
ಕನ್ನಡಪ್ರಭ ಮಾರಾಟವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿತ್ತು. ಸದಾ ಮೀಡಿಯಾ ಸುದ್ದಿಯಲ್ಲಿ ಒಂದು ಹೆಜ್ಜೆ ಮುಂದೆ ಇರುವ SANS SERIF ಈ ಬಗ್ಗೆ ಸಾಕಷ್ಟು ಬ್ಯಾಕ್ ಅಪ್ ಮಾಹಿತಿ ಒದಗಿಸಿತ್ತು. ಆ ನಂತರ ನಾನಾ ರೀತಿಯ ಬೆಳವಣಿಗೆಗಳು ‘ಕನ್ನಡಪ್ರಭ’ ಕೈ ಬದಲಾಯಿಸುತ್ತಿದೆ ಎಂಬುದನ್ನು ಸೂಚಿಸಿದೆ.
ಮೊದಲನೆಯದಾಗಿ-
ಇದುವರೆಗೂ ಎಕ್ಸ್ಪ್ರೆಸ್ಸ್ ಪಬ್ಲಿಕೇಶನ್ಸ್ (ಮಧುರೈ) ಲಿಮಿಟೆಡ್ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಕನ್ನಡಪ್ರಭ ಈಗ ‘ಕನ್ನಡಪ್ರಭ ಪಬ್ಲಿಕೇಶನ್ಸ್ ಲಿಮಿಟೆಡ್’ ಹೆಸರಿಗೆ ಬದಲಾಗಿದೆ.
ಎರಡನೆಯದಾಗಿ
ವಿಜಯಕರ್ನಾಟಕದ ಜೊತೆ ಜಂಟಿ ಸಮೀಕ್ಷೆಗಳನ್ನು ನಡೆಸುತ್ತಿದ್ದ ಸುವರ್ಣ ಚಾನಲ್ ಈಗ ಕನ್ನಡಪ್ರಭದ ಜೊತೆಗೂಡಿ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಯ ಸಮೀಕ್ಷೆ ನಡೆಸಿದೆ.
ಬಿ ಪಿ ಎಲ್ ಸಂಸ್ಥೆಯ ಮುಖ್ಯಸ್ಥ ರಾಜೀವ್ ಚಂದ್ರಶೇಕರ್ ಅವರು ಸುವರ್ಣದ ಮಾಲೀಕರು. ಕನ್ನಡಪ್ರಭದ ಶೇಖಡಾ ೩೫ ಶೇರುಗಳನ್ನು ಕೊಂಡಿದ್ದಾರೆ ಎಂದು ಹೇಳಲಾಗಿದೆ. ಸಂಪೂರ್ಣ ಸ್ವಾಮ್ಯ ಪಡೆಯುವ ಮಾತುಕತೆಯೂ ನಡೆಯುತ್ತಿದೆ.
ಈ ಬಗ್ಗೆ ಸುದ್ದಿಯನ್ನು SANS SERIF ನಲ್ಲಿ ಓದಿ –
Sugata recommends..






0 Comments