ಬಂತೈ ಬಂತೈ ಶ್ರೀರಂಗ ರಂಗೋತ್ಸವ !

ಅಹಲ್ಯಾ ಬಲ್ಲಾಳ್ 

ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ ಆದ್ಯ ರಂಗಾಚಾರ್ಯ ಅಥವಾ ಶ್ರೀರಂಗರ ಹೆಸರನ್ನು ಕೇಳಿಯೇ  ಇರುತ್ತೀರಿ.

ಅವರ ಮಗಳು ಶ್ರೀಮತಿ ಉಷಾ ದೇಸಾಯಿ ತನ್ನ ತಂದೆಯ ನೆನಪಿಗಾಗಿ ವರ್ಷವರ್ಷವೂ ಮುಂಬಯಿ ಮೈಸೂರು ಅಸೋಸಿಯೇಷನ್ನಿನ  ಜೊತೆಗೂಡಿ, ಕರ್ನಾಟಕದ ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶ್ರೀರಂಗರ ಗೌರವಾರ್ಥ ನಾಟಕೋತ್ಸವ ನಡೆಸಿಕೊಂಡು ಬಂದಿರುವ ಸಂಗತಿ ಗೊತ್ತೆ?

“ನಮ್ಮ ತಂದೆಯ ಕಾಲವಾಗಿ ಎಷ್ಟೋ ವರ್ಷಗಳಾಗಿತ್ತು. ನಮ್ಮಮ್ಮ ಶಾರದೆ ಹೇಳಿದ ಮಾತಿಗೆ, ತಂದೆಯವರ ಸಲುವಾಗಿ, ಅವರ ಪ್ರೀತಿಯ ಕ್ಷೇತ್ರವಾದ ರಂಗಭೂಮಿಗಾಗಿ ಏನಾದರೂ ಮಾಡಬೇಕು ಎಂದು ನನಗೆ ಅನಿಸಿತು. ಮೈಸೂರು ಅಸೋಸಿಯೇಷನ್ ಬಳಗದವರಲ್ಲಿ ಈ ವಿಚಾರ ಹೇಳಿಕೊಂಡೆ. ಅಲ್ಲಿಂದ ಶುರುವಾಯಿತು ಈ ಬಹುಭಾಷಾ ನಾಟಕೋತ್ಸವ. ಕನ್ನಡ ಮಾತ್ರವಲ್ಲ, ಇತರ ಭಾಷೆಗಳ ನಾಟಕಗಳು, ತರುಣ ನಿರ್ದೇಶಕರ ನಾಟಕಗಳು ಇದರಲ್ಲಿ ಪ್ರದರ್ಶನಗೊಳ್ಳುತ್ತವೆ’ ಎಂದು ಉಷಾ ಅವರು ಹೇಳಿಕೊಳ್ಳುವಾಗ ಕೇಳುಗರ ಮುಖದ ಮೇಲೆ ಮುಗುಳ್ನಗೆ ಬರದಿರಲು ಸಾಧ್ಯವಿಲ್ಲ. ಅಷ್ಟು ಉಮೇದಿ, ಉತ್ಸಾಹ ಅವರಿಗೆ.

ಈ ಸಲ ಜನವರಿ 24, 25 ಮತ್ತು 26ರಂದು ಮುಂಬೈ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯುವ ಶ್ರೀರಂಗ ರಂಗೋತ್ಸವದಲ್ಲಿ ಒಂದು ಮರಾಠಿ ( ಶ್ರೀ ಅಭಿಜಿತ್ ಜುಂಜಾರರಾವ್ ಅವರ ನಿರ್ದೇಶನದ ‘ ಘಟೋತ್ಕಚ’)  ಮತ್ತು ಎರಡು ಕನ್ನಡ ನಾಟಕಗಳಿವೆ. 25ರಂದು (ಶನಿವಾರ) ಅಸೋಸಿಯೇಷನ್ನಿನ ಲಲಿತ ಕಲಾ ವಿಭಾಗದವರು ಉಡುಪಿಯ ಗಣೇಶ್ ಮಂದರ್ತಿಯವರ ನಿರ್ದೇಶನದಲ್ಲಿ, ಡಾ. ಮಮತಾ ರಾವ್ ರವರ  ‘ಚಂದ್ರನಖಾಯಣ’ವನ್ನು ಆಧರಿಸಿ ಆಡಲಿರುವ ನಾಟಕವಿದೆ.  26 ರಂದು (ಭಾನುವಾರ ) ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ರಂಗ ತಂಡವು ಶ್ರೀ ವಿಕ್ರಂ ಜಿ. ಟಿ. ಮತ್ತು ಶ್ರೀಮತಿ ಚಾಂದನಿ ಪಿ. ಇವರ ನಿರ್ದೇಶನದಲ್ಲಿ ಶ್ರೀಮಟಿ ಉಷಾ ನರಸಿಂಹನ್ ಅವರ ‘ಕಂಚುಗನ್ನಡಿ’ ಯನ್ನು ಅಭಿನಯಿಸಲಿದೆ.

2020ರ  ಶ್ರೀರಂಗ ರಂಗೋತ್ಸವಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ.
ಸಹೃದಯರೇ, ಬಂದುಬಿಡಿ !

 

‍ಲೇಖಕರು avadhi

January 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: