’ಫೇಸ್ ಬುಕ್‌ನ ಮುಖಪುಟ ಶೇರ್ ಮಾರ್ಕೆಟ್ ಏಜೆಂಟ್ ಗಳಂತೆ..’

ಹೀಗೊಂದು ಆಯಾಮ….

ಶೇಷಗಿರಿ ಜೋಡಿದಾರ್


ಅತ್ಯತ್ತಮ ಮಟ್ಟದ ಆದರೆ ಅಗ್ಗವಾಗಿರುವ,
ಮೆದುಳಿಗೆ ಗ್ರಾಸವಾಗ ಬಲ್ಲ ಆದರೆ ತ್ರಾಸವಾಗದ
ತಾಜಾ,ತಾಜ ಹಣ್ಣು….ತರಕಾರಿ,ತಿನಿಸು, ದಿನಸಿಯನ್ನು
ಆಯಲು ಹೊರಟಿರುವ ಮಹಾ ಸೂಕ್ಷಮತಿ ಓದುಗ…..
ಎಗ್ಗು ಮುಗ್ಗಿಲ್ಲದ ಓಂಟಿ ಸಲಗ….
ಕಣ್ಣಿಗೆ ಹಬ್ಬ ಮಾತ್ರ ಬಣ್ಣದ ಜಾತ್ರೆ
ತಟಸ್ಥ ಮಿದುಳು ನಿಶ್ಚಿಂತ ನಿಶ್ಚಲ ಪಾತ್ರೆ
ಹೃದಯದ ಬಡಿತ ಸ್ಥಿರವಾಗಿರಬೇಕಷ್ಟೇ….
ನಾಳೆಗಳ ಮುಖ ಪುಸ್ತಕ ಸೇರಲು….
ಕಲಾಕೃತಿಗಳ ಹುಡುಕಾಟ, ವಾಟ್ಸಪ್ ನ ಬಯಲಾಟ
ಮೆಸೆಂಜರ್ ನಲ್ಲಿ ಚೆಲ್ಲಾಟ, ಯವ್ವನ ಹಾರಾಟ
ನೋಡಬಹುದು ಮರೆಯಬಲ್ಲ ಮುಖಗಳನು..
ನಿಜ…ಇದು ಫೇಸ್ ಬುಕ್…. ನ ಮುಖಪುಟ
ಶೇರ್ ಮಾರ್ಕೆಟ್ ಏಜೆಂಟ್ ಗಳಂತೆ
ಸಿಸ್ಟಮ್ ಮುಂದೆ ಕೂತು ಲೈಕ್ ಗಳ ಕುಸಿತ ನೋಡಿ
ಕಂಗಾಲಾಗಿ ಸಾಹಿತ್ಯದ “ಮಾರುಕಟ್ಟೆಯಲ್ಲಿ ಏರು ಪೇರು”
ಎಂದು ದಪ್ಪ ಅಕ್ಷರಗಳಲ್ಲಿ ದಿನಪತ್ರಿಕೆಯಲ್ಲಿ
ಮಾರನೆಯದಿನ ಮುಖ್ಯ ಸುದ್ದಿ…
ಆಗಬಹುದೆಂದು ಈಗಲೇ ಕಂಗಾಲಾಗಿರುವ ಲೇಖಕ….
ವ್ಯಕ್ತಿತ್ವ ತೀರಾ ಪಾರದರ್ಶಕ, ಅದರೂ
ಅಂದುಕೊಂಡಿದ್ದಾನೆ ಲೋಕಕೇ ಮಾರ್ಗದರ್ಶಕ
ಮುಖಪುಸ್ತಕದಲ್ಲಿ ಹರಡಿರುವ ಕವನಗಳನ್ನೆಲ್ಲಾ ಕೆದಕಿ,
ಅನುಕ್ರಮದಲ್ಲಿ ಜೋಡಿಸಿ, ವಿಂಗಡಿಸಿ…ಎಲ್ಲವನ್ನು
ನಿಷ್ಪಕ್ಷಪಾತದಿಂದ, ಪದವನ್ನು ನಿರ್ಲಕ್ಷಿಸದೆ
ಓದಿ, ಬಾರಿ,ಬಾರಿ ಓದಿ…..
ಲೈಕ್, ಎರಡು ಪದಗಳ ಉದ್ಗಾರಯೋಗ್ಯ,
ಮೆಚ್ಚುಗೆಪದಗಳ, ಮರೆಯದೆ…..
ಮೆಲಕುಹಾಕಬಲ್ಲ ಸಾಲುಗಳ ಉಲ್ಲೇಖ ಸಹಿತ
ವಿಮರ್ಶೆಯೋಗ್ಯವೇ?
ಎಂಬ ಗೊಂದಲದ ದ್ವಂದದಲ್ಲೇ ಗಾಂಜಹೊಡೆದವನಂತೆ,
ಅಮಲಿನಲ್ಲೇ ಕಾಮೆಂಟ್ ಹಾಕಿ,
ನ್ಯೂಟನನಂತೆ ಬೋರೆಹಣ್ಣು ಬೀಳಲು
ಕಾದು ಕುಳಿತ ವಿಮರ್ಶಕ ವಿದೂಶಕ….
 

‍ಲೇಖಕರು G

May 12, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

    • ಶೇಷಗಿರಿ ಜೋಡಿದಾರ್

      ನನ್ನ ಹೆಸರ ಪ್ರಿಯ/ ನಾರ್ಸಿಸ್ ನನ್ನ ಅವಳಿ ಸಹೋದರ. udayakumar… very nice comment… I liked it.. thank you..

      ಪ್ರತಿಕ್ರಿಯೆ
  1. udayakumar habbu

    ಫೇಸ್ ಬುಕ್ ನಲ್ಲಿ ಬರೆಯುತ್ತೇನೆ ಜನ ನನ್ನ ಕವಿತೆ ಓದಲೆಂದು/ ಆದರೆ ಲೈಕ್ ಸಿಕ್ಕರಷ್ಟೇ ಸಾಕು ಎಂದು ಅಲ್ಪ ತೃಪ್ತ ನಾನಲ್ಲ/ ಫೇಸ್ ಬುಕ್ ಕವಿಗೋಷ್ಠಿ ಇತ್ತಂತೆ ನನಗೆ ಯಾರೂ ತಿಳಿಸಲೇ ಇಲ್ಲ. ಯಾಕೆಂದರೆ ನಾನು ಪ್ರೀತಿ, ಪ್ರಣಯ, ಪ್ರೇಮದ ಬಗ್ಗೆ ಬರೆದವನೆ ಅಲ್ಲ/ ಯಾಕೆಂದರೆ ನನಗೆ ಆ ಅನುಭವ ಇಲ್ಲ/ ಯಾಕೆ ಬರೆಯುತ್ತೇನೆಂದರೆ ನನ್ನನ್ನು ಎಲ್ಲರೂ ಹೆಚ್ಚಾಗಿ ನನ್ನ ಹೆಸರನ್ನಾದರೂ ನೋಡಲೆಂದು/ ನಾನು ನನ್ನ ಪ್ರಿಯ ಮತ್ತು ನನ್ನ ಹೆಸರ ಪ್ರಿಯ/ ನಾರ್ಸಿಸ್ ನನ್ನ ಅವಳಿ ಸಹೋದರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: