ಒಂದು ಒಳ್ಳೆಯ ಕವಿತೆಯ ಸಾಲುಗಳನ್ನು ಆರಿಸಿಕೊಂಡು ಅದಕ್ಕೊಪ್ಪುವ ಅಷ್ಟೇ ಚಂದದ ಚಿತ್ರದ ಜೊತೆ ಅದನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡವರು ವೆಂಕಟ್ರಮಣ ಭಟ್
– ವೆಂಕಟ್ರಮಣ ಭಟ್

ಕಲೆ : ವೆಂಕಟ್ರಮಣ ಭಟ್
ಕವಿತೆ : ಜ ನಾ ತೇಜಶ್ರೀ
“ಏನೇನು ಮುಚ್ಚಬಲ್ಲದು ಬಟ್ಟೆ?
ಪ್ರತಿರೋಧಕ್ಕೆ ಗೀರಿದ ಹೊಕ್ಕುಳ ಗೆರೆ
ಕಣ್ಮುಚ್ಚಿ ಒಡ್ಡಿದ ತುಟಿಯ ಒಡಕು
ಒಡೆದ ಮೊಲೆತೊಟ್ಟಿನ ಸುತ್ತ ಜುಮುಗುಡುವ ಹಲ್ಲು
ಅಂಗಾಲಿನ ಕಚಗುಳಿ
ಬೆನ್ನಿಗೆ ಹಬ್ಬಿದ ಕೈ ಬಳ್ಳಿಗಳು…
‘ಮುಟ್ಟಿಕೋ ಕೊರಳು…ಅಲ್ಲಿದೆ ನನ್ನ ಜೀವ’
ನಡುರಾತ್ರಿ ಜಾರಿದ ಹೊತ್ತಲ್ಲೆಲ್ಲೋ
ಕಿವಿಯಲ್ಲುಸುರಿ ಕುತ್ತಿಗೆಯ
ಅರಿಶಿನ ದಾರ ಜಗ್ಗಿದ ಬೆರಳುಗಳ ಹಿತ…
ಏನೇನ ಮುಚ್ಚೀತು ಬಟ್ಟೆ?” -ಜ ನಾ ತೇಜಶ್ರೀ (ಅವನರಿವಲ್ಲಿ)







uttamavaada kavite…shoshaneya pratibimba..idu yaara ariviguu baaradu…!!
ತಟ್ಟುವ, ಕಾಡುವ ಕವಿತೆ.
ತೀವ್ರ ಭಾವಕ್ಕೆ ಹಚ್ಚುವ ಕವನ.
Venkataramana Bhat avare, bhavapurna chitrakke krutagnategalu. Tejashree