ಬದುಕಲಾಗದ ಮುಖಗಳು …
ಎಂ ಎಂ ಶೇಕ್
ಬೇಸರವಿದೆ ಕಾತುರದ ಕ್ಷಣಗಳಿಗೆ …..
ಹೀಗೆಯೇ ಹಗಲಾಗುತ್ತದೆ ,
ಹಾಗೆಯೇ ರಾತ್ರಿಯಾಗುತ್ತದೆ ..!
ಮತ್ತದೇ ದಿನವಾಯ್ತು ,ಮತ್ತದೇ ತಿಂಗಳಾಯ್ತು
ಮತ್ತದೇ ವರುಷವಾಯ್ತು …..!!!
ಮಳೆ ಬಂತು ಕ್ಷಣಗಳು ಹುಟ್ಟಿದವು ,
ಚಳಿ ಬಂತು ,ಕ್ಷಣಗಳು ಕೊನರಿದವು…
ಬೇಸಿಗೆ ಬಂತು ,ಕ್ಷಣಗಳು ಬಾಯಾರಿದವು….!!
ಹೀಗೆಯೇ ಮತ್ತೆ ಮತ್ತೆ ಋತುಚಕ್ರ
ಸುತ್ತುವಲ್ಲೆಲ್ಲಾ ಸುತ್ತುತ್ತವೆ ಆಕ್ಷೆಪವೆತ್ತದೆ…!!
ಯಾಕೆಂದರೆ …….
ಬದುಕೆಂದರೆ ಇದೆ…ಹೀಗೆಯೇ
ಜೀವಂತಿಕೆಯ ಲಕ್ಷಣ ಇದುವೇ…..!!
ಬಣ್ಣ ಬಳಿಯಲು ತವಕಿಸುತ್ತೇನೆ
ಬಣ್ಣಗಳೇ ಮೂಡುತ್ತಿಲ್ಲ ,ಖಾಲಿ ರೇಖೆಗಳಿಗೆ ..
ಆಸೆ ಇದೆ,ಬಯಕೆ ಇದೆ ….
ಕುಂಚವನ್ನು ಪದೇ ಪದೇ ಅದ್ದುತ್ತೇನೆ…
ನೀರಿಲ್ಲದ,ತಂಪಿಲ್ಲದ ಬಣ್ಣದಲ್ಲಿ …!
ಇದು ನನ್ನ ತಪ್ಪು …
ಹೌದು ,ಈಗ ಗೊತ್ತಾಗಿದೆ…..
ಒಂದೂ ಹಾಳೆಯಿಲ್ಲ ಖಾಲಿ…..
ಅಡ್ಡಡ್ಡ ಕೊರೆದಿದೆ ಚಿತ್ರಗಳೆಂದು ಕಾಲ….!!
ಮೂಡಿಸಿದ್ದಿದೆ ,ಹೆಜ್ಜೆಗಳ …..
ಶತಮಾನದ ಸರ್ವಶ್ರೇಷ್ಥ
ನಾಗರಿಕತೆಯ ಚಿತ್ರಕಲಾಕೃತಿಗಳು ….!!
ವ್ಯಾಖ್ಯಾನಿಸಿವೆ ,ಬದುಕಲಾಗದ ಮುಖಗಳು…..!!!]]>
Like this:
Like Loading...
Related
0 Comments