ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುನ್ನೂರ್ ಜೊತೆ ‘ಫಟಾ ಫಟ್’

ಹಿರಿಯ ಪತ್ರಕರ್ತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹಿಪಾಲರೆಡ್ಡಿ ಮುನ್ನೂರ್ ಅವರು ಕಲ್ಯಾಣ ಕರ್ನಾಟಕದಿಂದ ಹೊಸ ಸಾಹಿತ್ಯ ಪತ್ರಿಕೆ ‘ಋತುಮಾನ’ಆರಂಭಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ‘ಅವಧಿ’ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ.

ಎಡಿಟರ್ ಆಗ್ತಾ ಇದೀರಂತೆ ?
 ಆ ದಾರಿಯಲ್ಲಿದ್ದೇನೆ.


ಪತ್ರಿಕೆ, ಚಾನಲ್ ರಿಪೋರ್ಟರ್ ಸ್ಥಾನದಿಂದ ಸಡನ್ನಾಗಿ ‘ಎಡಿಟರ್’ ಆಗಿ ಪ್ರಪೋಷನ್ ಹೇಗಾಯ್ತು ?
 ನಮ್ಮೊಳಗಿನ ಕ್ರೀಯೇಟಿವಿಟಿಗೆ ಅದು ಪೂರಕ ಅನ್ಕೊಳ್ತೀನಿ.


ಕಲ್ಯಾಣ ಕರ್ನಾಟಕದಲ್ಲಿ ಇದು ಮೊದಲ ಸಾಹಸವಾ ?
 ಇಲ್ಲ. ಇದನ್ನು ಹಿರಿಯರು ಮಾಡಿದ್ದು. ನಾನು ಮೂರು ಅಥವಾ ನಾಲ್ಕನೇ ದವನು ಅನ್ನಿಸುತ್ತೆ.


ಋತುಮಾನ’ ಅಂತಾನೇ ಯಾಕೆ ?
 ಕಾಲಮಾನಕ್ಕೆ ತಕ್ಕಂತೆ ಬದಲಾವಣೆಯ ಸಂಕೇತವಾಗಿರೋದ್ರಿಂದ.

ಯಾವಾಗಿಂದ ರಂಗ ಪ್ರವೇಶ ?
 ಬಹುಶಃ ಸೆಪ್ಟೆಂಬರ್ ಮೊದಲ ವಾರ.

‍ಲೇಖಕರು avadhi

20 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading