ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬತ್ತಲೆಗೆ ಬಟ್ಟೆ ನೇಯುವನು..

ಕವಿ
ಸವಿತಾ ನಾಗಭೂಷಣ

ನನ್ನಂತೆಯೇ ನಿಮ್ಮಂತೆಯೇ
ಹುಲು ಮಾನವನು….
ಜಂಭ ಪಡಲು
ಅವನಿಗೆ ಕೊಂಬೇನೂ ಇಲ್ಲ !
ಎಲ್ಲರಂತೆ ಅವನು
ಕೊಳಕು ನೀರಿನಲ್ಲಿ
ಜಳಕ ಮಾಡುವನು.
ಹುಳುಕನೆತ್ತಿ ತೋರಿ ಆಡುವನು…

ನೋವಿಗೆ ಸಾವಿಗೆ ತುಸು ಹೆಚ್ಚೇ
ಮರುಗುವನು ಕರಗುವನು….

ಜಡ ಚೇತನಗಳ ಮುಟ್ಟಿ ಮಾತಾಡಿಸಿ
ಶಬುದಗಳನೆತ್ತಿ ಇಡುವನು
ಕೊಡುವನು ಜತನದಿಂದ….

ಕಲ್ಲು ಕರಗುವ ಸಮಯ ಕಾಣಬಲ್ಲವನು
ಇರುವೆಯ ಕಾಲ ಸಪ್ಪಳ ಕೇಳಬಲ್ಲವನು

ಬತ್ತಲೆಗೆ ಬಟ್ಟೆ ನೇಯುವನು
ಕತ್ತಲೆಯ ಬೆಳಕು ಮಾಡುವನು….!!

‍ಲೇಖಕರು avadhi

21 March, 2019

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading