗೆ ಚಿಂತನೆಯ ಹೊಸ ಕನಸೊಂದು ಮೊಳೆತಿದೆ.

social media tigerಈ ಕನಸಿನ ಬೀಜವನ್ನು ದೂರದ ಬರೋಡಾದಿಂದ ಎದೆಯ ಮಣ್ಣಿನಲ್ಲಿಟ್ಟು ತಂದು ಇಲ್ಲಿ ಬಿತ್ತಿದವರು ಡಾ. ಗಣೇಶ ಎನ್. ದೇವಿಯವರು.

ಇದುವರೆಗಿನ ನಮ್ಮ ಚಿಂತನಾ ಕ್ರಮದಲ್ಲಿ ಕೇಂದ್ರ ಮತ್ತು ಪರಿಧಿಗಳೆಂಬ ಪೂರ್ವನಿಶ್ಚಿತ ದೃಷ್ಟಿಕೋನ ಮಾತ್ರ ರೂಢಿಯಾಗಿದೆ. ಈ ಎರಡನ್ನೂ ಹೊರತುಪಡಿಸಿದ, ಇವುಗಳನ್ನು ಸಮತೋಲಿಸಿದ ಸಂವಹನದ ದಿಕ್ಸೂಚಿ ರೇಖೆಯೊಂದು ಆರೋಗ್ಯವಂತ ಸಮಾಜದಲ್ಲಿ ಇರುತ್ತದೆ., ಇರಬೇಕಾಗುತ್ತದೆ. ಅದು ತ್ರಿಜ್ಯ. ತ್ರಿಜ್ಯವು ಪ್ರಭುತ್ವ ಮತ್ತು ಜನಬದುಕಿನ ಕೊಂಡಿಯಾಗಿರುವ ಆಗಬೇಕಿರುವ ಚಿಂತನಾ ವರ್ಗದ ಸೂಚಿಯೂ ಆಗಿದೆ. ಇದು ಯಾವುದೇ ನಿರ್ಧಿಷ್ಟ ‘ಐಡಿಯಾಲಜಿ’ ಯ ಪ್ರಸರಣ ಸಂಘಟನೆಯಲ್ಲ.

ತ್ರಿಜ್ಯ ಬಳಗವು ಜೂನ್ 11-12ರಂದು ಕನ್ನಡದ ಪತ್ರಿಕೆಗಳ ಸಂವಾದ ಸಂಕಿರಣವನ್ನು ಆಯೋಜಿಸಿದೆ.

ಮಾಧ್ಯಮಗಳನ್ನು ಓದುವುದೆಂದರೆ, ಸಮಕಾಲೀನ ಸಮಾಜದ ಸೂಕ್ಷ್ಮವನ್ನು ಅರಿಯುವ ದಾರಿಯಾಗಿರುತ್ತದೆ. ಪ್ರಜಾಪ್ರಭುತ್ವದ ಎಥಿಕ್ಸ್ ನ್ನು ಕಾಪಾಡಬೇಕಾದ ಮಾಧ್ಯಮಗಳು ಬಂಡವಾಳವಾದದ ಸರಕಾಗಿ ಅಧಿಕಾರ ರಾಜಕಾರಣಕ್ಕೆ ಎಲೆಹಾಸಿಕೊಳ್ಳುತ್ತಿರುವ ಕಾಲವಿದು. ಮಾಧ್ಯಮಗಳ ವಿಮರ್ಶಾತ್ಮಕ ಓದು ಇಂದಿನ ತುರ್ತು ಅಗತ್ಯ. ಆ ಕಾರಣಕ್ಕಾಗಿ ಈ ಸಂವಾದ.

ವಿಷಯ ಮಂಡನೆಗೆ ಕೆಲವು ಪ್ರವೇಶಿಕೆಗಳು :-

1. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಆಸಕ್ತರು ವಿಷಯ ಮಂಡನೆ ಮಾಡಬಹುದು. ವಿಷಯ ಮಂಡನೆಗೆ 20 ನಿಮಿಷ ಕಾಲಾವಧಿ. ಒಂದೊಂದು ಗೋಷ್ಠಿಗಳ ನಂತರ 20 ನಿಮಿಷ ಚರ್ಚೆ.
2. ನೀವು ಕನ್ನಡದ ದೈನಿಕ, ವಾರ, ಪಾಕ್ಷಿಕ, ಮಾಸಿಕ ಯಾವುದೇ ಪತ್ರಿಕೆಯನ್ನು ಆಯ್ದುಕೊಳ್ಳಬಹುದು. ಆಯ್ದ ಪತ್ರಿಕೆಯು ಸಾಹಿತ್ಯಿಕ, ವೈಚಾರಿಕ, ಜನಪ್ರಿಯ, ಕ್ರೀಡೆ, ಮಕ್ಕಳಲೋಕ ಹೀಗೆ ಯಾವ ಕ್ಷೇತ್ರವನ್ನಾದರೂ ಕೇಂದ್ರೀಕರಿಸಬಹುದು.
3. ಆಯ್ದುಕೊಂಡ ಪತ್ರಿಕೆಯ ಹುಟ್ಟಿನ ಕಾರಣಗಳು, ಪ್ರಸಾರದ ಸಂಖ್ಯೆ, ಪ್ರಸಾರದ ಕ್ರಮ, ಸಂಪಾದಕ ಮಂಡಳಿಗಳ ಬಗ್ಗೆ ಮಾಹಿತಿ ಪಡೆಯುವುದು.
4. ಪತ್ರಿಕೆಯ ಯಾವ ಬರಹ, ಯಾವ ನಿಲುವು ಇಷ್ಟವಾಗಿದೆ / ಇಷ್ಟವಾಗಿಲ್ಲ, ನೀವು ಬಯಸುವ ಬದಲಾವಣೆಗಳೇನು? – ವಿಶ್ಲೇಷಣೆ.
ಇವು ಪ್ರವೇಶಿಕೆಗಳು ಮಾತ್ರ. ನಿರ್ಧಿಷ್ಟ ಚೌಕಟ್ಟಿಲ್ಲ. ನೀವು ವಿಸ್ತರಿಸಿಕೊಳ್ಳಬಹುದು.

ವಿಷಯ ಮಂಡಕರು ಗಮನಿಸಬೇಕಾದ ಸೂಚನೆಗಳು:-

1. ಪ್ರಬಂಧ ಮಂಡನೆಯ ಆಸಕ್ತರು ಕಡ್ಡಾಯವಾಗಿ ಈ ತಿಂಗಳ ೨೫  ರೊಳಗೆ ತಾವು ಅಧ್ಯಯನಕ್ಕೆ ಆಯ್ದುಕೊಂಡ ಪತ್ರಿಕೆಯ ಹೆಸರನ್ನು ತಿಳಿಸಬೇಕು (ಒಂದು ಪತ್ರಿಕೆಯು ಒಮ್ಮೆ ಮಾತ್ರ ಚರ್ಚೆಗೆ ಒಳಪಡಲಿ ಎಂಬುದು ಉದ್ದೇಶ)
2. ಪ್ರಬಂಧ ಮಂಡಕರು ತಮ್ಮ ಆಯ್ಕೆಯ ಪತ್ರಿಕೆಯ ಸಂಪಾದಕ ಮಂಡಳಿಯನ್ನು ಸಂಪರ್ಕಿಸಿ, ಮಾಹಿತಿ/ಸಹಕಾರ ಪಡೆದುಕೊಳ್ಳಬಹುದು.
3. ದಯವಿಟ್ಟು ತಾವು ಸ್ವಂತ ಖರ್ಚಿನಲ್ಲಿ ಧಾರವಾಡಕ್ಕೆ ಬಂದು ಹೋಗಬೇಕಿದೆ. ಊಟ-ವಸತಿಯ ವ್ಯವಸ್ಥೆ ಮಾಡಲಾಗುವುದು. ಸರ್ಟಿಫಿಕೇಟ್ ನೀಡಲಾಗುವುದು.

ಸಂಪರ್ಕ ವಿಳಾಸಗಳು:-

ಸುರೇಖಾ ದೇವಿ 9427301790 surekha-devi@yahoo.com

ರಜನಿ ಗರುಡ  8277026286 rajanigarud@gmail.com

ವಿನಯಾ ಒಕ್ಕುಂದ  8762173258 vinayaokkund@gmail.com

‍ಲೇಖಕರು Admin

21 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading