ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೊ ಸಿಎನ್ನಾರ್ ಅವರಿಗೆ ಪ್ರತಿಭಾ ನಂದಕುಮಾರ್ ಪತ್ರ

ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು.

ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ 

ಈ ಪ್ರತಿಕ್ರಿಯೆಗೆ ಪ್ರೊ ಸಿ ಎನ್ ಆರ್ ಕೊಟ್ಟ ಉತ್ತರ ಇಲ್ಲಿದೆ

‘ಅವಧಿ’ ಓದುಗರಾದ ಪಲ್ಲವಿ ಹೆಗಡೆ ಅವರ ಅನಿಸಿಕೆ ಇಲ್ಲಿದೆ-

ಬಿ ಸುರೇಶ್ ಬರೆದಿರುವುದು ಇಲ್ಲಿದೆ-

ಜೋಗಿ ಹಾಗೂ ಸಿಎನ್ನಾರ್ ಅವರ ಚರ್ಚೆಯನ್ನು ಇಟ್ಟುಕೊಂಡು ಪ್ರತಿಭಾ ನಂದಕುಮಾರ್ ಅವರು ನೀಡಿದ ಪ್ರತಿಕ್ರಿಯೆ ಇದು

ಈ ಚರ್ಚೆಯಲ್ಲಿ ನೀವೂ ಭಾಗವಹಿಸಬಹುದು

avadhimag@gmail.com ಗೆ ನಿಮ್ಮ ಅನಿಸಿಕೆಯನ್ನುಕಳಿಸಿಕೊಡಿ

ಪ್ರತಿಭಾ ನಂದಕುಮಾರ್

ಸಿ ಎನ್ ಆರ್ ಸರ್

ಬಹುಶಃ ನಿಮಗೆ ಜೋಗಿಯವರ ಮಾತು ಅರ್ಥವಾಗಿಲ್ಲ ಅನ್ನಿಸುತ್ತದೆ. “ಒಂದು ಜೀವನವನ್ನು ನೋಡಿದಾಗ, ಓದಿದಾಗ, ಗ್ರಹಿಸಿದಾಗ ಅದರಿಂದ ವೈಚಾರಿಕತೆ ಹುಟ್ಟಬೇಕೇ ವಿನಾ, ವೈಚಾರಿಕತೆಯು ಮಾತಿನಲ್ಲಿ ವ್ಯಕ್ತವಾದರೆ ಅದು ಶುಷ್ಕವೂ ನೀರಸವೂ ಆಗುವುದಿಲ್ಲವೇ?”

ಹತ್ತು ಕಂತುಗಳಲ್ಲಿ ಬಂದ ಗೀತೋಪದೇಶ, ಯಕ್ಷಗಾನದ ಸಂವಾದ, “ಬಭ್ರುವಾಹನ” ಚಿತ್ರದಿಂದ ಪ್ರಾರಂಭಿಸಿ ಇತ್ತೀಚಿನ “ಪಿಂಕ್” ಹಿಂದಿ ಚಿತ್ರದ ವರೆಗೆ ದೀರ್ಘ ಸಂಭಾಷಣೆಗಳು ಹಾಗೂ ’ಭಾಷಣ’ಗಳು ಜೋಗಿ ಹೇಳಿದ ಹಾಗೆ ಮಾತಿನಲ್ಲಿ ವ್ಯಕ್ತವಾದ ವೈಚಾರಿಕತೆ ಅಷ್ಟೇ.

ಜೋಗಿ – ಸಿನಿಮಾದಲ್ಲಿ ವೈಚಾರಿಕತೆಯನ್ನು ತೋರಿಸುವ ಉತ್ಕೃಷ್ಟ ವಿಧಾನಗಳಿವೆ /ಉದಾಹರಣೆಗಳಿವೆ. ಅದರಲ್ಲಿ ಗೆದ್ದವರನ್ನೇ ಉತ್ತಮ ನಿರ್ದೇಶಕ ಅನ್ನುವುದು. ಬರಹವು ಹೇಗೆ ಓದುಗನನ್ನು ವಿಚಾರ ಚಿಂತನೆಗೆ ಹಚ್ಚುತ್ತದೆಯೋ ಹಾಗೆಯೇ ಚಲನ ಚಿತ್ರವೂ ನೋಡುಗನನ್ನು ವಿಚಾರಕ್ಕೆ ಹಚ್ಚುತ್ತದೆ. ವೈಚಾರಿಕತೆ ಅಂದ ತಕ್ಷಣ ಅದು ಏಕರೂಪದ್ದು ಮತ್ತು ಬರಹದಲ್ಲಿರುವುದು ಎಂದುಕೊಂಡರೆ ಇಂತಹ ತೀರ್ಮಾನಗಳು ಉಂಟಾಗುತ್ತವೆ.

ಬೇರೆ ಬೇರೆ ಕಲೆಯ ವೈಚಾರಿಕತೆಯ ಸ್ವರೂಪ ಬೇರೆ ಬೇರೆ ರೀತಿಯದು. ಅದನ್ನು ಗುರುತಿಸದಿದ್ದರೆ ಕಾದಂಬರಿಯ ಸಾಲುಗಳು ಸಿನಿಮಾದಲ್ಲಿ ತರಲು ಸಾಧ್ಯವಿಲ್ಲ ಅನ್ನುವ ವಾದ ಹೊರಡುತ್ತದೆ. ಒಂದು ಪೇಂಟಿಂಗ್ ಒಂದು ನೃತ್ಯ ಒಂದು ಸಂಗೀತ ಕೂಡಾ ವಿಚಾರವಾದದ ವಾಹಿನಿಯಾಗಬಲ್ಲದು/ಆಗಿದೆ. ಅದನ್ನು ಭಿನ್ನ ನೆಲೆಯಲ್ಲಿ ಗುರುತಿಸಬೇಕು.

ಚೀನಾದ ಸಮಾಜವಾದದ ಕುರಿತಾದ ವಿಮರ್ಶಾತ್ಮಕ ಚಲನ ಚಿತ್ರಗಳು (ಉದಾಹರಣೆಗೆ ಟು ಲಿವ್ -https://www.youtube.com/watch?v=ZB7HYhUpDz8&t=550s ) ನಿರ್ದೇಶಕನ ವೈಚಾರಿಕತೆಯನ್ನು – ಅಂದರೆ ನೋಡುಗನ ಜೊತೆಗಿನ ಸಂವಾದ ಸಾಧ್ಯವಾಗಿಸುವ – ಪರಿಣಾಮಕಾರಿಯಾಗಿ ಸೆರೆ ಹಿಡಿದಿವೆ. ಅದನ್ನೇ ಲೇಖನವಾಗಿ /ಅಥವಾ ಕಾದಂಬರಿಯಾಗಿ ಬರೆದರೆ – ನೀವು ಉದಾಹರಿಸಿದ ಪುಟದಂತೆ – ಉತ್ಕೃಷ್ಟ ವೈಚಾರಿಕತೆಯ ಉದಾಹರಣೆ ಆಗುತ್ತದೆ.

-ಪ್ರತಿಭಾ ನಂದಕುಮಾರ್

‍ಲೇಖಕರು avadhi

10 May, 2019

2 Comments

  1. ಶಿವರಾಜ್ ಬ್ಯಾಡರಹಳ್ಳಿ

    ಈ ಚರ್ಚೆಯ ಜೊತೆಗೆ ಸಿನೆಮಾ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

  2. Aakash

    All, This novel also says about gays in the end. Mookajji’s view about gays is something that we need to discuss. Author Vasudendra has done that in his one of the articles. Has movie included this topic ? ( I have not seen movie yet).

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading