ಪ್ರೇಮಾ ಹೊಸಮನಿ, ಪ್ರಶಾಂತ ಹಿರೇಮಠ್‌ಗೆ ರಂಗಪ್ರಶಸ್ತಿ

ರಂಗ ಸಂಗಮ ಕಲಾ ವೇದಿಕೆ ನೀಡುವ ರಾಜ್ಯಮಟ್ಟದ ಪ್ರಶಸ್ತಿಗೆ ಪ್ರಶಾಂತ ಹಿರೇಮಠ್‌ ಹಾಗೂ ಪ್ರೇಮಾ ಹೊಸಮನಿ ಅವರನ್ನು ಆಯ್ಕೆ ಮಾಡಲಾಗಿದೆ.

‘ಎಸ್.ಬಿ. ಜಂಗಮಶೆಟ್ಟಿ ರಂಗ ಪುರಸ್ಕಾರ’ವನ್ನು ಹಿರಿಯ ಕಲಾವಿದ ಪ್ರಶಾಂತ ಹಿರೇಮಠ್‌ ಅವರಿಗೆ ಹಾಗೂ ‘ಮಾತೋಶ್ರೀ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪುರಸ್ಕಾರ’ ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ ಪ್ರೇಮಾ ಹೊಸಮನಿ ಅವರಿಗೆ ಘೋಷಿಸಲಾಗಿದೆ.

ಜುಲೈ 18 ರಂದು ಕಲಬುರಗಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿ ತಲಾ ೧೦ ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರ, ಸ್ಮರಣ ಫಲಕವನ್ನು ಹೊಂದಿದೆ.

ಪ್ರೇಮಾ ಹೊಸಮನಿ

ತುಮಕೂರಿನ ಪ್ರೇಮಾ ಹೊಸಮನಿಯವರು ಐದು ವರ್ಷದ ಬಾಲಕಿಯಾಗಿದ್ದಾಗಲೇ ಗುಳೇದಗುಡ್ಡದ ಹುಚ್ಚಪ್ಪನವರ ವೃತ್ತಿನಾಟಕ ಕಂಪನಿಯಲ್ಲಿ ರಂಗಭೂಮಿ ಪ್ರವೇಶಿಸಿದರು. ೧೯೫೩ರಲ್ಲಿ ಜನಿಸಿದ ಪ್ರೇಮಾ ಹೊಸಮನಿಯವರು ಗುಬ್ಬಿ ವೀರಣ್ಣ ಕಂಪನಿ, ಹುಚ್ಚಪ್ಪನವರ ನಾಟ್ಯ ಸಂಘ, ಶಾರದಾ ಸಂಗೀತ ನಾಟ್ಯ ಸಂಘ, ಕೆ.ಬಿ.ಆರ್. ಡ್ರಾಮಾ ಕಂಪನಿ, ಏಣಗಿ ಬಾಳಪ್ಪನವರ ಕಂಪನಿ ಹೀಗೆ ಹಲವು ಕಂಪನಿಗಳಲ್ಲಿ ರಂಗಸೇವೆ ಸಲ್ಲಿಸಿದ್ದಾರೆ.

ʻಮಲಮಗಳುʼ, ʻತಾಳಿ ತಕರಾರುʼ, ʻಸಂಪತ್ತಿಗೆ ಸವಾಲುʼ, ʻಬಸ್ ಕಂಡಕ್ಟರ್ʼ, ʻಚೆನ್ನಪ್ಪ ಚೆನ್ನೇಗೌಡʼ ನಾಟಕಗಳಲ್ಲಿ ಉತ್ತಮ ನಟನೆ ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಮಾರು ೫೦ ವರ್ಷಗಳಿಂದ ರಂಗಭೂಮಿಯ ಸೇವೆ ಸಲ್ಲಿಸಿರುವ ಇವರಿಗೆ ಈ ಬಾರಿಯ ಮಾತೋಶ್ರೀ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪ್ರಶಾಂತ ಹಿರೇಮಠ್‌

ವೃತ್ತಿರಂಗಭೂಮಿಯ ಹಿರಿಯ ಕಲಾವಿದ ಪ್ರಶಾಂತ ಹಿರೇಮಠ್‌ ಅವರು ಮೂಲತಃ ಗದಗ ಜಿಲ್ಲೆಯವರು. ಇವರು ಧಾರವಾಡದಲ್ಲಿ ಇಂಜನಿಯರಿಂಗ್ ವ್ಯಾಸಂಗ ಮಾಡುತ್ತಿರುವಾಗಲೇ ರಂಗಭೂಮಿ, ಸಿನಿಮಾ, ಸಾಹಿತ್ಯ ಮತ್ತು ಸಂಗೀತದ ಗೀಳು ಹಚ್ಚಿಕೊಂಡವರು. ಇದೇ ಸಂದರ್ಭದಲ್ಲಿ ಆರಂಭವಾದ ಮೈಸೂರು ರಂಗಾಯಣಕ್ಕೆ ಪಾದಾರ್ಪಣೆ ಮಾಡಿದರು. ಸಿ. ಬಸವಲಿಂಗಯ್ಯ, ಚಿದಂಬರರಾವ್ ಜಂಬೆ, ಸಿ.ಜಿ.ಕೆ, ಪ್ರಕಾಶ ಬೆಳವಾಡಿ, ಫ್ರಿಡ್ಜ್ ಬೆನಿವೀಟ್ಸ್ ಇಂತಹ ಅನೇಕ ರಂಗ ದಿಗ್ಗಜರ ನಿರ್ದೇಶನದಲ್ಲಿ ಪಳಗಿದವರು.

ʻಚಂದ್ರಹಾಸʼ, ʻತಲೆದಂಡʼ, ʻಹ್ಯಾಮ್ಲೆಟ್ʼ, ʻಗೋರಾʼ, ʻಶೂದ್ರ ತಪಸ್ವಿʼ, ʻಪರ್ವʼ ಇನ್ನೂ ಅನೇಕ ನಾಟಕಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಹಲವು ನಾಟಕಗಳನ್ನು ಅನುವಾದಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಈ ಬಾರಿಯ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ರಂಗಸಂಗಮ ಕಲಾವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

‍ಲೇಖಕರು avadhi

July 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: