ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ರೀಡಂ ಪಾರ್ಕಿನಲ್ಲಿ ಹೋರಾಟಗಾರರ ಫ್ರೀಡಮ್ಮನ್ನೇ ಕಿತ್ಕೊಂಡ್ರೆ ಹೇಗೆ ಸ್ವಾಮೀ?

 

 

 

ಗೋಪಾಲಕೃಷ್ಣ ಹರಳಹಳ್ಳಿ 

 

 

 

 

ಫ್ರೀಡಂ ಪಾರ್ಕ್ ಸುತ್ತಲಿದ್ದ ಹೋರಾಟದ ಜಾಗವನ್ನು ಕಸಿಯಲು ಸನ್ನದ್ಧವಾಗಿದೆ. ಈ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ. ಇದರಿಂದ ಇದ್ದ ಒಂದು ಹೋರಾಟದ ಜಾಗವೂ ಸಿಗದಂತಾಗುತ್ತದೆ.

1866 ರಲ್ಲಿ ಬ್ರಿಟಿಷರು ಕಟ್ಟಿಸಿದ  ಸೆಂಟ್ರಲ್ ಜೈಲು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಕಂಡ ಐತಿಹಾಸಿಕ ಜಾಗ.2008ರಲ್ಲಿ ಮಹಾನಗರಪಾಲಿಕೆ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕವಾಗಿ ಹೊಸರೂಪು,ವಿನ್ಯಾಸದೊಂದಿಗೆ “ ಸ್ವಾತಂತ್ರ್ಯ ಉದ್ಯಾನ” ವೆಂದು ಹೆಸರಿಟ್ಟಿತು.

ನಂತರ ಈ ಪಾರ್ಕಿನ ಸುತ್ತಲೂ ಇದ್ದ ಜಾಗದಲ್ಲಿ ಚಳುವಳಿಗಾರರು ಹೋರಾಟಗಾರರು ಸದಾ ಒಂದಿಲ್ಲೊಂದು ಹೋರಾಟ,ಮೆರವಣಿಗೆ,ಜಾಥಾ ಮೂಲಕ ಫ್ರೀಡಂ ಪಾರ್ಕಿಗೊಂದು ಅನ್ವರ್ಥನಾಮ ಒದಗಿಸಿದರು. ಆದರೆ ಈಗ  ಜಾಗಕ್ಕೂ ಪ್ರವಾಸೋದ್ಯಮದ ಬೇಲಿ ಹಾಕುವ ಯೋಜನೆಗೆ ಸರಕಾರ ಮುಂದಾಗಿದೆ.

ಆದ್ದರಿಂದ ಫ್ರೀಡ್ಂ ಪಾರ್ಕ ಜಾಗ ಉಳಿಸಲು‌ ಮುಂದಿನ ಕ್ರಮಕ್ಕಾಗಿ ಐಕ್ಯ ಹೋರಾಟ ರೂಪಿಸಲು ಎಲ್ಲಾ ಸಂಘಟನೆಯ ಮುಖಂಡರ ಸಭೆ ಯನ್ನು ದಿನಾಂಕ. 23.1.2018 ರಂದು ಬೆಳಿಗ್ಗೆ 10.30 ಕ್ಕೆ ಪ್ರೀಡಂ ಪಾರ್ಕ್ ಎದುರು ಕರೆಯಲಾಗಿದೆ. ಈ ಮೂಲಕ ಕಳಿಸುತ್ತಿರುವ ಆಹ್ವಾನವನ್ನು ನೀವು ಇತರ ನಿಮ್ಮ ಸ್ನೇಹಿತರಿಗೂ ತಿಳಿಸಿ ಆಗಮಿಸಬೇಕೆಂದು ವಿನಂತಿ ಸುತ್ತೇವೆ.

‍ಲೇಖಕರು Avadhi GK

19 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading