ಡಾ. ನಾಗರಾಜ .ಆರ್. ದೇಶಪಾಂಡೆ, ಹಾನಗಲ್
ಬತ್ತೀಸ ರಾಗಗಳು ಎತ್ತಹೋದವೊ ಏನೋ
ಎತ್ತಣದೊ ಹೊಸರಾಗವ ನೆತ್ತಿ ಕೊಳಲಿಂದ ನುಡಿ
ಸುತ್ತ ನಿಂತಿಹ ಗೊಲ್ಲನತ್ತ ಮುಖ ಮಾಡುತ್ತ
ಸುತ್ತ ನೆರೆದಿಹ ಹಸುಗಳ್ಚಿತ್ತವನು ಗೆಲ್ವ ಈ
ಗತ್ತು ಇವನಿಗೆ ಮಾತ್ರ ಗೊತ್ತು ಎಂದಾದರೆ
ಮತ್ತಿವನೆ ಗೋವಿಂದ ನಿತ್ಯಾನಂದ ಮುಕುಂದ.
ಕರದೊಳಿಹ ಮುರಳಿಯನು
ಸರಸಾಗಿ ನುಡಿಸುತ್ತ
ಸ್ವರಲೋಕ ಸೃಷ್ಟಿಸುವ
ಸುರವಂದ್ಯ ಮುರವೈರಿ
ನರನಾರಿಯರನೆಲ್ಲ
ಮರಳು ಮಾಡುವನೀತ
ಸಿರಿರಮಣ ನವನೀತ
ಪುರುಷೋತ್ತಮ ಸಚ್ಚಿದಾನಂದನೀತ.






very touching