ನಿವೇದಿತಾ ಎಚ್
ಢಾಳಾಗಿದೆ ನಿನ್ನ ಬಣ್ಣ
ಕಾಣಸಿಗುತ್ತಿಲ್ಲ ನಿನ್ನ ಲಹರಿ
ಸರ್ವ ಸ್ವತಂತ್ರ ನೀನು…
ನನಗಾದರೋ ಬಣ್ಣ ಹಚ್ಚಲೇಬೇಕಿದೆ…
ಆದರೆ
ಅಗೋಚರವಾಗಿ…
ತಿಣುಕುವ ಕಣ್ಗಳಿಂದ ಬಚಾವಾಗಲು
ಎದೆಯ ಬೇಗುದಿಗೆ ಪರದೆ ಹಾಕಲು
ಇಲ್ಲದ ಆಹ್ಲಾದವ ತೋರಲು
ಕನಸುಗಳ ರಾಶಿ ಮರೆ ಮಾಚಲು
ಹೃದಯದ ಬಯಕೆಗಳ ತೋಯಿಸಲು

ಒಟ್ಟಿನಲ್ಲಿ
ಬೇಕಾಗಿದೆ ವಿವಿಧ ಬಣ್ಣಗಳ ಕುಂಚ
ಬದುಕ ಅಂದವಾಗಿಸಲಾದರೂ…
ಇಲ್ಲ…
ಹುಳುಕುಗಳ ಮುಚ್ಚಲಾದರೂ






0 Comments