ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಡಾಯವೇಳುವ ಧೈರ್ಯ ಕೊಡಿ..

ಮಾಲತಿ ಗೋರೆಬೈಲ್

**

ಭೂತಾಯ ಸಹನೆ

ಅಟ್ಟವೇರಿದ ಪಟ್ಟಕ್ಕೇ

ಜೋತು ಬೀಳದಂತೆ,

ಆತ್ಮದ ಕುಂದು ಸಹಿಸದೇ

ಬಂಡಾಯವೇಳುವ ಧೈರ್ಯ ಕೊಡಿ,

ಆಗ ಅವಳು ಹೊಳೆಯುತ್ತಾಳೆ

ಹೊರಗೆ ಮೆರೆವ

ಲಗಾಮಿಲ್ಲದ ಕುದುರೆ,

ಅವಹೇಳನೆಗೆ ಒಳಗಾಗದಂತೆ

ತನ್ನತನವ ಬಲಿಕೊಡದೇ

ಮುನ್ನುಗ್ಗುವ ಬಲವ ನೀಡಿ,

ಆಗ ಅವಳು ಬೆಳೆಯುತ್ತಾಳೆ

ಅಲಂಕಾರ, ದೇಹಸಿರಿ, ನೋಟ

ಸೌಂದರ್ಯೋಪಾಸನೆಗೇ

ಮೀಸಲಾಗದಂತೆ

ಸಾಧ್ಯತೆಗಳ ತೆರೆಗೆ ಸರಿಸದೇ

ಅವಕಾಶವ ಕೊಡಿ,

ಆಗ ಅವಳು ಕಸುವಾಗುತ್ತಾಳೆ

ಕೂಸ ಹಡೆದ ತಾಯಿ,

ಹೊತ್ತು ಹೆತ್ತರಷ್ಟೇ ಹೆಣ್ತನ

ಉಪಸಂಹಾರ ನೀಡದೇ

ಅಂತರಂಗವ ತೆರೆದು ನುಡಿಯಿರಿ,

ಆಗ ಎಲ್ಲ ಹೆಣ್ಣೂ ತಾಯಿಯಾಗುತ್ತಾಳೆ

ಮನಸೆಳೆವ ಕನ್ಯೆ ಒಲವ ಮನದನ್ನೆ,

ಹೊಗಳಿಕೆ ಆಡಂಬರಕೆ ನುಗ್ಗಾಗದಂತೆ

ಕವಲು ದಾರಿಯ ಸರಿ ಆಯ್ಕೆಯ ತೋರಿ,

ಆಗ ಅವಳು ಛಲವಾಗುತ್ತಾಳೆ.

ಈ ಎಲ್ಲಗಳಿಗಿಂತ

ಅವಳಿಗೆ ಅವಳಾಗಿಯೇ ಇರಲು

ಬಿಟ್ಟುಬಿಡಿ,

ಕನಸುಗಳ ಮೂಟೆ ಬಿಚ್ಚಿ

ಹರವಾಗುತ್ತಾಳೆ,

ನೆಲದಗಲ

ನಗುವಾಗುತ್ತಾಳೆ

                     

‍ಲೇಖಕರು Admin MM

25 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading