ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬನ್ನಿ ಎಂದೂ ಕರೆದರೂ ಬರುವವರಿಲ್ಲ’ – ಸುಚಿತ್ರಾ

ss2
 

ಸುಚಿತ್ರಾ

2
ಬನ್ನಿ ಎಂದೂ ಕರೆದರೂ ಬರುವವರಿಲ್ಲ?!
ಮತ್ಯಾತಕೋ
ಈ ಸಂಬಂಧಗಳು
ಬೆಸುಗೆ- ಆತ್ಮೀಯತೇ- ಪ್ರೀತಿ
ಬನ್ನಿ ಎಂದೂ ಕರೆದರೂ ಬರುವವರಿಲ್ಲ
ಮತ್ಯಾತಕೋ
ಈ ಭವದ ಮೋಹ
ಈ ಭೇದ ಭಾವದ ಹಂಗುಗಳು
ಬನ್ನಿ ಎಂದೂ ಕರೆದರೂ ಬರುವವರಿಲ್ಲ
ಇನ್ನೇತಕೋ
ಜಾತಿ-ಧರ್ಮದ ಗೋಡೆ
ಕೆಡವಿ ಕಟ್ಟಿರೋ ಒಂದೇ ಸೂರಿನಡಿಯ ಬೆಳಕು
ಬನ್ನಿ ಎಂದೂ ಕರೆದರೂ ಬರುವವರಿಲ್ಲ
ಮತ್ಯಾತಕೋ
ದೊಂಬಿ ಗಲಾಟೆ ನಾನಾ ಬಣ
ಇರುವ ನಾಲ್ಕೇ ದಿನ
ಒಂದಾಗಿ ಬಾಳಿ ಸೋದರ-ಸೋದರಿಯರಂತೆ
ಬನ್ನಿ ಎಂದೂ ಕರೆದರೂ ಬರುವವರಿಲ್ಲ?!
ಸ್ನೇಹಿತರು, ಬಂಧುಗಳು, ಕಡೆಗೂ
ಗಂಡ, ಮಕ್ಕಳೂ………….
ಬನ್ನಿ ಎಂದೂ ಕರೆದರೂ ಕರೆಯದಿದ್ದರೂ
ನಾವು ನೀವು ನಡೆಯಲೇ ಬೇಕು…
ಎಲ್ಲವ ಮರೆತು ನೆಮ್ಮದಿಯಲಿ
ಸಾಗೋಣ……
 

‍ಲೇಖಕರು avadhi-sandhyarani

31 August, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading