ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೈರ್…!!

ಮಂಜುನಾಥ ಕಾಮತ್ 

ಹಸುರು ಅದೆಷ್ಟು ಚಂದ… ಆದರೆ ಇತಿಹಾಸ ಮಾತ್ರ ಕೆಂಪು… ಜಲಿಯನ್ ವಾಲಾ ಭಾಗ್.. ಸಾವಿರಕ್ಕೂ ಹೆಚ್ಚು ದೇಶಭಕ್ತರನ್ನು ಬ್ರಿಟೀಷರು ಕೊಂದ ಜಾಗ….

ಈ ಜಾಗದಲ್ಲಿ ನಿಂತು ಜನರಲ್ ಡಯರ್ ” Fire…..” ಅಂದಿದ್ದಂತೆ….

ಜಲಿಯನ್ ವಾಲಾ ಭಾಗಿಗಿಂದು ದಿನಕ್ಕೆ ಲಕ್ಷ ಜನ ಭೇಟಿ ನೀಡಿ ಬರಬಹುದು.. ಆದರೆ ಅಂದು ಆ ಉದ್ಯಾನವನದೊಳಗೆ ಹೋಗಿದ್ದ ಸಾವಿರ ಜನ ಮತ್ತೆ ಮರಳಿದ್ದಿಲ್ಲ.. ಸ್ವಾತಂತ್ರ್ಯದ ಬೆಳಕಾಗಿಬಿಟ್ಟರು…

Fire…… ಅಂತ ಬ್ರಿಟೀಶ್ ಅಧಿಕಾರಿ ಕಮಾಂಡ್ ಕೊಟ್ಟದ್ದೇ ಬಂದೂಕಿನ ಬುಲೆಟ್ಟಿಗೆ ದೇಶಭಕ್ತ ಮಂದಿ ನೆಲಕ್ಕುರುಳಿದರು… ಎತ್ತರದ ಗೋಡೆಗಳಿದ್ದ ಕಾರಣ ಹಾರಿ, ಜಿಗಿದು ತಪ್ಪಿಸಿಕೊಳ್ಳೋಕೆ ಯಾರಿಗೂ ಆಗಿಲ್ಲ. ಆಗ ಕೆಲವರಿಗೆ ಕಂಡದ್ದು ಅಲ್ಲಿದ್ದ ಬಾವಿಯೊಂದೇ…

ಸಿನಿಮಾಗಳಲ್ಲಿ ಜನ ಬಾವಿಗೆ ಬೀಳೋ ದೃಶ್ಯ ನೋಡಿ ‌ನಾವೆಲ್ಲರೂ ಕಣ್ಣೀರಾಗಿದ್ದೇವೆ. ಅದೇ ಬಾವಿಯನ್ನು ಇಂದು ನಿಜವಾಗಿ ಕಂಡಾಗ ಎದೆ ನಡುಗಿ ಹೋಯ್ತು…

120 ಶವಗಳನ್ನು ಈ ಬಾವಿಯಿಂದ ತೆಗೆಯಲಾಗಿತ್ತಂತೆ…

‍ಲೇಖಕರು avadhi

24 August, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading